ಈತನೆ ಕಾಣಿರೊ ಮಧ್ವಮುನಿ ಪ.
ಪರಿಪರಿ ಶ್ರುತಿಗಳೆಂಬ ಗುಹೆಗಳಲಿ ಕೇ-ಸರಿಯಂತೆ ಚರಿಸುತ್ತಹರಿಯೆ ಸರ್ವೋತ್ತಮನೆಂಬ ಘೋಷಗಳಿಂದದುರುಳ ವಾದಿಗಳೆಂಬ ನರಿಗಳೋಡಿಸಿದಾತ 1
ಸಕಲಾಗಮಗಳೆಂಬ ಶರಧಿಯೊಳಗೆಯುಕುತಿಯಿಂದಲಿ ಮಥಿಸಿಅಕಳಂಕ ಶ್ರೀಹರಿಯೆಂಬ ರತ್ನವ ಕಂಡುಮಕುಟದೊಳಿಟ್ಟು ಲೋಕದಿ ಮೆರೆಸಿದಾತ 2
ವೇದಸಾರವೆಂಬ ಈಶತತ್ವವಾದಸುಧೆಯ ಕಲ್ಪಿಸಿಕೊಂಡುಆದಿಮೂರುತಿ ಶ್ರೀ ಹಯವದನನ ದಿವ್ಯಪಾದ ಸೇವಕನಾದ ಮಧ್ವಮುನಿಯೆಂಬಾತ 3