ಸಾರಿದ ಸಿರಿವರ ಸಡಗರದಿಂದಲಿ ಕೌರವಪುರಕೆ ಪ
ಧೀರ ಪಾಂಡವರ ಕೋರಿಕೆ ಸಲ್ಲಿಸಲು
ಸಾರಸ ನಯನನು ಅ.ಪ.
ಪ್ರಾತರಾಹ್ನೀಕವ ತಾ ತೀರಿಸಿ ವರ ಪೀತ ವಸನ ಧರಿಸಿ
ವೀತರಾಗ ಸಂಪ್ರೀತಿಯಲಿ ಫಾಲದಿ ತಾ ತಿಲಕವ ಧರಿಸಿ
ಹೇಮ ಮಕುಟೋತ್ತಮಾಂಗದಿ ಧರಿಸಿ
ಜ್ಯೋತಿರ್ಮಯಗತಿ ಪ್ರೀತಿಯಿಲಿ ತರುಣಿರಾ
ರುತಿ ಬೆಳಗಲು ತಾ ಸುಮುಹೂರ್ತದಿ 1
ಅಂಡಜಾಧಿಪನು ಪ್ರಕಾಂಡ ಪೀಠನುದ್ದಂಡರಥವ ತರಿಸಿ
ಚಂಡಗದಾ ಕೋದಂಡಾದ್ಯಾಯುಧ ಬಂಡಿಗೆಯೊಳಗಿರಿಸಿ
ಮಾರ್ತಾಂಡನಂತೆ ಮೆರೆಸಿ
ಹಿಂಡುಬಳಗಗಳ ಕಂಡಾದರಿಸುತ
ಪಾಂಡುಸುತರ ಬೀಳ್ಕೊಂಡು ಭರದಲಿ 2
ಸುಖದಿ ಪ್ರಯಾಣ ಬೆಳಸಿ
ಪ್ರಕಟ ಪಥದಿ ಮುನಿನಿಕರಂಗಳ ಮನವಿಕಸಿತಗೊಳಿಸಿ
ಶುಕಪಿಕಾದಿ ಖಗಪಿಕರಂಗಳರವ ಸುಖವ ಮನದಿ ನಿಲಿಸಿ
ಸಕಲಾಂತರ್ಗತ ಕರಿಗಿರೀಶ ತಾ ಯುಕುತಿಯಿಂದ ಸಂಧಾನವ ನಡೆಸಲು 3