ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಷ್ಟೆಂದು ಪೇಳುವೆನು ನಮ್ಮುಡುಪಿಯ ಕೃಷ್ಣನÀ ಮಹಿಮೆಯನು ಅಷ್ಟೋತ್ತರ ಶತಯೀರೆಂಟು ಸಾವಿರ ಶ್ರೇಷ್ಠ ಮಹಿಷಿಯರ ಸೇವೆ ಕೈಗೊಂಬುದ ಪ. ದ್ವಾರಕೆಯೊಳಗೆ ನೆಲೆ ತೋರುತಲಿದ್ದು ಸ್ವಾರಿ ಹೊರಟ ಮೇಲೆ ಕಾರುಣ್ಯನಿಧಿ ಕಡಲೊಳು ಬಂದು ಕಮಲಾಸ- ನಾರೂಹನಾಗುವ ನರಯತಿಯನು ಕಂಡು ಘೋರತರ ಸಂಸಾರಕೂಪವ ಸೇರಿ ಬಳಲುವ ಸಕಲಸುಜನೋ- ದ್ಧಾರ ಮಾಡುವೆನೆಂದು ಮೂರ್ತಿಯ ತೋರುತಿಲ್ಲಿಹ ತ್ರಿಭುವನೇಶನ 1 ಪಾಪಿಷ್ಠ ಕಲಿಯಾಳುತ್ತಿರುವ ಕಾಲದಲಿ ಸ್ತ್ರೀ ರೂಪದಿಂದಲಿ ಪೂಜೆಯ ಕೊಳಲು ಸುಜ- ನಾಪವಾದದ ಭೀತಿಯ ತಾನೆನಸಿ ಮನದಲಿ ಕಾಪುರುಷನನು ಕಣ್ಣ ಕಟ್ಟಿ ಮಹಾಪರಾಧಿಗಳೊಳಗೆ ಸೇರಿಸಿ ಭೂಪತಿಗಳಲ್ಲಿರುವ ಯತಿವರ ರೂಪರೊಡನಾಡುವ ಪರಾತ್ಮನ 2 ಪಾಂಡುಕುಮಾರರು ಪರಿಯಾರು ಕ್ರಮದಿಂದ ಹೆಂಡತಿಯಾಳ್ದರೆಂದು ದೂಷಿಸುವರ ಕಂಡು ತಾ ಮನಕೆ ತಂದು ಕಾರುಣ್ಯ ಸಿಂಧು ಕುಂಡಲೀಂದ್ರ ಗಿರೀಂದ್ರ ನಿಜಪದ ಪುಂಡರೀಕ ಛಾಯಗಳ ಮತಿ- ವತ್ಸರ ದ್ವಯ ಖಂಡನೆ ಕೈಕೊಂಡು ಮೆರಪನ 3
--------------
ತುಪಾಕಿ ವೆಂಕಟರಮಣಾಚಾರ್ಯ