ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನನೆ ನಂಬಿದೆ ನೀರಜನಯನ ನಿನ್ನ್ಹೊರತು ಎನಗನ್ಯ ಗತಿಯಿಲ್ಲ ಹರಿಯೆ ಪ ನಿನ್ನ ಪಾದವೆ ಎನಗೆ ಮಾತಾಪಿತೃಯೆಂಬೆ ನಿನ್ನ ಪಾದವೆ ಎನಗೆ ಬಂಧುಬಳಗವೆಂಬೆ ನಿನ್ನ ಪಾದವೆ ಎನಗೆ ಸಕಲಸಂಪದವೆಂಬೆ ನಿನ್ನ ಪಾದವೆ ಎನಗೆ ನಿಖಿಲಬಲವೆಂಬೆ 1 ನಿನ್ನ ಕರುಣವೆ ಎನಗೆ ಭವತರಿವ ಶಸ್ತ್ರೆಂಬೆ ನಿನ್ನ ಕರುಣವೆ ಎನಗೆ ಸ್ಥಿರಸುಖವುಯೆಂಬೆ ನಿನ್ನ ಕರುಣವೆ ಎನಗೆ ರಕ್ಷಿಸುವ ದೊರೆಯೆಂಬೆ ನಿನ್ನ ಕರುಣವೆ ಎನಗೆ ಪರಮ ತೃಪ್ತ್ಯೆಂಬೆ 2 ನಿನ್ನ ನಾಮವೆ ಎನಗೆ ಅಮೃತವೆಂಬೆ ನಿನ್ನ ನಾಮವೆ ಎನ್ನ ಭವರೋಗಕ್ಕ್ವೈದ್ಯೆಂಬೆ ನಿನ್ನನಾಮ ಸ್ಥಿರಕೊಟ್ಟು ಪ್ರೇಮದಿಂ ಸಲಹು ಶ್ರೀರಾಮ ನೀನೆ ಎನಗೆ ಪರದೈವಯೆಂಬೆ 3
--------------
ರಾಮದಾಸರು