ನೀನೇ ಸಕಲವೆನಗೆ ಶ್ರೀರಾಮಚಂದ್ರ
ನೀನೇ ದೊರೆಯರಸನೊ ಪ
ಶ್ರೀನಿಧಿಯೆ ನಿನ್ನವರುಸತತ ಸಾನುರಾಗದ ಬಳಗವಹುದೈ
ದೀನಜನಮಂದಾರ ನೇಹಂ ಶ್ರೀನಿಕೇತನ ಸತ್ಯಸಾರ ಅ.ಪ
ತಾಮತಿಯು ಶ್ರೀ ಮನೋಹರ ಸಹಜರೆಲ್ಲ ಪ್ರೇಮ ಪಂಚ
ರಾಮರೂಪವ ತೋರ್ಪನಾಡಿಯು 1
ಧನ್ಯ ಶರೀರವು ಮಾನ್ಯಗೆ ತಾಮಸದ ಸರೃಹವೂ
ಕಣ್ಣನಿದ್ರೆಯು ಯೋಗಮುದ್ರೆಯು
ಚಿಣ್ಣನ ಸಂಚರಂಗಳು ಸ್ವಾಮಿ ನಿನಗೆ ಪ್ರದಕ್ಷಿಣೆ 2
ಬಾಲನ ಮಾತುಗಳು ವೇದೊಕ್ತ ಸಶೀಲನ ಸ್ತೋತ್ರಗಳು
ಕಾಲಂಕಾಲಗಳಲ್ಲಿ ಗೈಯುವ ಕಾರ್ಯಗಳು ಪರಮಾತ್ಮ ಸೇವೆಯು
ಶ್ರೀಲತಾಂಗಿಯ ಲೋಲ ಧ್ಯಾನಿಪೆ ಪಾಲಿಸೈ ಜಾಜೀಶ ಕೇಶವ3