ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಕು ಸ್ವಾಮಿ ಲೋಕವಾಸವು ಪ ಬೇಕು ನಿಮ್ಮ ಚರಣಸೇವೆ ಲೋಕದಿಂದ ಪಾರು ಮಾಡೆನ್ನ ಅ.ಪ ಕಷ್ಟದಿಂದಿನ್ನು ಜೀವಿಸಲು ನಾ ನೆಷ್ಟು ಪಾಪವ ಮಾಡುವೆನೊ ಇಷ್ಟೆ ಸಾಕಯ್ಯ ಕಷ್ಟನಿವಾರ ಸೃಷ್ಟಿಯಿಂದೆನ್ನ ಪಾರುಮಾಡೊ 1 ಹಲವು ಭ್ರಾಂತಿಗಳಲಿ ನಾನು ತೊಳಲಿಬಳಲಿ ಚಲನೆಗೆಡುತ ದುರಿತ ಸಾಕೈ ಇಳೆಯಿಂದೆನ್ನನು ಗೆಲಿಸು ದೇವ 2 ಸಕಲವಿಧದಿ ದು:ಖರೂಪ ಕಾಕುಸಂಸಾರ ಬಲು ತಾಪ ಭಕುತಜನಪ್ರಿಯ ಮುಕ್ತಿಸೋಮ ಮುಕುತಿ ಕರುಣಿಸು ನಿರುತ ಶ್ರೀರಾಮ 3
--------------
ರಾಮದಾಸರು