ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಋಗ್ವೇದ ಪ್ರಿಯ ವಿಠಲ | ಸದ್ಗುಣಾರ್ಣವನೇ ಪ ಋಗ್ವಿನುತ ನೀನಾಗಿ | ಈಕೆಯನು ಪೊರೆಯೋ ಅ.ಪ. ವೇದಾಧಿಕಾರವನು | ನೀ ದಯದಿ ತ್ಯಜಿಸದೆಮೋದದಿಂ ತೋರಿ | ಋಗ್ವೇದ ವಾಚಿಸಿದೇ |ಮೋದ ಮುನಿ ಮತದಲ್ಲಿ | ಸಾಧಿಸಿವಳಲಿ ದೀಕ್ಷೆಭೇದ ಪಂಚಕ ತಿಳಿಸಿ | ಉದ್ಧರಿಸೊ ಇವಳಾ 1 ಹರಿದಾಸ್ಯ ಕಷ್ಟವೆನೆ | ಹಿರಿಯರ ಮತವಿಹುದುತರಳೆ ಆದ ಕಾಂಕ್ಷಿಪಳು | ಪೂರ್ವ ಪುಣ್ಯದಲೀಮುರವೈರಿ ನೀನಾಗಿ ಕರುಣಿಸುತ ತವದಾಸ್ಯಪರಿಹರಿಸು ಭವನೋವ | ಕಾರುಣ್ಯಮೂರ್ತೇ 2 ಭವ | ಮೋಚನವ ಗೈಯ್ಯೋ 3 ಲೌಕಿಕವು ವೈದಿಕವು | ಸಕಲವರ್ಣಾತ್ಮಕನೆವಾಕು ಸಕಲವು ತವ ಆ | ಲೌಕಿಕದ ಮಹಿಮಾವಾಕಾಗಿ ವರ್ತಿಸುತ | ಬೇಕಾದ ವರ ನೀಡಿನೋಕ ನೀಯನೆ ಕಾಯೊ | ಈಕೆಯನು ಹರಿಯೇ 4 ಭಾವಿ ಮರುತರ ಪ್ರೀಯ | ಆವಾವ ಕಾಲಕ್ಕುದೇವ ತವ ಸ್ಮøತಿಯಿತ್ತು | ಕಾವುದೀಕೆಯನೂನೋವು ಸುಖಗಳ ಸಮತೆ | ಭಾವದಲಿ ಅನುಭವಿಪಭಾವ ಕೊಡುವುದು ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಜಗದ ಜೀವರನುದರದಲಿಟ್ಟು ಕರುಣಾಮೃತದಿ | ಬಗೆಬಗೆಲಿ ಸಲಹುಲೇಹ ತಾಯಿ ನೀನೇ | ಮಗುಳೆ ಮೂಲ ಪ್ರಕೃತಿಯಲಿ ಬೀಜವಿಟ್ಟು ಮೂ | ಜಗವ ಪುಟ್ಟಸುತಿಹ ತಂದೆ ನೀನೇ | ಮಿಗಿಲಾಗಿ ಬಂದ ದುರಿತಂಗಳ ನಿವಾರಿಸುವ | ಭಾಗವತರಿಗೆ ಅನಿಮಿತ್ತ ಬಂಧು ನೀನೇ 1 ಸುಗಮದಧಿ ದೈವತಾ ರೂಪದಲ್ಲಿ ಕರಣೇಂದ್ರಿ- ನಿಗಮಾಗ ಮಗಳಿಂದ ಸ್ತುತಿಸುತ ಸುಜ್ಞಾನ | ದುಗಮದಿರುವ ಗುರುರೂಪ ನೀನೇ | ಭಕುತಿಯಲಿ ವಿಧಿಮರುತ ಶಿವಗರುಡ ಫಣಿಪೇಂದ್ರಾ | ದಿಗಳು ಪೂಜಿಪ ಕುಲದೈವ ನೀನೇ 2 ಹಲವು ಜನುಮದಿ ಸಂಗಡಿಗನಾಗಿ ಸಮತೆಯಲಿ | ಸಲಿಸಿ ಬಯಕೆಯ ಕಾವ ಗೆಳೆಯ ನೀನೇ | ಒಲಿದನ್ನ ವಸ್ತ್ರ ಸಂಪದ ಸಕಲವರ ಪುಣ್ಯ | ಫಲದಂತೆ ನೀಡುತಿಹ ಸ್ವಾಮಿನೀನೇ | ಜಲಜಾಕ್ಷ ಅದುಕಾರಣ ಎನಗೆ ಸಕಲವು ನೀನೇ | ಸಲಹು ಭಕುತಿಯನಿತ್ತು ಗುರು ಮಹಿಪತಿ ಪ್ರಭು3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ | ಜಯ ಹರಿ ವಿಠಲಾ ಪ ರಾಜವದನ ಕರುಣಾಲವಾಲಾ ಅ.ಪ ಪಾತಕ ಪರಿಹಾರ ಗೀತ ಸುಧಾಕರ ಭೀತಿವಿದೂರ ಖ್ಯಾತಿಯ ತಾನರಸುತ ವೇಣುಂಕರ ನೇತಾ ಸಕಲವರದಾತಾ ಮಾಂಗಿರಿವರ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್