ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಚಿತ್ರಾಪುರದ ದುರ್ಗಾ) ಚಿತ್ರಾಪುರ ನಾಯಕಿ ಪಾಲಿಸು ನಮ್ಮ ಗೋತ್ರ ವೃದ್ಧಿದಾಯಕಿ ಭ್ರಾತ್ರವ್ಯ ಭಯದಿಂದ ಭಜಿಸಿದ ವಿಧಿಯ ಸ್ತೋತ್ರಕೊಲಿದ ಮೊದಗಾತ್ರದೇವನ ರಾಣಿ ಪ. ಸರ್ವಮಂಗಲೆ ನಿನ್ನನು ಕಾಣಲು ಕಷ್ಟ ಪರ್ವತ ಪುಡಿಯಾದುದು ಶರ್ವ ಸುರೇಂದ್ರಾದಿ ಗೀರ್ವಾಣವಂದ್ಯೆ ನೀ ನಿರ್ವಹಿಸುವುದೆನ್ನ ಸರ್ವಕಾರ್ಯಗಳನ್ನು 1 ಕ್ಷುದ್ರರ ಮೋಹಿಸಲು ಹರಿಯು ನಿದ್ರಾ ಮುದ್ರೆಯ ಧರಿಸಿರಲು ರೌದ್ರ ರಕ್ಕಸ ಮಧುಕೈಟಭರನು ಕರು- ಣಾದ್ರ್ರ ಹೃದಯದಿಂದ ಕೊಲಿಸಿದ ಪತಿಯಿಂದ 2 ವಹಿಸಿದೆ ಸಕಲವನ್ನೂ ಸಹಿಸದ ಶತ್ರು ಪುಂಜಗಳನ್ನು ತ್ವರಿತದಿ ದಹಿಸು ದಾಸನೆಂದು ಗ್ರಹಿಸೆನ್ನ ಪಾಲಿಸು 3 ಚಂಡಮುಂಡರ ಶಿರವ ಕತ್ತರಿಸುತ ಚಂಡನಾಡಿದ ಭರವ ಕಂಡು ಮನಕೆ ರೋಷಗೊಂಡು ದೈತ್ಯರ ರಕ್ತ ಹಿಂಡಿ ದೇಹವ ತುಂಡು ತುಂಡು ಮಾಡಿದ ಧೀರೆ 4 ತಪ್ಪುಗಳೆಣಿಸದಿರೇ ಶೇಷಾದ್ರೀಶ- ನೊಪ್ಪಿದ ಗುರುವ ತೋರೆ ಅಪ್ಪಿಳಿಸರಿಗಳ ಚಿಪ್ಪನುಳಿಯದಂತೆ ತಪ್ಪಿಸು ಭಯವ ತಿಮ್ಮಪ್ಪನ ರಾಜನ ನೀರೆ 5
--------------
ತುಪಾಕಿ ವೆಂಕಟರಮಣಾಚಾರ್ಯ