ಮಂದರೋದ್ಧರಾ-ಬಂದು ಕಣ್ಣಮುಂದೆ ನಿಲ್ಲೋ ಪ
ಬಡವರೊಡೆಯನೆಂದು ನಿನ್ನ ಅಡಿಯ ಬಿಡದೆ
ನಂಬಿದೆನೋ ಕಡುದಯಾನಿಧೆ ಬಡಕುಚೇಲನ
ಪಿಡಿಯವಲಿಗೆ ಒಲಿದು ಪೊರೆದೆ1
ಸರ್ವಸಾರಭೋಕ್ತ ನೀನೆ ತೋರ್ವುದಿಲ್ಲ
ಕೊಡಲು ನಿನಗೆ ಸರ್ವದೇವಸಾರ್ವಭೌಮನೀ
ನೋರ್ವ ವ್ಯಾಪ್ತನಿರ್ಲಿಪ್ತ 2
ಪ್ರಣತಕಾಮದನೆಂದು ಅಂದು ಅಣುಗಧೃವನಾಕ್ಷಣದಿ
ದಣಿಸಲಾಗದೋ ದೀನರಕ್ಷಕ 3
ಮುಕುತರೊಡೆಯ ಭಕುತವತ್ಸಲ ಯುಕುತಿತೋರದೊ
ನಿನ್ನ ಧ್ಯಾನಕೇ ಶಕುತಿಯಿತ್ತು ಸಲಹೊ ಎನ್ನನು
ಸಕಲಲೋಕೋದ್ಧ್ದಾರ ಧೀರ 4
ಎಲ್ಲಜನರ ಪೊರೆಯಲು ಶ್ರೀನಲ್ಲ ನಿಂತೆಯೊ ಶೇಷಶೈಲದಿ
ವಲ್ಲಭಾ ಶ್ರೀ ವೆಂಕಟೇಶ ನೀ-
ನೆಲ್ಲಬಲ್ಲೆನ್ನ ಸೊಲ್ಲ ಲಾಲಿಸೊ 5