ಮರೆಯುವರೆ ಮರೆಯುವರೆ ರಾಮರಾಯಾ |
ಗುರುಗಳಾರಾಧನೆಗೆ | ಶಿರಿವಾರದೊಡೆಯಾ ||
ಪರಿವಾರ ಸಹಿತಾಗಿ ತೆರಳುವದು ನಿಶ್ಚಯಿಸಿ
ಬರೆವದಕೆ ಕಾಗದವು ಸಿಗದ್ಹೋಯಿತೆ | ಭರದಿ
ಬರಬೇಕೆಂದು | ಕರೆಕಳುಹದಕೆನ್ನ | ಚರನೋರ್ವ
ನಾದರು ದೊರೆಯದಾದನೆ ಅಕಟ 1
ಕ್ರೋಧ ವಿರಹಿತರಾದ ಸಾಧುವರ್ಯರ ಸಮಾರಾಧ |
ನೆಗೆ ನಾ ಭಾರವಾದೆನೇನೈ | ಆದರವು ತಗ್ಗಿತೇ |
ಯುಗ್ಮಪಾದಪಶುವಾದಿನೇ 2
ಗುರುಕರುಣವೆಗ್ಗಳದ ಗರುವಿಕೆಯೋ
ಕಾರ್ಪರ ನರಸಿಂಹರರ್ಚಕರಮೋಕ್ಷ ಬಲವೋ
ಪರಮ ಸತ್ಪುರುಷರುಪದೇಶ ಶ್ರವಣದ
ಮದವೋ | ಹರಿಕಥಾ ಪಾನದ ಹಂಕಾರವೋ 3
ಇರಬೇಕು ಸರ್ವದಾ ಸಕಲರಲಿ ಸಮದೃಷ್ಟಿ
ಹಿರಿಯರಾದವರಲ್ಲಿ ಏಕನಿಷ್ಟಿ | ನಿರುತದಲ್ಲಿ ಸದ್ಗೋಷ್ಟಿ
ಪರನಾಗಿ ಮನಮುಟ್ಟಿ ಹರಿಪಾದಸ್ಮರಿಪರಿಗೆ ಕೈವಲ್ಯಷಟ್ಟಿ 4
ಶ್ರೀ ಶಾಮಸುಂದರನ ದಾಸಕೂಟಸ್ಥರೊಳು ನಾ
ಸಲ್ಲದವನೆಂದು ಧೃಡವಾಯಿತೇ | ಭೂಸುರವೇಷದಲಿ
ಎಂದು ಉದಾಸೀನ ಮಾಡಿನ್ನು 5