ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಪೆಯಿಲ್ಲ ವ್ಯಾಕೊ ಎನ್ನ ಮ್ಯಾಲೆ ಕೃಷ್ಣಮೂರುತೀ ಅಪರಾಧವೆಲ್ಲ ಕ್ಷಮಿಸಿ ಸಲಹೊ ಪಾರ್ಥಸಾರಥಿ ಪ ನೀನಲ್ಲದನ್ಯರಿಲ್ಲವೆಂದು ನಿಖಿಲ ನಿಗಮವು ನಾನಾ ಪರಿಯಲಿ ಸಾರುವದು ಸಕಲಶಾಸ್ತ್ರವು 1 ಮನಾದಿಗಳಿಗಗೋಚರನೆಂದೆಲ್ಲ ಪೇಳ್ವರು 2 ಅನಾಥ ರಕ್ಷಕಾಪ್ರಮೇಯ ಆದಿಪುರುಷನೇ ಸನಂದನಾದಿ ಸಕಲಯೋಗಿ ವಂದ್ಯ ಚರಣನೇ 3 ನಿರಪರಾಧಿಗಳನು ಪೊರೆಯಲೇಕೆ ಸಂಶಯ ಸುರೇಶರುದ್ರ ಬ್ರಹ್ಮಜನಕ ನೀನೆ ನಿಶ್ಚಯ 4 ಕರುಣದಿ ನೀನೆ ಕಾಯಬೇಕು ಮರೆಯದೆನ್ನನು ಗುರುರಾಮ ವಿಠಲ ಬಿಡದಿರುಕೈದಾಸದಾಸನು 5
--------------
ಗುರುರಾಮವಿಠಲ
ನಾನು ನಿನ್ನ ಏನು ಅಂದೆನೊ ರಂಗರಾಯಾ ನಾನು ನಿನ್ನ ಏನು ಅಂದೆ ನಾಲ್ಕು ದಿಕ್ಕಿನೊಳಗೆ ನಿಮ್ಮ ಧ್ಯಾನಪಥವು ದೊಡ್ಡದೆಂದು ದೃಢವು ಮಾಡಿ ಹೇಳ್ದೆನಲ್ಲದೆ ಪ ಕುಂಡಲೀಶ ಶಯನನಾದ ಪುಂಡಲೀಕವರದ ಬ್ರ ಹ್ಮಾಂಡವೆಲ್ಲ ನಿಮ್ಮ ಉದರ ಅಂಡದಲ್ಲಿ ಇರುವುದೆಂದೆ ಮಂಡಿಗೊರಳನು ಇದೆವೆಂದನೆ ಮತ್ತೆ ಮತ್ತೆ ಕುಂಡಗೊಳರ [ಪುಂಡಗೊಲ್ಲರ] ಕುಲದೈವವೆಂದೆನೆ ಹಿಂಡುಲೋಕಗಳಿಗೆಲ್ಲ ಹಿರಿಯ ನೀನೆಯಂದೆನಲ್ಲದೆ 1 ಸಕಲಯೋಗಿ ಜನರ ಹೃದಯ ನಿಖರವಾಗಿ ನಿಂತು ಎಲ್ಲ ಭಕುತರನ್ನು ರಕ್ಷಿಸುವ ಲಕುಮಿರಮಣಾನಂದೆ ನಲ್ಲದೆ ಕಕುಲಾತಿಯ ಮಾಡೆನೆಂದೆನೆ ಅಕಳಂಕ ಮಹಿಮನಾದ ಆದಿ ಮೂರುತಿ ಎಂದೆನಲ್ಲದೆ 2 ಬೊಟ್ಟಿನಿಂದ ಧರೆಯನೆತ್ತಿ ಚೇಷ್ಟೆಜನರ ಉರಳಿಸಿದ ಕೃಷ್ಣ ಮೂರುತಿನೀನೆಯೆಂದು ಇಷ್ಟದಿಂದ ಪಾಡುವೆನಲ್ಲದೆ ಸೃಷ್ಟಿನೀಟಗೊಲ್ಲನೆಂದೆನೆ ನಿನ್ನ ಮಗನ ಸುಟ್ಟು ಅವನ ಮಿತ್ರನೆಂದೆನೆ ಸೃಷ್ಟಿಗಧಿಕವಾದ `ಹೊನ್ನವಿಠ್ಠಲ' ರಾಯನಂದೆನಲ್ಲದೆ 3
--------------
ಹೆನ್ನೆರಂಗದಾಸರು
ಭಯ ನಿವಾರಣವು ಶ್ರೀ ಹರಿಯ ನಾಮ |ಜಯಪಾಂಡುರಂಗವಿಠಲ ನಿನ್ನ ನಾಮ ಪಧಾರಿಣೀದೇವಿಗಾಧಾರವಾಗಿಹ ನಾಮ |ನಾರದರು ನಲಿನಲಿದು ನೆನೆವ ನಾಮ |ಘೋರಪಾತಕಿ ಅಜಾಮಿಳನ ಸಲಹಿದ ನಾಮ |ತಾರಕವು ಬ್ರಹ್ಮ - ಭವರಿಗೆ ನಿನ್ನ ನಾಮ 1ಮೊರೆಯಲಾಲಿಸಿ ಮುನ್ನ ಗಜವ ಸಲಹಿದ ನಾಮ |ಕರುಣದಿಂ ದ್ರೌಪದಿಯ ಕಾಯ್ದ ನಾಮ |ಮರುಗುತಿಹ ಧ್ರುವನ ಉನ್ನತನ ಮಾಡಿದ ನಾಮ |ಪರತತ್ತ್ವ ಇಹಕಲ್ಲವೇ ನಿನ್ನ ನಾಮ 2ಚರಣದಲಹಲ್ಯೆಯನು ಸೆರೆಯ ಬಿಡಿಸಿದ ನಾಮ |ಕರುಣದಲಿ ಪ್ರಹ್ಲಾದನನು ಕಾಯ್ದ ನಾಮ |ತೊರೆಯಲಕ್ರೂರನಿಗೆ ನಿಜವ ತೋರಿದ ನಾಮ |ಸ್ಮರಿಸ ಜನರಿಗೆ ಸಮಸ್ತವನಿತ್ತ ನಾಮ 3ಚಂದ್ರಶೇಖರ ಗಿರಿಜೆಗೊರೆದ ಸಿರಿಹರಿನಾಮ ||ಬಂದಾ ವಿಭೀಷಣನ ಪಾಲಿಸಿದ ನಾಮ |ಕಂದಮುಚುಕುಂದನಿಗೆ ಕಾಮಿತವನಿತ್ತ ನಾಮ |(ಸಂದ ಪಾಂಡಪಕ್ಷ ಪಾವನವು ನಾಮ ) 4ಅಖಿಳವೇದಪುರಾಣ ಅರಸಿಕಾಣದ ನಾಮ |ಸಕಲಯೋಗಿ - ಜನಕೆ ಸೌಖ್ಯ ನಾಮ ||ಪ್ರಕಟಿಸಲು ಜಗವ ಪಾವನವ ಮಾಡಿದ ನಾಮ |ರುಕುಮಿಣೀಯರಸ ವಿಠಲ ನಿನ್ನ ನಾಮ 5ಭಕ್ತಿಯಲಿ ನೆನೆವರನು ಎತ್ತಿ ಸಲಹುವ ನಾಮ |ಮುಕ್ತಿ ಮಾರ್ಗಕೆ ಯೋಗ್ಯಹರಿ ನಿನ್ನ ನಾಮ |ಎತ್ತರಕೆ ಏರಿಪುದು ಸ್ವಾಮಿ ನಿನ್ನಯ ನಾಮ |ಚಿತ್ತಜನ ಪೆತ್ತ ಶ್ರೀ ಹರಿಯ ನಾಮ 6ವಾರಿಜಾನನೆ ತುಳಸಿಗೊಲಿದ ಹರಿನಾಮ ಕಾ - |ವೇರಿ ಮಧ್ಯದಲಿ ನೆಲಸಿದ ನಿನ್ನ ನಾಮ ||ಕ್ಷೀರಸಾಗರದಲ್ಲಿ ಶಯನವಾಗಿಹ ನಾಮ |ನಾರಾಯಣಾ ಕೃಷ್ಣಹರಿ ನಿನ್ನ ನಾಮ7ಹೊಂದಿದ್ದ ಭಕ್ತವೃಂದವ ಸಲಹಿದಾ ನಾಮ |ತಂದು ಅಮೃತವ ಸುರರಿಗೆರೆದ ನಾಮ ||ಅಂದಂಬರೀಷನನು ಕಾಯ್ದ ಶ್ರೀ ಹರಿನಾಮ |ತಂದೆ ಪುರಂದರವಿಠಲಹರಿ ನಿನ್ನ ನಾಮ8
--------------
ಪುರಂದರದಾಸರು