ರೂಪನ ಗುಡಿನಿ¯ಯಾ ವೇಂಟಕರಾಯಾ
ರೂಪನ ಗುಡಿ ನಿಲಯಾ
ವ್ಯಾಪಕ ಜಗತ್ರಯ ಕಾಪಾಡುವ ಭಾರತರ್ಕನು ದಾಸರ ಪ
ದಂಡಿ ದಾನವಮರ್ದನ ಸಕಲಜಗ ಉ-
ದ್ದಂಡ ರಕ್ಷಕ ಪಾವನಾ ಚಂಡ ಪ್ರ-
ಚಂಡ ಮಾರ್ತಾಂಡ----ದ್ಭವ
ಕುಂಡಲಿ ಶಯನ ಕೋದಂಡ ಪಾಣಿ ಹರಿ 1
ಗಂಗಾಜನಕ ದೇವಾ ಸಕಲಮೋಹ-
ನಾಂಗನಾ ಪಡೆದನಾ ಶೃಂಗಾರದಲಿ ಕುಜ
ರಂಗ ಮಂಟಪದಲಿ ಮಂಗ
ಳಾಂಗಿಯ ಬಿಡದೆ ಮಡಗಿಸಿ ಇರುವಂಥಾ 2
ಮಂದರಾದ್ರಿಯ ಧರಿಸಿ ಸುಜನರಿಗೆ ಆ-
ನಂದದಿ ಸುಧೆಯನುಣಿಸಿ
ಅಂದು ಭಕ್ತರ ಆನಂದದಿ ಸಲುಹಿದ
ತಂದೆ 'ಹೊನ್ನ ವಿಠ್ಠಲ’ ದಯಮಾಡಿ ಸಲಹಯ್ಯಾ 3