ಆಸೆನೀಗೋ ಹೇಸಿಮನವೆ
ಕೇಶವನಂಘ್ರಿ ದಾಸನಾಗೊ ಪ
ಸಕಲಭೋಗಭಾಗ್ಯ ಬರುವ
ಅಖಿಲ ಸುಖದು:ಖಂಗಳೆಲ್ಲ
ಭಕುತಿದಾರ್ಯಗರ್ಪಿಸಿ ಹರಿ
ಭಕುತಿಯಿಂದಪಮೃತ್ಯು ಗೆಲಿಯೊ 1
ವಂದನೆ ಸ್ತುತಿ ಮಾನ ಮನ್ನಣೆ
ಬಂದು ಕುಂದು ನಿಂದೆಯೆಲ್ಲ
ಮಂದರಾದ್ರಿಯ ನಿಲಯಗೆಂದಾ
ನಂದದಿಂ ಭವಬಂಧ ಗೆಲಿಯೊ 2
ಪೊಡವಿಸುಖಕೆ ಮೋಹಿಸದೆ ನೀ
ಕೆಡುವಕಾಯಮೋಹ ತೊಡೆದು
ಒಡೆಯ ಶ್ರೀರಾಮನಂಘ್ರಿ ಕಮಲ
ಧೃಢದಿ ಭಜಿಸಿ ಮುಕ್ತಿ ಪಿಡಿಯೊ 3