ನಿನ್ನ ಮಹಿಮೆಗಿಂಥವರು ಹೊಣೆಯೆ ? ಪ
ಚಿನ್ಮಯನೆ ಸಕಲಭುವನಾಧಾರವೆಂಬುದನುಬಣ್ಣಿಸಲು ಎನ್ನಳವೆ ಪನ್ನಗೇಂದ್ರನು ಹೊಣೆಯೆ ? ಅ
ವಿಧಿ ಕೌಸ್ತುಭ ರತ್ನವರ ಪೀತ ವಸನ ಕ್ಷೀರಾಬ್ಧಿ ಹೊಣೆಯೊಶರಣರಿಚ್ಛೆಯಲಿ ನೀನಿದ್ದುದಕೆ ದ್ರೌಪದಿಯುಕರಿರಾಜ ಶಂಭು ಅಂಬರೀಷ ಹೊಣೆಯೊಕರುಣಿಯು ಉದಾರಿ ನೀನೆಂಬುದಕೆ ಧ್ರುವರಾಯಮರುತಸುತ ಸಾಂಧೀಪ ಹೊಣೆಯೊ ಕೃಷ್ಣ 1
ಸುಲಭ ಭಕುತರ ಕಾಯ್ವನೆಂಬುದಕ್ಕೆಲೊ ದೇವಫಲುಗುಣನು ವಿದುರ ಅಕ್ರೂರ ಹೊಣೆಯೊಛಲದಂಕನೆಂಬುದಕೆ ಬಾಣನು ಹಿರಣ್ಯಕನುಜಲಧಿ ದಶಮುಖ ಕಾರ್ತವೀರ್ಯ ಹೊಣೆಯೊಒಲಿಸಿ ನಿನ್ನನು ತುತಿಸಿ ಮುಕುತಿಯನು ಪಡೆದುದಕೆಸಲೆ ಶ್ರುತಿಯು ಗಿರಿಜೆ ಅಜಮಿಳನು ಹೊಣೆಯೊನಳಿನಾಕ್ಷ ಸತ್ತ್ವಗುಣ ನಿನಗೆ ಉಂಟೆಂಬುದಕೆಸಲಿಲಜೋದ್ಭವ ಭೃಗುಮುನೀಂದ್ರ ಹೊಣೆಯೊ 2
ವಾತ ಸತ್ತ್ವಗುಣ ಹೊಣೆಯೊಶ್ರೀಕಾಂತ ನೀನಿತ್ತ ವರವು ಸ್ಥಿರವೆಂಬುದಕೆನಾಕೇಶಜಿತನ ಪಿತನನುಜ ಹೊಣೆಯೊಲೋಕದೊಳು ಕಾಗಿನೆಲೆಯಾದಿಕೇಶವ ಭಕ್ತಸಾಕಾರನೆಂಬುದಕೆ ಸಕಲ ಭುವನವೆ ಹೊಣೆಯೊ 3