ಕಾಯೊ ಕರುಣ ಕೃಪಾಳ
ಸದ್ಗುರು ಘನಲೋಲ ದ್ರುವ
ಎನ್ನಹೊಯಿಲ ನಿಮಗೆಂತು ಮುಟ್ಟುವದಾನಂತಗುಣಮಹಿಮೆ
ಚಿಣ್ಣ ಕಿಂಕರನಾದ ಅಣುಗಿಂದತ್ತಲಿ ಹೀನ ದೀನ ನಾ ಪರಮ
ಖೂನತಿಳಿಯಲು ನಿಮ್ಮ
ಕೃಪಾಸಿಂಧು ನಿಮ್ಮ 1
ಅನಂತಕೋಟಿ ಬ್ರಹ್ಮಾಂಡನಾಯಕನೆಂದೊದರುತಿಹಾನಂತ ವೇದ
ಅನಂತಾನಂತಾನಂತ ಮಹಿಮರು ಸ್ತುತಿಸುತಿಹರು ಸರ್ವದ
ಗುಹ್ಯ ಅಗಾಧ
ತಿಳಿಯದು ಮಹಿಮ್ಯಂಗುಷ್ಠದ 2
ಮಾಡುವರಾನಂದ ಘೋಷ
ದೋರುವ ಹರುಷ ತಾ ಶೇಷ
ಸುರಮುನಿ ಜನರೆಲ್ಲ ಚರಣಕಮಲಕೆ ಹಚ್ಚಿದರು ನಿಜಧ್ಯಾಸ
ಸಿರಿಲೋಲ ನೀ ಸರ್ವೇಶ 3
ಸಕಲಾಗಮ ಪೂಜಿತ
ಸದ್ಗುರು ಶ್ರೀನಾಥ
ಕಾಮಪೂರಿತ ಕರುಣಾನಂದಮೂರುತಿ ಯೋಗಿಜನ ವಂದಿತ
ಜನರಿಗೆ ಸಾಕ್ಷಾತ 4
ಸಲಹುವದೋ ನೀ ಶ್ರೀಹರಿಯೆ
ನೀ ಎನ್ನ ಧೊರೆಯೆ
ಮುರ ಅರಿಯೆ
ಸಕಲಪೂರ್ಣಸಿರಿಯೆ 5