ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸೊ ಕರುಣಿಸೊ ಗುರುವೆಂಕಟೇಶ ಕರುಣಿಸೆನ್ನ ನೀ ನೋಡೊ ಪರಮ ಪುರುಷ ಧ್ರುವ ಬಿನ್ನಹವ ಪಾಲಿಸೊ ಚಿನುಮಯ ರೂಪ ಉನ್ನತ ಮಹಿಮ ನೀ ಘನ್ನ ಗುರು ಕೃಪ 1 ಅನಾಥ ಬಂಧು ನೀ ಶರಣ ರಕ್ಷಕ ಅನಂತ ಕೋಟಿ ಬ್ರಹ್ಮಾಂಡ ನಾಯಕ 2 ವಾಸುದೇವ ಚಿದ್ರೂಪ ದೇಶಿಕರದೇವ ಭಾಸಿ ಪಾಲಿಪ 3 ವಂದಿತ ತ್ರೈಲೋಕ್ಯ ವೇದಾಂತ ಮಹಿಮ ಇಂದಿರಾಪತಿ ಘನಗುರುಬ್ರಹ್ಮ 4 ಶ್ರೀನಾಥ ನೀನಲ್ಲದೆ ನನಗಾರು ಇಲ್ಲ ನೀನೆ ಸಕಲಪೂರ್ಣ ಭಕ್ತವತ್ಸಲ 5 ಮತಿಹೀನನವಗುಣ ನೋಡದಿರೆನ್ನ ಕ್ಷಿತಿಯೊಳು ಸದ್ಗೈಸೊ ಪತಿತಪಾವನ 6 ದೀನನಾಥ ನೀ ಬಂದು ಮನದೊಳು ನಿಂದು ಮನ್ನಿಸಿ ದಯಬೀರೊ ಘನಕೃಪಾಸಿಂಧು7 ವಿಶ್ವವ್ಯಾಪಕ ಸಾಧುಹೃದಯನಿವಾಸ ದಾಸ ಮಹಿಪತಿ ಪ್ರಾಣ ಹೊರಿಯೊ ಪ್ರಾಣೇಶ 8
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯೊ ಕರುಣ ಕೃಪಾಳ ಸದ್ಗುರು ಘನಲೋಲ ದ್ರುವ ಎನ್ನಹೊಯಿಲ ನಿಮಗೆಂತು ಮುಟ್ಟುವದಾನಂತಗುಣಮಹಿಮೆ ಚಿಣ್ಣ ಕಿಂಕರನಾದ ಅಣುಗಿಂದತ್ತಲಿ ಹೀನ ದೀನ ನಾ ಪರಮ ಖೂನತಿಳಿಯಲು ನಿಮ್ಮ ಕೃಪಾಸಿಂಧು ನಿಮ್ಮ 1 ಅನಂತಕೋಟಿ ಬ್ರಹ್ಮಾಂಡನಾಯಕನೆಂದೊದರುತಿಹಾನಂತ ವೇದ ಅನಂತಾನಂತಾನಂತ ಮಹಿಮರು ಸ್ತುತಿಸುತಿಹರು ಸರ್ವದ ಗುಹ್ಯ ಅಗಾಧ ತಿಳಿಯದು ಮಹಿಮ್ಯಂಗುಷ್ಠದ 2 ಮಾಡುವರಾನಂದ ಘೋಷ ದೋರುವ ಹರುಷ ತಾ ಶೇಷ ಸುರಮುನಿ ಜನರೆಲ್ಲ ಚರಣಕಮಲಕೆ ಹಚ್ಚಿದರು ನಿಜಧ್ಯಾಸ ಸಿರಿಲೋಲ ನೀ ಸರ್ವೇಶ 3 ಸಕಲಾಗಮ ಪೂಜಿತ ಸದ್ಗುರು ಶ್ರೀನಾಥ ಕಾಮಪೂರಿತ ಕರುಣಾನಂದಮೂರುತಿ ಯೋಗಿಜನ ವಂದಿತ ಜನರಿಗೆ ಸಾಕ್ಷಾತ 4 ಸಲಹುವದೋ ನೀ ಶ್ರೀಹರಿಯೆ ನೀ ಎನ್ನ ಧೊರೆಯೆ ಮುರ ಅರಿಯೆ ಸಕಲಪೂರ್ಣಸಿರಿಯೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಯಕ್ಷಿಣೀ ಸರ್ವಲಕ್ಷ್ಮಿಣೀ ರಕ್ಷಿಸು ಮಗನ ಅಪೇಕ್ಷವ ಪೂರೈಸಿ ಪ ಕಂಟಕ ಸಕಲಪೂರ್ಣ ಕರುಣವಿಟ್ಟು ಮಾಡು ಸಫಲ ತ್ರಾಣಿ ಕರುಣದಿ ಬಡತನವಖಿಲ ಜಾಣೆ ಪರಿಹರಿಸಿ ಕೊಡು ಎನಗೆ ಸುಫಲನ ಆಹ ಮೊರೆಯಿಟ್ಟು ಬೇಡುವೆ ಪರಮಪಾವನೆ ಎನ್ನ ಇರವ ತೀರಿಸು ತಾಯಿ ಸರುವ ಸಿದ್ಧಾಂತಳೆ 1 ಮನುಮುನಿಗಳಿಗಾದಿ ಒಲುಮೆ ನೀನು ಘನ ಸಿದ್ಧಿನಿತ್ತು ಸದ್ಧರ್ಮಿ ಜಾಣ ರೆನಿಸಿದಿ ದಯದಿ ಸುಪ್ರೇಮಿ ಮಾಣ ದನುಪಮಮತಿ ನಿಜಮಹಿಮೆ ಆಹ ವನರುಹ ಬ್ರಹ್ಮಾಂಡ ಘನ ಘನ ಎನುವಂಥ ಅನುಪಮಪದದೆನ್ನ ಕನಿಕರದಿಂ ಕಾಯೆ 2 ಸರುವ ಸಿಧ್ದಿಯ ನೀಡಿ ಕರುಣಿ ಎನ್ನ ಸರುವ ಶುದ್ಧವೆನಿಸೆ ಜನನೀ ಪೂರ್ಣೆ ಸರ್ವಜ್ಞೆ ಪಾಲಿಸೆ ನಿಪುಣೆ ವಾಣಿ ಸರ್ವಮಂಗಲಿ ಸುಪ್ರವೀಣೆ ಆಹ ಸರ್ವಶಕ್ತ ಜಗದಾರ್ಯ ಶ್ರೀರಾಮನ ಭಾರ್ಯೆ ಸಕಲ ಐಶ್ಚರ್ಯದಿಂ ಪೊರೆಯೆನ್ನ 3
--------------
ರಾಮದಾಸರು