ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಯೆ ನಿನ್ನದ್ಭುತ ಚರಿಯವನರಿವುದು ವರಗುರಿಯಿಂದಹರೆ ಕರುಣಿಸೆನ್ನೊಳು ದೊರೆಯೆ ಪ. ನಾನಾ ಯೋನಿಗಳಲ್ಲಿ ಪೋಗುವ ಸೂನುಗಳಿಂತು ಮಾಳ್ಪ ಶಿವ ಭಾನು ನಾಮಗಳಿಂದಲಿ ಸಾನುರಾಗದಿ ಕೊಂಡು ಸಕಲಪಿತರುಗಳಿಗಾನಂದ ಪಾಲಿಸುವಿ 1 ಬುದ್ಧಿಪೂರ್ವಕವಾಗಿ ಮಾಡುವ ಕರ್ಮವ ಶುದ್ಧಭಾವಗಳಿಂದಲಿ ತದ್ದಿನ ಕಾಲದಿ ನಡೆಸುತ ತಾನೆಂಬ ಬದ್ಧಹಂಕೃತಿ ತಾಳದೆ ವಾಸುದೇವ ನೀನುದ್ಧರಿಸೆನ್ನನುತ ತಿದ್ದಿ ಸಮರ್ಪಣೆ ಗೈದವರೆಲ್ಲ ಸರಿ ಶುದ್ಧ ಮಾಡುವ ವಿತತ 2 ಈ ವಿಧದಲಿ ಕರ್ಮಕೋವಿದರಾಡಿದ ಭಾವವೆ ನಿಜವೆನ್ನುತ ಸಾವಧಾನದಿ ನಿನ್ನ ಪಾದಕಂಜವೆ ಭವನಾವೆವೆಂಬೆನು ಸತತ ಶ್ರೀವರ ಶೇಷಾದ್ರಿ ಶಿಖರಾದ್ರಿವಾಸ ಪರಾಪರಗಣ ವಿನುತ ಕಾವಾತ ನೀನೆ ಕರ್ಮಗಳ ಕುಂದುಗಳಿಂದ ಪಾವನಾತ್ಮಕ ಸ್ವರತ 3
--------------
ತುಪಾಕಿ ವೆಂಕಟರಮಣಾಚಾರ್ಯ