ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧ್ರುವತಾಳ ಹಿಂದಿನ ಜನ್ಮಜನ್ಮಾಂತರದಿ ಮಾಡಿದಘವ ನಿವಾರಿಸುವರು ನಿನ್ನ ದಾಸರು ದುರಿತ ದುರ್ಜಯ ದುಃಖವ ದೂರ ಮಾಡುವರು ನಿನ್ನ ದಾಸರು ಮುಂದಣ ಅಪಾರ ಆನಂದ ಸುಖವ ಅನವರತ ಈವರು ನಿನ್ನ ದಾಸರು ಯೆಂದು ಇಲ್ಲದಿರೆ ಬ್ಯಾರೆಗತಿಯುಂಟೆ ನಿನ್ನನರಿವ ಬಗೆ ಮತ್ತುಂಟೆ ಎಲೆದೇವ ನಂದನಂದನ ನಿನ್ನವರೆ ಜೀವನ ಅಚಲಾನಂದವಿಠಲರೇಯ ಬ್ಯಾರೆಗತಿ ಮತ್ತುಂಟೆ 1 ಮಠ್ಯತಾಳ ಭೂತದಯಾಪರ ನರನಾಥ ದೇವತೆಯೆಂಬರು ಭೂತವಿರೋಧ ಮಾಡಿ ಕೈಯ್ಯಾತು ಬೇಡುವ ದೈವವ ಸಾತ್ವಿಕವೆಂದು ಬಗೆವರು ಜನರು ಈ ರೀತಿಯೇನೆಂಬೆ ಅಜಾತ ಸಕಲದೇವರ ದಾತನೆ ಅಚಲಾನಂದವಿಠಲ ನೀನಿರೆ ಸಾತ್ವಿಕವೆಂದು ಅನ್ಯದೈವವ ಈ ಭೂತಳದ ಜನರು ಬಗೆವರು ಪ್ರತಿದಿನ 2 ತ್ರಿಪುಟತಾಳ ಮಾನವನೆ ಕೇಳು ಕಬ್ಬಿಣ ಸೋಸಿ ಕಾಸಿ ಬಡಿಯಲು ತಾನು ಪರುಷ ಸೋಕದೆ ಸುವರ್ಣ ಅಪ್ಪುದೇ ಅನಾದಿ ಅವಿದ್ಯ ತಾಪದಿಂದ ಬೆಂದು ತಾನು ನೀರೊಳು ಮಿಂದರೇ ಹೋಹುದೇನೊ ಅನಾದಿದೈವ ಅಚಲಾನಂದವಿಠಲನ ಧ್ಯಾನಮಾಳ್ಪರ ಪಾದಪರುಷ ಸೋಕದನಕ 3 ಅಟ್ಟತಾಳ ಎನ್ನ ಹಳಿಯಲಿ ಉಗುಳಲಿ ಬಂಧುಗಳೆನ್ನ ಮನ ರಂಗ ನಿನ್ನನೆ ನೆಚ್ಚಿಹ್ಯದೆನ್ನಮನ ಕೃಷ್ಣ ನಿನ್ನನೆ ನಂಬಿಹ್ಯದೆನ್ನ ಮನ ಅಚಲಾನಂದವಿಠಲರೇಯ ನಿನ್ನವರೊಲುಮೆಯ ಸಾರಿತೆನ್ನ ಮನ 4 ಆದಿತಾಳ ಹಲವು ಮಾತೇನು ಹಲಧರನನುಜನ ಚೆಲುವಿಕೆಯನೆ ಕಂಡು ಮನಸೋತೆನವ್ವ ಕೆಲಬಲದಾ ಕುಲದವರೆನ್ನ ಹಳಿಯಲಿ ಚಲಿಸದು ಚಿತ್ತ ಚಂಚಲವಾಗದೆನ್ನ ಮನ ಕೆಲಚಿತಿ ವೆಂಣೆಲ್ಲ (?) ತಾನೊಲಿವಂತೆ ಮಾಡಿದ ನಿಲುಕುವನಚಲಾನಂದವಿಠಲರೇಯ ಕ್ಯಲಬಲದ ಕುಲದವರೆನ್ನ ಹಳಿಯಲಿ 5 ಜತೆ ಬೆಂದ ಸಂಸಾರದಿ ಬಂದು ಬಂದು ಹೋದೆನೊ
--------------
ಅಚಲಾನಂದದಾಸ
ಭಕುತಾಭಿಮಾನಿ ಸಕಲದೇವರ ಧಣಿ ನಿಖಿಲವ್ಯಾಪಕ ವಿಮಲ ಮುಕುತಿದಾಯಕನೆ ನೀ ಪ ವೇದವೇದಕ್ಕೆ ಸಿಲ್ಕದಾದಿಮೂರುತಿ ನಿನ್ನ ಪಾದಧ್ಯಾನದ ಶಕ್ತಿ ಸಾಧನಕೊಡು ಹರಿಯೆ 1 ಕಮಲಪೀಠಾದಿಸುರರು ಭ್ರಮಿಸುವ ತವಪಾದ ಕಮಲಕೃಪೆಯಿತ್ತೆನಗೆ ವಿಮಲಪತಿಯೆ ನೀಡೊ 2 ಭವಮಾಲೆ ಗೆಲಿಸೆನ್ನ ದಯದಿಂದ ಸಲಹಯ್ಯ ಭವರೋಗವೈದ್ಯನೆ ದಯಾಕರ ಶ್ರೀರಾಮ 3
--------------
ರಾಮದಾಸರು
ಮಾಧವ ನಮ್ಮ ಹೆ ಜ್ಜಾಜಿಯ ಚೆನ್ನಕೇಶವಾ ಪ ಸಾಜದಿ ಶರಣರಿಗೊಲಿವಾ ಸುರ ಭೂಜನು ಪರವಾಸುದೇವಾ ಅ.ಪ ಮರೆತವರಿಗೆ ಮತ್ತೂ ದೂರನು ಇವ ಮರೆಹೊಕ್ಕವರ ಮುಂದಿರುವನು ದುರಿತಗಳಡಗಿಸಿ ದಾಸರ ಪೊರೆವಾ ಪರಮದಯಾಳುವು ಪ್ರಭು ಶ್ರೀನಿಭವ 1 ನಿರ್ಜರ ಮುನಿಗಣ ಲೋಲಾ ಶೀಲಾ ಸಾರಥಿ ಲೀಲಾ ಪರ್ಜನ್ಯ ಪ್ರಭುಪರಿಪಾಲ ನೀಲಾ ದುರ್ಜನ ವಂಶಕ್ಕೆ ಕಾಲಾ 2 ನಿತ್ಯತಂದೆಯು ತಾಯಿಯು ಶ್ರೀರಂಗಾ ಸತ್ಯಸಹೋದರನು ವೆಂಕಟರಂಗಾ ಸ್ತುತ್ಯ ಬಂಧುವು ತಾನೆ ನರಸಿಂಗಾ ಇವ ಪ್ರತ್ಯಕ್ಷನೊ ಅಂತರಂಗ 3 ವೆಂಕಟವರದನೆ ಸದಯಾ ಗುರು ಸಂಕಟಹರ ಬಹುವಿನಯಾ ರಂಗ ಪಂಕಜಸಂಭವ ತನಯಾ 4 ಯಾದವ ಯದುಶೈಲಶೃಂಗಾ ಸಾಂಗ ಮಣಿ ಉತ್ತಮಾಂಗ [ವೇದ] ವೇದ್ಯನೆ ಗರುಡತುರಂಗಾ ಗಂಗಾ ಬಾದರಾಯಣ ಗೀತೋತ್ತುಂಗ 5 ಸಂಪಿಗೆ ಕಂಪಿನ ಸುಂದರ ಸಂಪೂರ್ಣ ಸಂಪತ್ಕುಮಾರ ಶ್ರೀ ಭೂನೀಳ ರಮಣ ತಂಪಿನ ಹೃದಯದ ಪ್ರಾಣಸೂತ್ರಾದಿ ಪೆಂಪಿನಗುರು ಶ್ರೀನಿವಾಸ ಕಲ್ಯಾಣ6 ರಾಘವಜಯ ಸೀತಾರಾಮಾ ಸ್ವಾಮಿ ರವಿಕುಲ ಸುಂದರಸೋಮ ಯೋಗಿ ಜನಾನಂದ ಧಾಮಾ ಪ್ರೇಮಪ್ರಿಯ ಶ್ರೀಶ್ಯಾಮ ಭಾಗವತಾನಂದಪ್ರಿಯ ಪುಣ್ಯನಾಮಾ ಚತು ಸಾಗರಾಂತ ಸಾರ್ವಭೌಮ 7 ಭಕ್ತಮಂಡಲಿ ಕಾಮಧೇನು ಜೇನು ವಿ ರಕ್ತ ಜನರ ಹೃದಯಭಾನು ಮುಕ್ತಿ ಬಯಸಿ ಬಂದೆ ನಾನು ಪ್ರೇಮಾ ಸಕ್ತಿ ಸಿದ್ದಿಯ ನೀಡು ನೀನು 8 ಸಕಲದೇವರೊಳೆಲ್ಲ ನೀನೇ ಹೆಚ್ಚು ಅಕಳಂಕ ಸಾಧುಗಳ ಸವಿಬೆಲ್ಲದಚ್ಚು ನಿಖಿಳಜೀವರೊಳೆಲ್ಲ ಪರಮಾತ್ಮನಚ್ಚು ಸುಕರದಿ ನೆನೆಯುವ ನನಗೆ ನಿನ್ನಯ ಹುಚ್ಚು 9 ಪರಿಪರಿ ಭವಸಂಸಾರಾ ಸಾರಾ ಹೊರಲಾಲೆ ದೂಡುವೆ ದೂರಾ ಪರಮಾತ್ಮಾ ಪದಗಳ ಸೇರಾ ಸಾರಿ ಕರೆಯಲು ಕರಗಳ ತೋರಾ 10 ರಾಜ ಜನಾರ್ಧನ ದಿವ್ಯಂ ದಿವ್ಯಂ ಜಾಜಿ ತುಲಸೀ ಮಾಲ ಭವ್ಯಂ ಯಾಜಿ ಕಮಂಡಲ ದ್ರವ್ಯಂ ಸ್ತವ್ಯಂ ಜನಗಾನ ಶ್ರೋತವ್ಯಂ 11 ಸರ್ವಲೋಕ ಶರಣ್ಯ ಗಣ್ಯ ಉರ್ವಿ ದೇವ ವರೇಣ್ಯ ಹಿರಣ್ಯ ಸ್ವರ್ಣ ವಿರ್ವತ ದರಶ್ಯಾಮ ಪುಣ್ಯ 12
--------------
ಶಾಮಶರ್ಮರು