ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನೇತರೊಳಗಾಸೆ ಎನಗಿಲ್ಲವೋ ಈಗಳಿನ್ನು ಹರಿನಾಮ ಸಂಕೀರ್ತನೆಯೊಂದು ಹೊರತಾಗಿ ಪ ನೋಡಿ ಸಾಕಾಯ್ತು ಲೋಕದ ಪ್ರಪಂಚವನು ಪೇ ಚಾಡಿ ಸಾಕಾಯ್ತು ದರಮಂ ಪೊರೆಯಲು ಆಡಿ ಸಾಕಾಯ್ತು ಸುಜನರೊಳ ನೃತಗಳನು ಒಡ ನಾಡಿ ಸಾಕಾಯ್ತು ಕುಜನರ ಸಂಗದೊಳಗೆ 1 ಉಂಡು ಸಾಕಾಯ್ತು ಸಂಸಾರ ಸುಖ ದುಃಖವನು ನಾ ಕಂಡು ಸಾಕಾಯ್ತು ಸುಜನರ ಭಂಗವನು ತಂಡಿ ಸಾಕಾಯ್ತು ಪರಸೇವೆಯನು ಮಾಡಿ ಜನ ರಂಡಲೆದು ಬೇಡಿ ಸಾಕಾಯ್ತು ಈ ಭವಕೆ 2 ತಿರು ತಿರುಗಿ ಸಾಕಾಯ್ತು ತಲೆ ಹುಳಿತ ನಾಯಂತೆ ಪರಿ ಪರಿಯ ದುಃಖಗಳನುಣ್ಣುತ ಚರಿಸಿದೆನು ಮರುತಸುತ ಕೋಣೆ ಲಕ್ಷ್ಮೀರಮಣ ಇರಿಸಿದಂತಿರ ಬೇಕು ಸಕಲಜನರು 3
--------------
ಕವಿ ಪರಮದೇವದಾಸರು
ಜಯದೇವ ಜಯದೇವ ಜಯಮಹಾಂಗಿರೀಶಾ ಸ್ವಯಂಜ್ಯೋತಿ ಬೆಳಗುವೆ ಸಚ್ಚಿತ್ಸುಖತೋಷಾ ಪ ಸರ್ವರಲಿ ನೋಡಿದರೂ ನೀನಲ್ಲದೆ ಇಲ್ಲಾ ಉರ್ವಿಯಾಕಾಶ ದಶದಿಕ್ಕುಗಳೆಲ್ಲಾ ಸರ್ವೇಶ್ವರವೆಂಬದು ಸರ್ವಾಂಗದೆÉಲ್ಲಾ ಪಾರ್ವತೀಶ್ವರನೆಂಬುದು ಬಲ್ಲವನೆ ಬಲ್ಲಾ ಜಯದೇವ 1 ಸಕಲ ಸುಖದುಃಖವೆಂಬುದು ನಿನ್ನ ಲೀಲೆ ಅಖಿಲ ಅಂಡಗಳೆಂಬ ಭೋಜನಶಾಲೆ ಭಕುತಿ ಭಾಗ್ಯೆಂಬ ಜ್ಞಾನದ ದೀಪಜ್ವಾಲೆ ಪ್ರಕಟಿಸುವಂತೆ ಎತ್ತುವೆ ನಿನ್ನ ಮೇಲೆ ಜಯದೇವ 2 ಪರಿಶುದ್ಧಾತ್ಮಕದೇವಾ ನಿರುತ ನಿರ್ದೋಶಾ ಸಕಲಜನರ ಹೃದಯಕಮಲ ನಿವಾಸಾ ದುರಿತದಾರಿದ್ರ್ಯ ಭವದುಃಖವಿನಾಶಾ ಗುರು ವಿಮಲಾನಂದ ಶ್ರೀ ಮಹಾಂಗಿರೀಶಾ 3
--------------
ಭಟಕಳ ಅಪ್ಪಯ್ಯ
ವ್ರತವನಲ್ಲದೆ ಅನುವ್ರತ ಮಾಡಬಹುದೇಶತಮುಖ ಸ್ಥಿತನಾದ ದಿವಿಜಪತಿಯ ಪ ದಾನಶೀಲನೆನಿಸಿ ವಿಬುಧರಿಗೆ ಮೃಷ್ಟಾನ್ನಪಾನಗಳುಂಬೋ ಪಂಕ್ತಿಯಲ್ಲಿ ||ದೀನನೊಬ್ಬನು ಬರಲು ದೋಷಿಯಾದವನೆಂದು ಆನನವ ತಿರುಹುವನೇ ಅವನಿಯೊಳಗೇ 1 ಅನ್ನ ಕಾರಣವಾದ ಪರ್ಜನ್ಯದಿಂದಲಿ ಸಕಲಜನರನು ಪರಿತೋಷ ಬಡಿಸಿ ಕೃಪದಿ ||ಚೆನ್ನಿಗನೆ ಈ ಅಲ್ಪ ಪ್ರಾದೇಶಸ್ಥಿತರನ್ನುಬನ್ನ ಬಡಿಸುವರೇನೊ ಘನ್ನ ಮಹಿಮಾ 2 ಭಕ್ತವತ್ಸಲನೆಂಬೊ ಬಿರುದು ನಿನಗೆ ಉಂಟೆಸಖತನದಿ ಬಿನ್ನೈಪೆ ಸಾರ್ವಭೌಮ ||ಭಕುತ ಸುರಧೇನು ಗುರು ವಿಜಯ ವಿಠಲರೇಯಉಕುತಿ ಲಾಲಿಸಿ ವೃಷ್ಟಿಗರಿವುದು ಕರುಣದಲಿ 3
--------------
ಗುರುವಿಜಯವಿಠ್ಠಲರು