(ಭಾರತೀ ಪ್ರಾರ್ಥನೆ)
ಭಕ್ತ ಚಿಂತಾಮಣಿ ಭರತನರಮಣಿ
ಮುಕ್ತಿಸಾಧನ ವೀಣಾಪಾಣಿ ಕಲ್ಯಾಣಿ ಪ.
ವಿದ್ಯಾಮಾನಿನಿ ವಿಭವನಿದಾನಿ
ಸದ್ಯೋಜಾತಸುಪರ್ಣರ ಜನನಿ
ಹೃದ್ಯವರುದ್ಧನಾದ್ಯ ವಿದ್ಯಾವಿದಾರಣಿ ನೀ-
ನಿದ್ದುಮನದಿ ಶುದ್ಧ ಬುದ್ಧಿಯ ಕರುಣಿಸು 1
ನಾಲಿಗೆಯೊಳು ನಿನ್ನ ಲೀಲೆಯ ತೋರೆ
ಪಾಲಕರನು ಕಾಣೆ ಪವನನೊಲಿವ ಜಾಣೆ
ನೀಲ ಮೇಘ ನಿಭಾನನೆ ನವ ಪ್ರವೀಣೆ 2
ಅಸು ಗಣವೆಲ್ಲ ನಿನ್ನೊಶದೊಳಗಿಹವು
ಅಸಮಸಾಹಸ ವಾಯು ವಶದಿ ನೀನಿರವು
ಅಸುರಾರಿ ಶೇಷಾದ್ರಿವಶೀಯ ಮೋಹದ ಚಿಕ್ಕ
ಸೊಸೆಯೆ ಸಕಲಜನ ವಶಕರಿ ವರದೆ 3