ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಆ) ಯಾದವಕುಲ ದೀಪ ಶ್ರೀಪ ಯಾದವ ಕುಲದೀಪ ಪ ಮಾಧವ ಪಾಹಿ ಅ.ಪ ಶರಣ ರಕ್ಷಕ ಬಿರುದನು ಕೇಳಿ ಶರಣು ಹೊಕ್ಕೆನೋ ದೇವ 1 ಭುವನಪಾವನ ತವಪದ ಧ್ಯಾನ ತವಕದಿ ಪಾಲಿಸೋ ದೇವ 2 ಲಕುಮೀಕಾಂತನೆ ಸಕಲಕೆ ನೀನೆ ಮುಕುತಿದಾತನೆ ದೇವ 3
--------------
ಲಕ್ಷ್ಮೀನಾರಯಣರಾಯರು
ಕರುಣಿಸು ವರಗೌರಿ ಭರದಿಂದ ವರವನ್ನೂ ಶರಣಾಪ್ತ ಬೇಡುವೆ ನಿನ್ನಾ ಪ. ಪಾರ್ವತೀ ತಾಯೇ ಪಾಮರರಿಗೆ ಪರಮಪಾವನ್ನೆ ಪರಿಪಾಲಿಸುತ್ತ ವರವಿತ್ತು ನೀ ಕಾಪಾಡೆ 1 ಪತಿಪಾದ ಸೇವಾ ಸತತದೊಳಿತ್ತು ಸತಿಗೆ ಮಾಗಲ್ಯ ನಿರತವೀಯೆ ತಾಯೆ ಸಕಲಕೆ ಶ್ರೀ ಗೌರಿ2 ಪಾದ ಸೋಸಿಲಿ ಭಜಿಪೆ ವರವೀಯೆ ತಾಯೆ ಶಂಕರಿ ಕಾಯೆ ದೇಹಿಮೆ 3
--------------
ಸರಸ್ವತಿ ಬಾಯಿ
ದೇಶಿಕರಿಗೆ ದೇವ ನೀನಹುದಯ್ಯ ಲೇಸು ಲೇಸಾಗಿ ಪಾಲಿಸೊ ಎನ್ನಯ್ಯ ಧ್ರುವ ಅನಾಥನಾಥ ನೀನೆ ಸಾನುಕೂಲ ಅನುದಿನ ಮಾಡುವೆ ನೀ ಪ್ರತಿಪಾಲ 1 ಅಣುರೇಣುಕ ಸಾಹ್ಯ ಮಾಡುವ ಸ್ವಾಮಿ ನ್ಯೂನ ನೋಡದೆ ತಪ್ಪು ಮಾಡುವಿ ಕ್ಷಮೆ 2 ನೀನೆ ಸಕಲಕೆಲ್ಲ ಸಲಹುವ ದಾತ ಜನವನದೊಳು ಘನಗುರು ಸಾಕ್ಷಾತ 3 ದೇವಾದೀದೇವ ಶ್ರೀದೇವ ಅವಧೂತ ಭವ ಹರ ಗುರು ನೀನೆ ಸದೋದಿತ 4 ದೀನಮಹಿಪತಿ ಸ್ವಾಮ್ಯಹುದೋ ಕೃಪಾಲ ಭಾನುಕೋಟಿತೇಜ ನೀನೆ ಅಚಲ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನರರಿಗೆಲ್ಲಿಯ ಭವಬಂಧ ಜ್ಞಾನಿಗಳಾದನರರಿಗೆಲ್ಲಿಯ ಭವಬಂಧತರಣಿಬಿಂಬವ ತಮಮುಸುಕಲು ಬಲ್ಲುದೆಹರಹರ ಪಾಹಿ ಶಂಕರ ರಾಮೇಶ್ವರನೆಂಬ ಪ ಸರಸಿಜಾಪ್ತನ ಕರಗಳೊಳು ಬಲುಪರಮಾಣುಗಳು ವರ್ತಿಸುವೊಲುಪರಿಪೂರ್ಣಬ್ರಹ್ಮವೊಂದರೊಳು ಬ್ರಹ್ಮಾಂಡಗಳಿರುವವನಂತ ಕೋಟಿಗಳೆಂದು ತಿಳಿದಂಥಾ1 ಬಿಂದಿಗೆ ಬಿಲುಬಿಲೆ(?) ಗಳನಂದುನಬಂದಂತೆ ಸೃಜಿಸಿ ಮತ್ತದನುಪೊಂದಿಸುವಂತೆ ವಿಶ್ವವನು ಪುಟ್ಟಿಸಿ ಲೀಲಾಸ್ಪಂದದಿಂದಡಗಿಪನೀಶನೆಂದರಿದಂಥಾ2 ವಿರುಪ ಕಾಂಚನಮೋರಂತೆ ನಾನಾಪರಿಯ ಆಭರಣವಾದಂತೆಪರಮಾತ್ಮನೋರ್ವನನೇಕನಾಮಂಗಳಧರಿಸಿಹ ಸರ್ವವು ಬ್ರಹ್ಮವೆಂದರಿದಂಥಾ3 ಇರುವುದೀಲೋಕದೊಳೆರಡು ತಮ್ಮ ಸಂಗಡಬರುವುದು ಪರಲೋಕಕೆರಡುಇರುವುದನೇ ಇಟ್ಟು ಬರುವುದು ಬಯಸುತಪರಹಿತಚರಿತದಿ ನಿರುತ ವರ್ತಿಸುವಂಥ4 ಸಾಸಿರದಳ ಕಮಲದೊಳ್ ಇಹಭಾಸುರ ಪ್ರಣವ ಪೀಠದೊಳುಈ ಸಕಲಕೆ ಸಾಕ್ಷಿಕನಾದ ಕೆಳದಿ ಪು-ರೇಶ ರಾಮೇಶನ ನಿರತ ಧ್ಯಾನಿಸುವಂಥಾ5
--------------
ಕೆಳದಿ ವೆಂಕಣ್ಣ ಕವಿ
ಲೋಕ ನಾಯಕ ಲಕ್ಷ್ಮೀಲೋಲನಾ ಸ್ಮರಣೆ ಬಿಟ್ಟೂ ಪ ವಿದಿ ಮುನ್ನೆ ಬರದಿಷ್ಟಾ ಯಡಿಯಾತಪ್ಪಾದು ತುದಿಮೊದಲಿಂದಾ ಮಾಡಿದ ದೋಷವೆಲ್ಲಾ ಬೆದರಿಸಿದರೆ ಅದು ಬಿಡಲು ಬಲ್ಲುದೆ ಕೇಳೂ ಪಾದ ಭಜನಿಯ ಬಿಟ್ಟು 1 ನಾನಾಪರಿಯ ಮನಸೂ ನಟಿಸುವದಲ್ಲಾದೆ ಏನು ಎಲ್ಲವೂ ವ್ಯರ್ಥಾ ವೇದನೆ ನಿಂದೆ ನೀನು ಮಾಡಿದಾ ಫಲ ನಿನಗುಣಿ ಸದೆ ಬಿಡದೂ ಮಾನವಾಧೀಶನಂಘ್ರಿ ಧ್ಯಾನವೆಂಬುದು ಬಿಟ್ಟು 2 ಸಕಲಕೆ ಕರ್ತನಾಗಿ ಸರ್ವೋತ್ತಮನಿರಲು ಭಕುತಿ ಭಾವನೆಯಿಂದ ಭಜಿಸಾದೆ ನಿ ವಿಕಟಯೋಚನೆಯಿಂದ ಏನುಫಲವು ಇಲ್ಲಾ ನಿಕರ `ಹೊನ್ನೆಯ ವಿಠ್ಠಲನ ' ನಾಮೋಪಾಸನೆ ಬಿಟ್ಟು 3
--------------
ಹೆನ್ನೆರಂಗದಾಸರು
ಸರಸಿಜೋದ್ಭವನುತ ಸಿರಿಲೋಲ ಹರಿ ಸರ್ವರೊಳಿಹ ಶ್ರೀ ಗೋಪಾಲ ಶರಣಾಗತವತ್ಸಲ ಕರುಣಾನಿಧಿ ಕೃಪಾಲ ಸುರಜನ ಸಾನುಕೂಲ ವರಮುನಿಪಾಲ 1 ಮಾಮನೋಹರ ಮಾರಪಿತನೀತ ಕಾಮಪೂರಿತ ವಿಮಲ ಚರಿತ ಸಾಮಗಾಯನಪ್ರಿಯ ಸೋಮಶೇಖರ ಧೇಯ ಸಾಮಜ ವರದ ಸಮಸ್ತಹೃದಯ 2 ಸಾಹ್ಯಸಕಲಕೆ ಸನ್ನಿಧನೀತ ಇಹ ಸರ್ವಾನಂದ ಸರ್ವಭರಿತ ಸ್ವಹಿತ ಸುಖದಾತ ಬಾಹ್ಯಾಂತ್ರ ಸದೋದಿತ ಮಹಿಪತಿ ಪ್ರಾಣನಾಥ ಶ್ರೀಹರಿ ಸಾಕ್ಷಾತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು