ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾರ್ವತಿದೇವಿ ಕರುಣದಿ ಕಾಯೆ ತಾಯೆ ಕರುಣಾಭರಣೆ ವಿಶ್ವಂಭರಣೆ ಪ. ಕರುಣಿಸಿ ಕಾಯೆ ತಾಯೆ ಮರೆಯದೆ ನಿನ್ನಯ ಚರಣಸ್ಮರಣೆಯಿತ್ತು ಭರದಿ ಕಾಪಾಡೆ ಅ.ಪ. ಅಂಬಾ ಲೋಕೇಶ್ವರಿ ಅಂಬಿಕೆ ನಿನಪಾದ ನಂಬಿದವರಿಗೆ ಕಷ್ಟಗಳುಂಟೆ ತಾಯೆ ನಿನ್ನ ಕಂಬುಕಂಠನರಾಣಿ ಬೆಂಬಿಡದಲೆ ಕಾಯೆ ಸಂಭ್ರಮದಲಿ ನಿನ್ನ ಇಂಬ ತೋರಿಸುತ 1 ಅಖಿಳಾಂಡನಾಯಕಿ ಸುಖಪ್ರದಾಯಕಿ ಸಖ ಶಂಕರನೊಳು ಸುಖಿಪ ಕಲ್ಯಾಣಿ ಅಕಳಂಕ ಮಹಿಮಳೆ ಸಕಲಕಾಲದಿ ನಿನ್ನ ಭಕುತಿಯೊಳ್ ಪೂಜಿಪÀ ಸಖರೊಳಗಿರಿಸೆ 2 ಭಕ್ತ ಮಂದಾರೆ ಭಕ್ತಿ ಮುಕ್ತಿಯನೀಯೆ ಸಹೋದರಿ ಕಾಯೆ ಭುಕ್ತಿಗೋಸುಗ ನಿನ್ನ ಸ್ಮರಣೆ ನಾನೊಲ್ಲೆನೆ ಶಕ್ತಿ ಸ್ವರೂಪಿಣಿ ಶಂಕರಿ ಶುಭಕರಿ 3
--------------
ಸರಸ್ವತಿ ಬಾಯಿ