ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾರಿಗುಸರಲೇನು ದುರಿತಾರಿ ನೀನೆ ರಕ್ಷಿಸು ಕಂ- ಸಾರಿ ನೀನೆ ರಕ್ಷಿಸು ಮುರಾರಿ ನೀನೆ ರಕ್ಷಿಸು ಪ. ಭಾರಿ ಭಾರಿ ನಿನ್ನ ಪದವ ಸೇರಿದವರ ಕಾಯ್ದ ದೊರೆಯೆ ಅ.ಪ. ಪತಿಗಳೈವರಿದಿರೆ ಪತಿವ್ರತೆಯ ಖಳನು ಸೆಳೆಯೆ ಲಕ್ಷ್ಮೀ- ಪತಿಯೆ ನೀನೆ ಕಾಯ್ದೆಯಲ್ಲದೆ ಗತಿಯದಾರು ತೋರ್ದರಯ್ಯ 1 ಪಿತನ ತೊಡೆಯೊಳಿದ್ದ ಸುತನ ಸತಿಯು ಕಾಲಿನಿಂದೊದೆಯೆ ಖತಿಯೊಳೈದಿ ಭಜಿಸೆ ಅತಿಶಯದ ವರವನಿತ್ತೆ 2 ದನುಜ ಕೋಪದಿಂದ ತನ್ನ ತನುಜನನ್ನು ಬಾಧೆಗೊಳಿಸೆ ಮನುಜ ಸಿಂಹನಾಗಿ ಭಕ್ತಗನುಪಮಾದ ಹರುಷವಿತ್ತೆ 3 ಮಕರ ಬಾಧೆಯಿಂದ ಕರಿಯು ಸಕಲಕರ್ತನೆನುತಲೊದರೆ ಅಖಿಳ ದೈವಂಗಳಿರಲು ಬಕವಿರೋಧಿ ನೀನೆ ಪೊರೆದೆ 4 ಕೂರ್ಮ ಕ್ರೋಢ ಸಿಂಹ ಬ್ರಾಹ್ಮಣೇಂದ್ರ ರಾಮಕೃಷ್ಣ ಬುದ್ಧ ಕಲ್ಕಿ ದಾನವಾರಿ ಸಲಹೊ ಎನ್ನ 5 ಸರ್ವಲೋಕ ಜನಕ ನಿನ್ನ ಸರ್ವಕಾಲದಲ್ಲಿ ನೆನೆವೆ ವಿನುತ ಸರ್ವಸೌಖ್ಯ ನೀಡು ಹರಿಯೆ 6 ಕಂಜಜೇಶ ಪನ್ನಗೇಶ ನಿರ್ಜರೇಶ ಮುಖ್ಯ ದಾಸವರದ ಶೇಷ ಭೂಧರೇಶ ಎನ್ನ ಸಲಹೊ ಬೇಗ 7
--------------
ತುಪಾಕಿ ವೆಂಕಟರಮಣಾಚಾರ್ಯ
ರಾಮ ರಾಮ ರಾಮ ಎಂದು ಸ್ಮರಿಸೊ ನೀ ಮನಾ ಪ್ರೇಮದಿಂದ ಜಾನಕಿಪತಿಯ ಅನುದಿನಾ ಪ ಇಂದು ಶೇಖರ ವಂದ್ಯ ಗೋವಿಂದ ದೇವನಾ ಮಂದರಾದ್ರಿ ಗಿರಿಯನೆತ್ತಿದ ಮಹಾಮಹಿಮನ ಕಂದ ಕೂಗಲು ಕಂಬದಿ ಬಂದ ಕರುಣಾ ಸಾಗರನ ಚಂದದಿಂದ ಚಲನೆಯಿಲ್ಲದೆ ಚೆಲುವ ಕೃಷ್ಣನಾ 1 ಕುಲಸತಿಯ ಕುಚದಲ್ಲಿಟ್ಟ ಕೋಮಲಾಂಗನ ಒಲಿದು ಧ್ರುವಗೆ ಪಟ್ಟವನಿತ್ತ ವಾರಿಜನಾಭಾನಾ ಜಲದಿ ಬಂಧಿಸಿ ದೈತ್ಯರನ ಛೇದಿಸಿದಾತನಾ ಸುಲಭದಿಂದ ಹೃದಯದಲ್ಲಿ ಸ್ತುತಿಸೊ ನೀ ಇನ್ನಾ 2 ಸಿಂಧುಶಯನ ಶ್ರೀನಿವಾಸ ಸಕಲಕರ್ತನಾ ನಂದದಿಂದ ಹೆನ್ನ ವಿಠ್ಠಲ ಇಂದಿರೇಶನ ಪಾದ ದ್ವಂದ್ವ ಭಜಿಸಿ ಹರುಷದಿ ಮನಾ ಕುಂದುಯಿಲ್ಲದೆ ಕಾಯ್ವ ಭಾನುಕೋಟಿ ತೇಜನಾ 3
--------------
ಹೆನ್ನೆರಂಗದಾಸರು
ಸ್ವಾಮಿ ಭಜನೆ ಮಾಡೊ ಮನುಜ ಪ್ರೇಮದಿಂದಲಿ ಪಾದ ಹಿಡಿದು ಪ ಬಂಧು ಬಳಗ ಭಾಗ್ಯವೆಂಬ ಬಯಲು ವಸ್ತುವೊ ಹಿಂದು ಮುಂದೇನು ಬರುವರು ಯಾರು ಇಲ್ಲವೊ ಎಂದು ತಿಳಿದು ಹರಿಯ ಮನದಿ ಮರೆಯಬೇಡವೊ ಇಂದಿರೇಶ ಸಕಲಕರ್ತ ವೆಂಕಟಾದ್ರಿ ನಿಲಯನಾದ 1 ನಿತ್ಯನೇವÀು ನಿಷ್ಠೆಯಿಂದ ನಿಜವು ತಿಳಿದು ನಿ ಸತ್ಯವಂತರ ಸಂಗ ಬಿಡದೆ ಸರ್ವಕಾಲದಿ ಭೃತ್ಯರಿಗೆ ಭೃತ್ಯನಾಗಿ ಪೂರ್ಣಭಾವದಿ ಮರಿಯದ್ಹೋಗಿ ಬಿಡದೆ 2 ಗಾನಲೋಲ ಕರುಣಾಸಾಗರ ಘನವಿಲಾಸನ ಭಾನುಕೋಟಿ ತೇಜನಾದ ಪರಮ ಪುರುಷನಾ ಶರಧಿ ಧ್ಯಾನದಲಿ ಚಿತ್ತವಿಟ್ಟು ಧೇನು ಪಾಲಕ ದಿವಿಜವಂದ್ಯನ 3
--------------
ಹೆನ್ನೆರಂಗದಾಸರು