ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವುದೊಳ್ಳೆಯದೊ ನಿನ್ನಂಗ - ಚೆಲುವದೇವ ಬಂಕಾಪುರದ ಲಕುಮಿ ನರಸಿಂಗ ಪ ಜಗದೊಳಗೆ ತಾನು ತಂದೆಯ ಮಾತು ಕೇಳದಾಮಗನು ಇಹ ಪರಕೆ ಸಲುವ ಪ್ರಾಜ್ಞನೆ ?ಬಗೆಗೊಳಿಸಿ ಪ್ರಹ್ಲಾದ ಪಿತನೊಡಲ ನಿನ್ನ ಕೂ-ರುಗುರಿನಿಂ ಬಗೆಸಿದಾತಂಗೆ ಮುಕುತಿಯನೀವೆ 1 ಪೊಡವಿಯೊಳು ಅಣ್ಣನಾಜ್ಞೆಯ ಮೀರಿ ನಡೆಯುತಿಹಒಡಹುಟ್ಟಿದವಗೆ ಕೈವಲ್ಯವುಂಟೆ ?ದೃಢದಲಿ ವಿಭೀಷಣಾಗ್ರಜನನ್ನು ಬಾಣದಲಿಕೆಡಹಿಸಿದ ಬಳಿಕವಗೆ ಸ್ಥಿರಪಟ್ಟ ಕಟ್ಟಿದೆ2 ರೂಢಿಯಲಿ ಗುರುದ್ರೋಹವನು ಮಾಡಿದವನ ಮೊಗನೋಡಿದಾಗಲೆ ಪ್ರಾಯಶ್ಚಿತ್ತವುಂಟುನೋಡಿದಾಗಲೆ ಬೃಹಸ್ಪತಿಸತಿಗೆ ಅಳುಪಿದನಸೂಡಿದಾತನ ಸ್ನೇಹವನು ಮಾಡಿಕೊಂಡಿರ್ಪೆ 3 ದೇಶದೊಳು ವಂಶಕಂಟಕರೆನಿಸಿದವರೊಳಗೆಭಾಷಣವ ಮಾಡಬಪ್ಪುದೆ ಪ್ರಾಜ್ಞರು ?ಬೇಸರಿಸದೆ ಕೌರವರ ಕೊಂದ ಪಾಂಡವರ ಸಂ-ತೋಷದಲಿ ಪಕ್ಷಿಕರ ಮಾಡಿಕೊಂಡಿರ್ಪೆ 4 ಪೊಡವಿಪತಿ ಕೇಳು ಶ್ರೀ ಆದಿಕೇಶವನೆ ಹಿಂ-ಗಡೆಯಲ್ಲಿ ಮನೆಯ ಕಟ್ಟಿಸಬಾರದೆ ?ಬಿಡೆಯವಿಲ್ಲದೆ ಸಭಾಮಧ್ಯದಲಿ ಹೆಂಡತಿಯತೊಡೆಯ ಮೇಲ್ಕುಳ್ಳಿರಿಸಿಕೊಂಡಿರ್ಪ ಹಿರಿಯತನ 5
--------------
ಕನಕದಾಸ
ದಾಮ ಶೋಭಿತ ವಿಠಲ | ಸಾಮ ಸನ್ನುತನೇ ಪ ಪ್ರೇಮದಿಂದಿವಳ ಮನ | ಕಾಮ ಪೊರೈಸೋ ಅ.ಪ. ಯೇಸೊ ಜನ್ಮದ ಪುಣ್ಯ | ರಾಶಿ ಫಲ ಒದಗುತಲಿದಾಸತ್ವ ದೀಕ್ಷೆಯನು | ಆಶಿಸುತ್ತಿಹಳೋ |ದಾಸವರ್ಯರು ವಿಜಯ | ದಾಸರುತ್ಸವದಿ ಸಂ-ತೋಷದಲಿ ಬಿನ್ನಹವ | ಲೇಸು ಗೈದಿಹಳೋ 1 ಸಾರ ಚಾರು ಮೂರುತಿಯೇ 2 ಆನಂದ ಮುನಿ ಮತದಿ | ಸ್ವಾನುಭವ ದೀಕೆಯನುಜ್ಞಾನ ಭಕ್ತ್ಯಾದಿ ಸಂ | ಧಾನ ತಿಳಿಸುತಲೀ |ಮಾನನಿಧಿ ಕೈ ಪಿಡಿದು | ದೀನಳನು ಪೊರೆಯೆಂದುಪ್ರಾಣ ಪ್ರಾಣನೆ ಬೇಡ್ವೆ | ದೀನ ವತ್ಸಲನೇ 3 ಸಾಧನದಿ ಸತ್ವತೆಯ | ಹಾದಿಯಲ್ಲಿಹಳೀಕೆಸಾಧುಗಳ ಕಂಡು ಹೃದ | ಯಾದ್ರ್ರ ಭಾವದಲೀ |ಮೋದ ಬಡಿಸುತ ಸೇವೆ | ಶ್ರೀಧರನಿಗರ್ಪಿಪಳುಹೇ ದಯಾಂಬುಧೆ ಸಲಹೊ | ಸಾಧು ಜನ ವಂದ್ಯಾ 4 ಸರ್ವಕಾಲವು ದೇಶ | ಸರ್ವಗುಣದ್ರವ್ಯದಲಿದುರ್ವಿಭಾವ್ಯನ ವ್ಯಾಪ್ತಿ | ಸ್ಛುರಣೆಯನು ಕೊಡುತಾ |ಸರ್ವಾಂತರಾತ್ಮಗುರು | ಗೋವಿಂದ ವಿಠ್ಠಲನೆದರ್ವಿ ಜೀವಿಯ ಹೃದಯ | ಗಹ್ವರದಿ ತೋರೋ 5
--------------
ಗುರುಗೋವಿಂದವಿಠಲರು