ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋಪಿ ಇವನು ನಿನ್ನಾ ಪ ಜಗವ ನಿರ್ಮಿಸಿ ಪಾಲಿಸಿ ಅಳಿಸುವ ಅಗಣಿತ ಸುಗುಣಾ ಭರಣನೆ ಇವನು ಅ.ಪ ಬೆಣ್ಣೆಯ ಕದ್ದನು ಸಣ್ಣವನಿಹ ಬಹು ಚಿಣ್ಣರ ಕೂಡುತ ಗೋಗಣ ಕಾಯುವ ಮನ್ಮನ ಪುಥ್ಥಳಿ ಕಳಿಸುವದಾಗದು ಎನ್ನುವ ನುಡಿಗಳ ಬದಿಗಿಡು ತಾಯಿ ಉಣ್ಣುತ ಉಣ್ಣುತ ಮೊಲೆಯನು ಕೊಂದಿಹ ಉನ್ನತ ರಕ್ಕಸಿ ಪೂತಣಿಯನ್ನಿವ ಮಣ್ಣನು ಕಂಡರು ಕಂಸನದೂತರು ಪೂರ್ಣಾನಂದನು ಸರಿ ಇವನಮ್ಮ 1 ಜಾರ ಚೋರ ಸುಕುಮಾರನು ಸುಂದರ ನಾರೇರ ವಲಿಸಿ ಸೇರಿದ ನಿಶಿಯಲಿ ಪೋರನೆಂಬ ಮನ ದೂರವಗೈದುಗ ಭೀರ ಮಹಿಮ ಜಗ ಸಾರನೆಂದರಿಯೆ ಭಾರಿಗಿರಿಯನೆತ್ತಿ ಊರಿಗೆ ಊರನು ಸೇರಿಸಿ ಪೊರೆದಿಹಪಾರಮಹಿಮ ಜಂ ಭಾರಿದರ್ಪಹರ ಪೋರನೆ ಬಿಡುಬಿಡು ನಿಗಮ ಸಂಚಾರನೆ ಖರೆಯೆ 2 ಕಾಲ್ಗಳು ಸೋಕಲು ಶಕಟನು ಬಿದ್ದನು ಶೀಳುತ ಕೊಕ್ಕನು ಬಕನಂ ಕೊಂದನು ಕಾಳಿಯ ತುಳಿಯುತ ಗರ್ವವ ನಿಳಿಸಿದ ಲೀಲಾಜಾಲದಿ ಜ್ವಾಲೆಯ ನುಂಗಿದ ಬಾಲರು ಕೇಳಲು ಆಲಯತೋರಿದ ಪಾಲಿಸಿ ವರುಣನ ತಂದೆಯ ಕಂದನ ಲೋಲನೆ ಸರಿ ಜಗಮೂಲನು ಕೇಳೆ 3 ನೀರಜ ನಾಭಗೆ ಗೊಲ್ಲತಿಯ ಗಣ ಬೀರಲ್ ಸಾಧ್ಯವೆ ಮೋಹವ ನೆಂದಿಗು ಶ್ರೀರತಿದಾಯಕ ಕೊಳ್ಳುವನೇ ರತಿ ಭವ ತಾರಕ ಶುಭ ಶೃಂಗಾರ ಪೂರ್ಣ ಪರಿವಾರದಭೀಷ್ಠವ ಖರೆ ಭೂರಿದಯಾಮಯ ನಾರಾಯಣನಿವ ದೋಷ ವಿದೂರ 4 ಮೆಲ್ಲಗೆ ಬಾಯೊಳು ಎಲ್ಲವ ತೋರಿದ ಮಲ್ಲನು ಸರ್ವರ ವಲ್ಲಭ ಸಿದ್ಧವು ಗೊಲ್ಲನ ವೇಷದಿ ಇಲ್ಲಿಹನಮ್ಮ ಇಲ್ಲವೆ ಸಮರಿವಗೆಲ್ಲಿಯ ಸತ್ಯ ಮಲ್ಲರ ಮರ್ದಿಸಿ ಕೊಲ್ಲುತ ಕಂಸನ ನಿಲ್ಲಿಸಿ ಧರ್ಮವ ಕಾಯುವ ನಮ್ಮ ಬಲ್ಲಿದ “ಶ್ರೀಕೃಷ್ಣವಿಠಲ” ಬೇಗನೆ ನಿಲ್ಲಿಸಿ ಕೊಳ್ಳದೆ ಕಳುಹೇ ತಾಯಿ 5
--------------
ಕೃಷ್ಣವಿಠಲದಾಸರು
ಚರಣದಾಸರ ಸದುಹೃದಯ ನಿವಾಸನೆ ಸಿರಿರಾಮ ಪರಮ ಪಾವನೆ ವರಜಾಹ್ನವೀ ಜನಕನೆ ಸಿರಿರಾಮ ಪ ಶರಣಜನರ ಮೇಲ್ನುಡಿಯೋಳ್ಸಂಚಾರನೆ ಸಿರಿರಾಮ ನೆರೆನಂಬಿ ಭಜಿಪರ ಭವಮಲಹರಣನೆ ಸಿರಿರಾಮ ಕರುಣದೊದೆದು ಯುವತಿಕುಲವನುದ್ಧರಿಸದನೆ ಸಿರಿರಾಮ ವರದ ವಾಸುಕಿಶಾಯಿ ಜಗದೇಕ ಬಂಧುವೇ ಸಿರಿರಾಮ 1 ಧುರಧೀರವಾಲಿಯ ಗರುವನಿವಾರನೆ ಸಿರಿರಾಮ ಮರೆಬಿದ್ದ ಸುಗ್ರೀವನ ದು:ಖಪರಿಹಾರನೆ ಸಿರಿರಾಮ ಪರಮಭಕ್ತ್ಹನುಮಗೆ ಕರವಶನಾದನೆ ಸಿರಿರಾಮ ಶರಣುಬಂದಸುರಗೆ ಸ್ಥಿರಪಟ್ಟವಿತ್ತನೆ ಸಿರಿರಾಮ 2 ಶರಧಿಮಥನಮಾಡಿ ಸುರರ ರಕ್ಷಸಿದನೆ ಸಿರಿರಾಮ ಹರನಕೊರಳ ಉರಿ ಕರುಣದ್ಹಾರಿಸಿದನೆ ಸಿರಿರಾಮ ವರಗಿರಿನಂದನೆಮನ ಸೂರೆಗೈದನೆ ಸಿರಿರಾಮ ಸರುವದೇವರದೇವ ಅದ್ಭುತಮಹಿಮನೆ ಸಿರಿರಾಮ 3 ಕರಿಯ ರಕ್ಷಣೆಗಾಗಿ ಕಾಸಾರಕ್ಕಿಳಿದನೆ ಸಿರಿರಾಮ ತರುಣಿಮೈಗಾವಗೆ ಚರನಾಗಿ ನಿಂತನೆ ಸಿರಿರಾಮ ಚರಣದಾಸರಮನೆ ತುರಗವ ಕಾಯ್ದನೆ ಸಿರಿರಾಮ ಪರಮಭಾಗವತರನರೆಲವ ಬಿಟ್ಟಿರನೆ ಸಿರಿರಾಮ 4 ಅನುಪಮ ವೇದಗಳಗಣಿತಕ್ಕೆ ಮೀರಿದನೆ ಸಿರಿರಾಮ ಸನಕಸನಂದಾದಿ ಮನುಮುನಿ ವಿನಮಿತನೆ ಸಿರಿರಾಮ ವನರುಹ ಬ್ರಹ್ಮಾಂಡ ಬಲುದರದಿಟ್ಟಾಳ್ವನೆ ಸಿರಿರಾಮ ಮನಮುಟ್ಟಿ ಭಜಿಪರ ಘನಮುಕ್ತಿ ಸಾಧ್ಯನೆ ಸಿರಿರಾಮ 5
--------------
ರಾಮದಾಸರು
ಪಾಲಿಸೋ ಪರಿಪಾಲಿಸೋ ಪ ಪಾಲಿಸೋ ನೀ ಕಾಲನಾಮಕ-ಶ್ರೀಲೋಲ ಕಾಲಕರ್ಮದಲೆನ್ನಕರುಣಿಸಿ ನೀನೀಗ ಅ.ಪ ದುಷ್ಟಜನರ ಸಂಹಾರಕ-ಸರ್ವ ಶಿಷ್ಟಜನರ ಪರಿಪಾಲಕ-ದೇವ ಸೃಷ್ಟ್ಯಾದ್ಯಷ್ಟಕರ್ತುಕ-ತ್ವದ್ಭಕ್ತರಾ- ಭೀಷ್ಟದಾಯಕಾ 1 ಜಗದ್ಭರಿತ ಜಗದಂತರ್ಯಾಮಿ-ಸರ್ವ ಜಗದಾದ್ಯಂತ ಭಿನ್ನನೇಮಿ-ನೀನೆ ಸ್ವಗತಭೇದಶೂನ್ಯಮಹಿಮಾ ಇನ್ನು ಜಗದ್ಭುಕು ಮಮಕುಲಸ್ವಾಮಿ 2 ಪರಮೇಷ್ಟಿಭವಇಂದ್ರವಂದಿತ-ಕ್ಷರಾ- ಕ್ಷರ ಪುರುಷ ಪೂಜಿತ-ಪಾದ ನಿರವಧಿಕಗುಣಗಣಾನ್ವಿತ ನೀನೆ ಜರಾಮರಣನಾಶ ವರ್ಜಿತ 3 ಮುಕ್ತಾಮುಕ್ತಾಶ್ರಯದೇವನೆ-ಸರ್ವ ಭಕ್ತಮುಕ್ತಿಪ್ರದಾತನೆ-ವ್ಯಕ್ತಾ ವ್ಯಕ್ತಪುರುಷದೇವನೆ ಪುರುಷ- ಸೂಕ್ತಸುಮೇಯ ಅಪ್ರಮೇಯನೆ 4 ಸ್ವರವರ್ಣ ಶಬ್ದವಾಚ್ಯನೆ-ದೇವ ಸುರಾಸುರಾರ್ಚಿತ ಪಾದನೆ ಓಂ- ಕಾರ ಪ್ರಣವ ಪ್ರತಿಪಾದ್ಯನೆ ನಿತ್ಯ ನಿಖಿಳಾಗಮದೊಳು ಸಂಚಾರನೆ5 ಅಚಿಂತ್ಯಾನಂತರೂಪಾತ್ಮಕ-ನಿನ್ನ ಭಜಕರ ಭವಬಂಧ ಮೋಚಕ-ಸರ್ವ ಅಬುಜಾಂಡ ಕೋಟಿನಾಯಕ ನೀನೆ ಜಗದಾದ್ಯಂತ ವ್ಯಾಪಕ6 ವೇದ ವೇದಾಂತ ವೇದ್ಯನೆ-ನೀನೆ ಆದಿಮಧ್ಯಾಂತದೊಳ್ ಖ್ಯಾತನೆ ಗುರು ಮೋದತೀರ್ಥರ ಹೃತ್ಕಾಂತನೆ ಶ್ರೀ ವೇಂಕಟೇಶ ಉರಗಾದ್ರಿವಾಸವಿಠಲನೆ 7
--------------
ಉರಗಾದ್ರಿವಾಸವಿಠಲದಾಸರು
ಪಾಲಿಸು ಪರಮೇಶಾ ಪಾಪವಿನಾಶಾಪಾಲಿಸು ಪಾರ್ವತೀಶಾಫಾಲಲೋಚನಫಣಿಭೂಷಣ ನತಜನಪಾಲನೆ ಪಾಪವಿಹಾರಣ ಕಾರಣ ಪನಿತ್ಯನಿರ್ಮಲ ಚಿತ್ತನೀಕ್ಷಿಸೋ ಎನ್ನನಿತ್ಯತೃಪ್ತನೆ ಖ್ಯಾತ ನಿತ್ಯನಂದನೆನೀಲಕಂಧರಶಶಿಧರನಿರ್ಮಲರಜತಾದ್ರಿ ನಿಲಯನೆ ವಿಲಯನೆ 1ಅಂಬಾ ವರದೇವ ಜಯ ಜಯವಿಶ್ವಕು-ಟುಂಬಿಲ ಸದ್ಭಾವಲಂಬೋದರ ಗುಹಜನಕ ಸದಾಶಿವನಂಬಿದೆ ಸಲಹೊ ಪ್ರಸೀತ ಸತ್ಪಾತ್ರ 2ಆಗಮಶ್ರುತಿಸಾರ ಭಕ್ತರಭವರೋಗಶೋಕವಿದೂರಯೋಗಿಗಳ ಹೃದಯ ಸಂಚಾರನೆ ಭವಬಂಧನೀಗಿಸು ಗೋವಿಂದ ದಾಸನ ಪೋಷನೆ 3
--------------
ಗೋವಿಂದದಾಸ
ಫಾಲಲೋಚನೆ ನನ್ನ ಪಾಲಿಸೆಂದಿಗು ಎನ್ನಪಾಹಿಪಾರ್ವತಿ ರಮಣ ಪಾವನಚರಣಪಾಪನಾತ್ಮಕ ಘನ್ನ ಪಾಪ ನಿವಾರಣಪಾಹಿಪನ್ನಗಭೂಷಣ ಪಂಚಾನನ ಪಅಂಬುಜೋದ್ಭವನು ತಾ ಅಮರಪೂಜಿತ ವಂದ್ಯಅಮಿತ ಮಂಗಲ ರೂಪನೆ ಆಶ್ರಿತದಾತಅಂಬರಕೇಶಿ ಚಿದಂಬರವಾಸನೆಅಗಣಿತಗುಣಮಹಿಮಅಂಗಜಭಂಗ 1ನಿಗಮಗೋಚರ ನೀನೆ ನೀಲಕಂಧರನೀನೆನಿರತನಂಬಿದೆ ನಿನ್ನನ್ನೆ ನಿಶ್ಚಲನೆನಿತ್ಯಾನಂದನು ನೀನೆನಿತ್ಯತೃಪ್ತನುನೀನೆನಿತ್ಯನಿರ್ಮಲ ರೂಪನೆ 2ತ್ರಿಪುರಸಂಹಾರನೆತ್ರಿಜಗಸಂಚಾರನೆತ್ರಿಯಂಬಕನೆ ಶಿವನೆ ತ್ರಿನೇತ್ರನೆತ್ರಿಮೂರ್ತಿಗಳ ಖ್ಯಾತ ತ್ರಿಶೂಲಧಾರನೆತ್ರಿಗುಣಾತ್ಮಕ ಗೋವಿಂದನಾ ದಾಸನವಂದ್ಯ3
--------------
ಗೋವಿಂದದಾಸ