ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಶೇಣಿಯ ಗೋಪಾಲಕೃಷ್ಣನನ್ನು ನೆನೆದು) ತಾಪವ ಬಿಡಿಸು ದಯಾಪರ ಶ್ರೀ ಗೋಪಾಲ ಕೃಷ್ಣ ನೀ ಕಾಪಾಡು ಸಂಸಾರ ಪ. ಲೋಕನಾಯಕ ನಿನ್ನ ಕರುಣವಂದಿದ್ದರೆ ಸಾಕೆಂಬೆ ಜ್ಞಾನಾನಂದಕರ ಪಾಕಶಾಸನ ಸುತಗೊಲಿದಾತನ ಭಂಡಿ ನೂಕಿ ನಡೆಸಿದ ಕೃಪಾಕರ ಮೂರುತಿ 1 ನಡೆವುದು ನುಡಿವುದು ಕೊಡುವುದು ಕೊಂಬುದು ಮಡದಿ ಮಂದಿರ ಮಮತಾಸ್ಪದದ ಒಡವೆ ವಸ್ತುವು ಮೊದಲಾದುದೆಲ್ಲವನು ಶ್ರೀ- ಮುಡಿಯ ಸಂವರಿಸುವ ಕರದಿ ಸಂಗ್ರಹಿಸುತ2 ನಿನ್ನಡಿಗಳ ನಂಬಿ ನಿಂದಿಹೆನಿಲ್ಲಿ ಪ್ರ- ಸನ್ನ ಮುಖಾಂಬುಜ ಪಾಲಿಸೆಂದು ಅನ್ಯರಿಗೆಂದೆಂದು ದೈನ್ಯ ತೋರಿಸಲಾರೆ ಪನ್ನಗಾಚಲವಾಸ ಪರಮ ದಯಾಳೊ 3
--------------
ತುಪಾಕಿ ವೆಂಕಟರಮಣಾಚಾರ್ಯ
ಬಡವರೆಲ್ಲ ಬದುಕಿ ಸುಖದಲಿ ಬಹುಕಾಲ ಪ ಬಡವರೆಲ್ಲ ಸುಖದಲಿ ಜಗ ಕಡುಕರುಣಕೆ ಪಾತ್ರರಾಗಿ ದೃಢದಿ ಬಾಳಿ ಸಡಗರದಲಿ ಅ.ಪ ಕುಕ್ಷಿಗಾಗಿ ಗೈದು ಬಂದುದು ಲಕ್ಷವೆಂದು ತಿಳಿದು ನಮ್ಮ ಲಕ್ಷ್ಮಣಾಗ್ರಜನಾಜ್ಞೆಯೆಂದು 1 ಮಾನರಕ್ಷಣೆಗೆ ವಸ್ತ್ರವುಟ್ಟು ನಾನು ಎಂಬ ಮಮತೆ ಬಿಟ್ಟು ಜ್ಞಾನರತ್ನವ ಸಂಗ್ರಹಿಸುತ 2 ಜಗದ ಜನಗಳಂತೆ ನಡೆಯದೆ 3 ಯೋಗಿಗಳನು ನೋಡಿ ಹಿಗ್ಗಿ ಭೋಗಿಗಳನು ನೋಡಿ ತಗ್ಗಿ ತ್ಯಾಗ ಬುದ್ಧಿಯುಳ್ಳವರಾಗಿ ಭಾಗವತರಾಚರಣ ಪಿಡಿದು 4 ಪರರ ಸ್ವತ್ತಿಗಾಸೆಪಡದೆ ಎರೆಡು ಸುಖವು ಕರಗತವೈ 5
--------------
ಗುರುರಾಮವಿಠಲ