ಒಟ್ಟು 6 ಕಡೆಗಳಲ್ಲಿ , 3 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಉಂಗುರ ಕಳೆದಾಗ ಮಾಡಿದ ಪ್ರಾರ್ಥನೆ) ಬೇಡಿಕೊ ಮೂಢಾ ಬೇಡಿಕೊ ಬೇಡಿಕೊ ಭಕ್ತವತ್ಸಲನಲ್ಲಿ ಭಕ್ತಿ ಮಾಡು ಪೂಜೆಯನು ಯಥಾಮತಿ ಶಕ್ತಿ ದೂಡುತ್ತ ದುರುಳರ ಕುಚಿತ್ತಯುಕ್ತಿ ರೂಢಿವಳಗೆ ಸಂಗ್ರಹಿಸು ವಿರಕ್ತಿ ಪ. ಲಾಭಾಲಾಭ ಜಯಾಪಜಂiÀiಗಳು ಸ್ವಾಭಾÀವಿಕವಾಗಿ ಬಹ ಹಗಲಿರುಳು ನಾ ಭಾಗಿ ವರದನ ಪದ ಪದ್ಮ ನೆರಳು ನೀ ಭಜಿಸಿದ ಮೇಲೆ ಬಾಯೊಳು ಬೆರಳು 1 ಯತ್ನವಿಲ್ಲದೆ ಬಹ ನಷ್ಟಗಳಂತೆ ರತ್ನ ಭಂಗಾರ ಸಿಕ್ಕುವುದ್ಯಾಕೆ ಚಿಂತೆ ನೂತ್ನವಾದ ಮೋಹವನು ಬಿಡು ಭ್ರಾಂತೆ ರತ್ನಗರ್ಭವ ನಂಬಿರುವುದೆ ನಿಶ್ಚಿಂತೆ 2 ಅರಿ ಮಿತ್ರೋದಾಸೀನರಿಲ್ಲವು ಹರಿಗೆ ಸರಿಯಾಗಿ ನಡೆಸುವ ಸರ್ವ ಜೀವರಿಗೆ ಪರ ವಸ್ತು ನೀನೆಂದು ಸೇವೆ ಮಾಳ್ಪರಿಗೆ ಸುರ ವೃಕ್ಷದಂತೆ ಕಾರಣವಾಹ ಸಿರಿಗೆ 3 ಋಣವಿಲ್ಲದೆ ವಸ್ತು ಕ್ಷಣವಾದರಿರದು ಉಣುವ ಭೋಗಗಳೆಂದು ತಪ್ಪವು ನೆರದು ಅಣು ಮಹತ್ತುಗಳಂತರಾತ್ಮನ ಬಿರುದು ಗಣನೆ ಮಾಳ್ಪರ ಕೂಡಿ ನೆನೆ ಮನವರಿದು 4 ಆಶಾ ಪಾಶದಿ ಸಿಕ್ಕಿ ಕೆಡದಿರು ವ್ಯರ್ಥ ಶ್ರೀಶನ ನೆನೆವುದೆ ಸಕಲ ವೇದಾರ್ಥ ಶೇಷಗಿರೀಶನು ಸತ್ಪುರುಷಾರ್ಥ ದಾಸಗೆ ತಾನಾಗಿ ಕೊಡಲು ಸಮರ್ಥ5
--------------
ತುಪಾಕಿ ವೆಂಕಟರಮಣಾಚಾರ್ಯ
(ಶೇಣಿಯ ಗೋಪಾಲಕೃಷ್ಣನನ್ನು ನೆನೆದು) ತಾಪವ ಬಿಡಿಸು ದಯಾಪರ ಶ್ರೀ ಗೋಪಾಲ ಕೃಷ್ಣ ನೀ ಕಾಪಾಡು ಸಂಸಾರ ಪ. ಲೋಕನಾಯಕ ನಿನ್ನ ಕರುಣವಂದಿದ್ದರೆ ಸಾಕೆಂಬೆ ಜ್ಞಾನಾನಂದಕರ ಪಾಕಶಾಸನ ಸುತಗೊಲಿದಾತನ ಭಂಡಿ ನೂಕಿ ನಡೆಸಿದ ಕೃಪಾಕರ ಮೂರುತಿ 1 ನಡೆವುದು ನುಡಿವುದು ಕೊಡುವುದು ಕೊಂಬುದು ಮಡದಿ ಮಂದಿರ ಮಮತಾಸ್ಪದದ ಒಡವೆ ವಸ್ತುವು ಮೊದಲಾದುದೆಲ್ಲವನು ಶ್ರೀ- ಮುಡಿಯ ಸಂವರಿಸುವ ಕರದಿ ಸಂಗ್ರಹಿಸುತ2 ನಿನ್ನಡಿಗಳ ನಂಬಿ ನಿಂದಿಹೆನಿಲ್ಲಿ ಪ್ರ- ಸನ್ನ ಮುಖಾಂಬುಜ ಪಾಲಿಸೆಂದು ಅನ್ಯರಿಗೆಂದೆಂದು ದೈನ್ಯ ತೋರಿಸಲಾರೆ ಪನ್ನಗಾಚಲವಾಸ ಪರಮ ದಯಾಳೊ 3
--------------
ತುಪಾಕಿ ವೆಂಕಟರಮಣಾಚಾರ್ಯ
ನೆಲೆಯಾಗಿ ನಿಲಿಸೆನ್ನ ನಿಲಯದಿ ಶ್ರೀಕಾಂತ ಸಿರಿ ಲಲನೆಯರೊಡಗೂಡಿ ಪ. ಸೂಕ್ತ ಪುರಾಣ ಭಾರತಗಳು ಪೊಗಳುವ ಭಕ್ತ ವತ್ಸಲತೆಯ ಬಹುಮತಿಯ ನಿತ್ಯ ಕೊಂಡಾಡುವ ಭೃತ್ಯಜನರ ಬೇಗ ಹೆತ್ತ ತಾಯಿವೊಲೆತ್ತಿ ಪಾಲಿಪ ಹರಿ 1 ವಿಧಿ ವಿಹಿತಗಳಾದ ಸದಮಲ ಕೃತಗಳ ಮುದದಿ ಮಾಡುವ ಸರ್ವ ಬುಧ ಜನರ ಸದನಕ್ಕೆ ಕರತಂದು ವಿಧವಿಧ ಪೂಜೆಯ ಒದಗಿ ಮಾಡುವ ಪೂರ್ಣ ನಿಧಿಮತಿಗಳನಿತ್ತು 2 ಬಂದ ಅತಿಥಿಗಳ ನಿಂದಿಸದಲೆ ಅಭಿ ವಂದಿಸಿ ಸತ್ಕರಿಸುತ ಫಲವ ಕುಂದಿಲ್ಲದಾನಂದ ಸಂದೋಹದಾಯಿ ಮುಕುಂದಗರ್ಪಿಸಿ ಸುಖದಿಂದ ಚರಿಸುವಂತೆ 3 ಅಹಿತಲ್ಪ ಶಯನನೀ ವಹಿಸಿದ ದಾಸರ ಸುರರು ಸಂಗ್ರಹಿಸುವರು ಕುಹಕ ವೈರಿಗಳನ್ನು ಬಹು ದೂರೋಡಿಸಿ ಮಹಾಮಹಿಮ ನೀ ಕರುಣದಿ 4 ಚತುರ ಹಸ್ತಗಳಿಂದ ಚತುರ್ವಿಧ ಫಲರಸ ಸ್ತುತಿಸುವ ದಾಸರೀ ಗತಿ ಬೇಗದಿ ಸತತ ಸುರಿವ ನಾಗಪತಿ ಗಿರಿನಿಲಯ ಶ್ರೀ ಪತಿ ನೀನೆ ಎನಗೆ ಸದ್ಗತಿಯಾಗಿ ಪೊಳವುತ್ತ 5
--------------
ತುಪಾಕಿ ವೆಂಕಟರಮಣಾಚಾರ್ಯ
ಬಡವರೆಲ್ಲ ಬದುಕಿ ಸುಖದಲಿ ಬಹುಕಾಲ ಪ ಬಡವರೆಲ್ಲ ಸುಖದಲಿ ಜಗ ಕಡುಕರುಣಕೆ ಪಾತ್ರರಾಗಿ ದೃಢದಿ ಬಾಳಿ ಸಡಗರದಲಿ ಅ.ಪ ಕುಕ್ಷಿಗಾಗಿ ಗೈದು ಬಂದುದು ಲಕ್ಷವೆಂದು ತಿಳಿದು ನಮ್ಮ ಲಕ್ಷ್ಮಣಾಗ್ರಜನಾಜ್ಞೆಯೆಂದು 1 ಮಾನರಕ್ಷಣೆಗೆ ವಸ್ತ್ರವುಟ್ಟು ನಾನು ಎಂಬ ಮಮತೆ ಬಿಟ್ಟು ಜ್ಞಾನರತ್ನವ ಸಂಗ್ರಹಿಸುತ 2 ಜಗದ ಜನಗಳಂತೆ ನಡೆಯದೆ 3 ಯೋಗಿಗಳನು ನೋಡಿ ಹಿಗ್ಗಿ ಭೋಗಿಗಳನು ನೋಡಿ ತಗ್ಗಿ ತ್ಯಾಗ ಬುದ್ಧಿಯುಳ್ಳವರಾಗಿ ಭಾಗವತರಾಚರಣ ಪಿಡಿದು 4 ಪರರ ಸ್ವತ್ತಿಗಾಸೆಪಡದೆ ಎರೆಡು ಸುಖವು ಕರಗತವೈ 5
--------------
ಗುರುರಾಮವಿಠಲ
ಮನವೆ ಶ್ರೀನಾರಾಯಣನನು ಸ್ಮರಿಸದೆ ಮಾಯಾಪಾಶಕೆ ಸಿಲುಕುವರೇ ಪ. ವನಜನಾಭನ ಪದ ವನರುಹಯುಗ್ಮವ ಅನುದಿನ ನೆನೆಯದೆ ಒಣಗುವರೇ ವನಿತಾಲಂಪಟನಾಗುತ ಸಂತತ ಮನಸಿಜಯಂತ್ರಕೆ ಮನಮರಗುವರೇ ಅ.ಪ. ತುಂಡು ಸೂಳೆಯರ ದುಂಡುಕುಚವ ಪಿಡಿದು ಗಂಡಸುತನವನು ಕೆಡಿಸುವರೆ ದಂಡಧರನ ಬಾಧೆ ಹೆಂಡತಿಯನು ಪಡ ಕೊಂಡು ವೇದನೆಯನು ತಾಳುವರೆ ಕಂಡು ಕಂಡು ನೀ ಗುಂಡಿಗೆ ಬಾಳ್ವರೆ ಹೆಂಡಿರ ಸುಖರಸ ಉಂಡರು ಸಾಲದೆ 1 ಬಂದ ಸುಖಕೆ ನೀ ಮುಂದುವರೆಯುತಲಿ ಮಂದ ಅಸಮ ದುಃಖ ತಾಳುವರೇ ಬಂದುದೆನ್ನ ಕಣ್ಣ ಮುಂದೆಯನುಭವಿಪೆ ಎಂದಿಗೆನ್ನಾಜ್ಞೆಯು ಬಂದಪುದೋ ನಿಜ 2 ಇಷ್ಟು ದಿನದಿ ನೀ ಭ್ರಷ್ಟೆಯರಲಿ ಮೋಹ ಪಟ್ಟ ಭಾಗ್ಯವನೆಲ್ಲ ತೋರೊ ನೀನು ಕಷ್ಟ ಮಾನಧನ ನಷ್ಟವಲ್ಲದೆ ಎಳ್ಳಿ- ನಷ್ಟು ಸುಖವನ್ನು ಕಾಣೆನಿನ್ನು ಇಷ್ಟಾರ್ಥಗಳೆಲ್ಲ ದೊರೆಕುವುದೈ ಪರ ಮೇಷ್ಠಿ ಪಿತನ ಮನಮುಟ್ಟಿ ನೀವ್ ಭಜಿಸಿರೊ 3 ವಿಷಯ ಪಳಂಚಿತನಾಗುವ ಸಂತತ ಪಂಚಡಕೀರನು ಆಗುವರೇ ಕರ್ಮ ಸಾಲದೆಂದೆನುತಲಿ ಸಂಚಿತ ಪಾಪವ ಸಂಗ್ರಹಿಸುವರೇ ಚಂಚಲಾಕ್ಷಿಯರ ಚಪಲದ ಮಾತನು ವಂಚನೆ ಎಂಬುದು ತಿಳಿಯದೆ ಇರುವರೆ 4 ಸಾರಿಸಾರಿ ಕೈ ಮುಗಿದು ಬೇಡುವೆನು ವಿ- ಕಾರ ದುರ್ಬುದ್ಧಿಯ ಬಿಡು ಎಂದು ಭಾರಿ ತಪ್ಪುಗಳ ಕ್ಷಮಿಸಿ ಕಾವ ಲಕ್ಷ್ಮೀ ನಾರಾಯಣ ನೀನೇ ಗತಿಯೆಂದು ಪಾರಮಾರ್ಥಿಕ ವಿಚಾರವ ಮಾಡುತ ಶ್ರೀ ರಮೇಶನ ಚರಣಾರವಿಂದವ ಸೇರೋ 5
--------------
ತುಪಾಕಿ ವೆಂಕಟರಮಣಾಚಾರ್ಯ
ಮನವೆ ಶ್ರೀನಾರಾಯಣನನು ಸ್ಮರಿಸದೆಮಾಯಾಪಾಶಕೆ ಸಿಲುಕುವರೇ ಪ.ವನಜನಾಭನ ಪದ ವನರುಹಯುಗ್ಮವಅನುದಿನನೆನೆಯದೆ ಒಣಗುವರೇವನಿತಾಲಂಪಟನಾಗುತ ಸಂತತಮನಸಿಜಯಂತ್ರಕೆ ಮನಮರಗುವರೇ ಅ.ಪ.ತುಂಡು ಸೂಳೆಯರ ದುಂಡುಕುಚವ ಪಿಡಿದುಗಂಡಸುತನವನು ಕೆಡಿಸುವರೆದಂಡಧರನ ಬಾಧೆ ಹೆಂಡತಿಯನು ಪಡಕೊಂಡು ವೇದನೆಯನು ತಾಳುವರೆಕಂಡು ಕಂಡು ನೀ ಗುಂಡಿಗೆ ಬಾಳ್ವರೆಹೆಂಡಿರ ಸುಖರಸ ಉಂಡರು ಸಾಲದೆ 1ಬಂದ ಸುಖಕೆ ನೀ ಮುಂದುವರೆಯುತಲಿಮಂದಅಸಮ ದುಃಖ ತಾಳುವರೇಬಂದುದೆನ್ನ ಕಣ್ಣ ಮುಂದೆಯನುಭವಿಪೆಎಂದಿಗೆನ್ನಾಜೆÕಯು ಬಂದಪುದೋ ನಿಜ 2ಇಷ್ಟು ದಿನದಿ ನೀ ಭ್ರಷ್ಟೆಯರಲಿ ಮೋಹಪಟ್ಟ ಭಾಗ್ಯವನೆಲ್ಲ ತೋರೊ ನೀನುಕಷ್ಟ ಮಾನಧನ ನಷ್ಟವಲ್ಲದೆ ಎಳ್ಳಿ-ನಷ್ಟು ಸುಖವನ್ನು ಕಾಣೆನಿನ್ನುಇಷ್ಟಾರ್ಥಗಳೆಲ್ಲ ದೊರೆಕುವುದೈಪರಮೇಷ್ಠಿ ಪಿತನ ಮನಮುಟ್ಟಿ ನೀವ್ ಭಜಿಸಿರೊ 3ವಿಷಯ ಪಳಂಚಿತನಾಗುವ ಸಂತತಪಂಚಡಕೀರನು ಆಗುವರೇಮುಂಚೆ ಮಾಡಿದಕರ್ಮಸಾಲದೆಂದೆನುತಲಿಸಂಚಿತಪಾಪವ ಸಂಗ್ರಹಿಸುವರೇಚಂಚಲಾಕ್ಷಿಯರ ಚಪಲದ ಮಾತನುವಂಚನೆ ಎಂಬುದು ತಿಳಿಯದೆ ಇರುವರೆ 4ಸಾರಿಸಾರಿ ಕೈ ಮುಗಿದು ಬೇಡುವೆನು ವಿ-ಕಾರ ದುರ್ಬುದ್ಧಿಯ ಬಿಡು ಎಂದುಭಾರಿ ತಪ್ಪುಗಳ ಕ್ಷಮಿಸಿಕಾವಲಕ್ಷ್ಮೀನಾರಾಯಣ ನೀನೇ ಗತಿಯೆಂದುಪಾರಮಾರ್ಥಿಕ ವಿಚಾರವ ಮಾಡುತಶ್ರೀ ರಮೇಶನ ಚರಣಾರವಿಂದವ ಸೇರೋ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ