ಒಟ್ಟು 7 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿಂತಿಪೆನೊಂದೊಂದು ನಾನಿಂತು ಬೇಡುವೆನು ಪ ನರಜನ್ಮಕೆ ಬರುವುದು ತಾ ದುರ್ಲಭವು ವರಕುಲ ದುರ್ಮಿಳವು ದೊರೆವುದೆ ಭಾಗ್ಯವು ಧರೆಯೊಳು ಬಂದೀ ಗುರುಕುಲದೊಳು ಪುಟ್ಟಿ ಗುರುವರಪೂಜ್ಯ ಪರಾತ್ಮನ ಪೂಜಿಪೆ 1 ನಿಜರೂಪ ತೋರಿದಿ ಪ್ರಲ್ಹಾದನಿಗೆ ಗಜವರನೆನಹೀಗೆ ವಿಜಯನ ರಾಣಿಗೆ ದ್ರುಪದಾತ್ಮಜೆಗೆ ಭಜಕರ ನಿಚಯಕ್ಕೆ ಕುಜಪ್ರದ ಮೂರ್ತಿಗೆ ಅಜರಾಮರಿಗೆ ನಿಜಪದ ತೋರೆಂದು ಭಜಿಸಿ ಬೇಡುವೆನು 2 ಗಂಗೋದಕದೊಳು ಮೀಯಲು ಪಾವನವು ಮಂಗಲ ತುಲನೇಯು ಸಿಂಗಾರದೊಳಧಿಕಾಚ್ಯುತ ಭೂಷಣೆಯು ನಿನ್ನಾದೇ ವರವು ಬಂಧುರದೇಹವ ತಾಳಿದೆನಗೆ ನೀ ಸಂಗಸುಖವನೀಯೋ ನರಸಿಂಹವಿಠಲ3
--------------
ನರಸಿಂಹವಿಠಲರು
ರಂಗಾ ನಿನ್ನ ಕೊಂಡಾಡುವ ಮಂಗಳಾತ್ಮರ ಸಂಗಸುಖವಿತ್ತು ಕಾಯೋ ಕರುಣಾ ಸಾಗರ ಪ ಅರಿಯರೋ ನೀನಲ್ಲದೆ ಮತ್ತನ್ಯದೈವರ ಮರೆಯರೋ ನೀ ಮಾಡಿದ ಅನಿಮಿತ್ತೋಪಕಾರ ತೊರೆಯರೋ ನಿನ್ನಂಘ್ರಿ ಸೇವಾ ಪ್ರತಿವಾಸರಾ ಒರೆಯರೋ ಪರತತ್ವವಲ್ಲದೆ ಇತರ ವಿಚಾರಾ 1 ಮೂಕ ಬಧಿರರಂತಿಪ್ಪರೋ ನೋಳ್ಪಜನಕೆ ಕಾಕುಯುಕುತಿಗಳನ್ನು ತಾರರೋ ಮನಕೆ ಸ್ವೀಕರಿಸರನರ್ಪಿತ ಒಂದು ಕಾಲಕ್ಕೆ ಆ ಕೈವಲ್ಯಭೋಗ ಸುಖ ಅವರಿಗೆ ಬೇಕೆ 2 ಕಂಡಕಂಡಲ್ಲಿ ವಿಶ್ವರೂಪ ಕಾಂಬೋರೋ ಉಂಡು ಉಣಿಸಿದ್ದೆಲ್ಲ ನಿನ್ನ ಯಜ್ಞವೆಂಬರೋ ಬಂಡುಣಿಯಂದದಿ ನಾಮಾಮೃತವ ಸವಿವರೋ ಹೆಂಡಿರು ಮಕ್ಕಳು ನಿನ್ನ ತೊಂಡರೆಂಬೋರೋ 3 ಬಿಡರು ತಮ್ಮ ಸ್ವಧರ್ಮಗಳೇನು ಬಂದರೂ ಬಡರು ದೈನ್ಯ ಒಬ್ಬರಿಗೂ ಲೋಕ ವಂದ್ಯರೊ ಪಿಡಿಯರೋ ನಿನ್ನ ದ್ವೇಷಿಗಳಿಂದೇನು ಬಂದರು ಕೊಡುವರೋ ಬೇಡಿದಿಷ್ಟಾರ್ಥ ನಿತ್ಯಾನಂದರೂ 4 ಜಯಾಜಯ ಲಾಭಾಲಾಭ ಮಾನಾಪಮಾನಾ ಭಯಾಭಯ ಸುಖದುಃಖ ಲೋಷ್ಟ ಕಾಂಚನಾ ಪ್ರಿಯಾಪ್ರಿಯ ನಿಂದಾಸ್ತುತಿಗಳನುದಿನಾ ಶ್ರೀಯರಸ ಚಿಂತಿಸುವರೋ ನಿನ್ನ ಅಧೀನ 5 ಈಶಿತವ್ಯರೆಂಬರೋ ಏಕಾಂತ ಭಕ್ತರೋ ದೇಶಕಾಲೋಚಿತ ಧರ್ಮ ಕರ್ಮಾಸಕ್ತರು ಆಶಾ ಕ್ರೋಧ ಲೋಭ ಮೋಹ ಪಾಶ ಮುಕ್ತರು ಈ ಸುಜನರೇವೆ ಶಾಪಾನುಗ್ರಹ ಶಕ್ತರು 6 ನಗುವರೋ ರೋದಿಸುವರೊ ನಾಟ್ಯವಾಡೋರೊ ಬಗೆಯರೋ ಬಡತನ ಭಾಗ್ಯ ಭಾಗವತರು ತೆಗೆಯರೋ ನಿನ್ನಲ್ಲಿ ಮನ ಒಮ್ಮೆಗಾದರೂ ಜಗನ್ನಾಥವಿಠಲ ನಿನ್ನವರೇನು ಧನ್ಯರೋ 7
--------------
ಜಗನ್ನಾಥದಾಸರು
ಶ್ರೀ ಲಕ್ಷ್ಮೀದೇವಿಯ ಸ್ತೋತ್ರ ಭಾಗ್ಯವೆ ಪಾಲಿಸೆನ್ನಗೆ ಭಾರ್ಗವಿ ಜನನಿ ಪ ಭಾಗ್ಯವೆ ಪಾಲಿಸು ಭಾರ್ಗವಿ, ಕಮಲಜ ಭಾರ್ಗಾದ್ಯನಿಮಿಷ ವರ್ಗಸೇವಿತೆ ಅ.ಪ ಹರಿಸರ್ವೋತ್ತಮ ಗುರುಸುಖತೀರ್ಥರು ಹರಫಣಿ ವಿಪಶಕ್ರಾದಿಗಳು ತರತಮ ಭೇದ ಮೂರೆರಡು ಸತ್ಯ ವೆಂ - ದರಿತು ಮನದಿ ಬಲು ಹರುಷ ಬಡುತಲಿಹ 1 ಕಾಮಕ್ರೋಧಗಳ ಗೆಲಿದು ಸತತನಿ - ಷ್ಕಾಮ ಭಕ್ತಿಯಲಿ ಮನವುಬ್ಬಿ ರಾಮ ರಾಮ ಎಂದ್ ಪ್ರೇಮದಿ ಪಾಡುತ ರೋಮಾಂಚಿತ ತನುವಿಲಿನರ್ತಿಪ ಸೌ 2 ದುರ್ಜನ ಸಂಗ ವಿವರ್ಜಿಸಿ ನಿರುತದಿ ಸಜ್ಜನಸಂಗಸುಖವ ಬಯಸಿ ಅರ್ಜುನಸಖನ ಪದಾಬ್ಜಧ್ಯಾನ ದೊಳು ಗರ್ಜಿಸುತಲಿ ನಿರ್ಲಜ್ಜನೆನಿಪ ಸೌ 3 ನಾನುನನ್ನದೆಂಬೊಹೀನ ಮತಿಯ ಕಳೆ - ದೆನು ಮಾಡುತಿಹಕರ್ಮಗಳ ಶ್ರೀನಿವಾಸನ ಪ್ರೇರಣೆ ಎಂದು ಸ - ದಾನುರಾಗದಲಿ ಅರ್ಪಿಸುತಿಹ ಸೌ 4 ಸೂಸುವ ಭಕ್ತಿ ವಿರಕ್ತಿ ಙÁ್ಞನಧನ ರಾಶಿಯ ಕೋಟ್ಟೀಭವಸುಖದ ಆಶೆಬಿಡಿಸಿ ವರದೇಶ ವಿಠಲನ ದಾಸರ ದಾಸರ ದಾಸ ನೆನಿಪ ಸೌ 5
--------------
ವರದೇಶವಿಠಲ
ಶ್ರೀದ ವಿಠಲ ಸರ್ವಾಂತರಾತ್ಮಾ ನೀ ದಯದಿ ಒಲಿದು ನಿತ್ಯದಲಿ ಕಾಪಾಡುವುದು ಪ ಚಿಕ್ಕ ತನದಲಿ ತಂದೆತಾಯಿಗಳು ಒಲಿದು ಪೆಸ ರಿಕ್ಕಿ ಕರೆದರು ನಿನ್ನ ದಾಸನೆಂದೂ ಮಕ್ಕಳನು ತಾಯ್ಸಲಹುವ ತೆರದಿ ಸಂತೈಸು 1 ಶುಕನಯ್ಯ ನಿನ್ನ ಪದಭಕುತಿ ತ್ವತ್ಕಥಾಶಾಸ್ತ್ರ ಯುಕುತಿವಂತರ ಸಂಗಸುಖವನಿತ್ತು ವಕಿತನಯ ನಿನ್ನವರ ಮುಖದಿಂದ ಪ್ರತಿದಿನದಿ 2 ಮಾತರಿಶ್ವಪ್ರಿಯ ಸುರೇತರಾಂತಕನೆ ಪುರು ಹೂತನಂದನಸಖ ನಿರಾತಂಕದಿ ನೀ ತೋರು ಮನದಿ ಸಂಪ್ರೀತಿಯಿಂದಲಿ ಒಲಿದು ಹೋತಾಹ್ವಗುರು ಜಗನ್ನಾಥ ವಿಠಲ ಬಂಧು 3
--------------
ಜಗನ್ನಾಥದಾಸರು
ಸಂಗಸುಖವ ಬಯಸಿ ಬದುಕಿರೋ ರಂಗವಲಿದ ಭಾಗವತರ ಪ ಸಂಗಸುಖವ ಬಯಸಿ ಬದುಕಿ ಭಂಗಪಡಿಪ ಭವವ ನೂಕಿ ಹಿಂಗದೇ ನರಸಿಂಗನನ್ನು ಕಂಗಳಿಂದ ಕಾಣುತಿಹರ ಅ.ಪ. ಪುಟ್ಟಿದಾರಭ್ಯ ಪರಮ ವೈಷ್ಣವಾಧ್ಯಕ್ಷರೆನಿಸಿ ನಿತ್ಯ ಮುದ್ದು ಕೃಷ್ಣ ಕೀರ್ತನೆಯನು ಪಾಡುತ ಕಾವ್ಯಕರ್ಮ ಬಿಟ್ಟು ಭಕ್ತಿಯನೆ ಮಾಡುತ ಮಧ್ವಮತವ ಪುಷ್ಟಿಗೈಸಿ ಖಳರ ಕಾಡುತ ಬಂದ ಲಾಭ ನಷ್ಟ ತುಷ್ಟಿಗಳಿಗೆ ಒಡಂಬಟ್ಟ ಬಗೆಯ ಪೇಳಲೆಷ್ಟು 1 ಭೂತದಯಾಶೀಲರಾದ ನೀತ ಗುರು ಜಗ- ನ್ನಾಥ ವಿಠಲಾಂಕಿತವನು ಪಡೆದು ಸಂಗೀತ ವೃತ್ತ ಪದ ಸುಳಾದಿಯ ಪೇಳಿ ಪ್ರೇ- ಮಾತಿಶಯದಿ ಒಲಿಸಿಕೊಂಡು ಮಧುವಿರೋಧಿಯ ಒಲಿಸಿಕೊಂಡ ಜಾತರಾಗಿ ಜವನಬಾಧೆಯ ಬಯಲು ಮಾಡಿ ಖ್ಯಾತರಾಗಿಹರು ಪುಸಿಯ ಮಾತಿದಲ್ಲ ಮರೆಯಸಲ್ಲ 2 ಮೇದಿನಿಯೊಳಗುಳ್ಳ ಗಂಗಾದಿತೀರ್ಥ ಸತಿಗಳಿವರ ಕಾದುಕೊಂಡಿಹರು ಬಿಡದೆ ಸ್ವಾದಿರಾಜೇಂದ್ರರ ಪ್ರ- ಸಾದದಿಂದ ಹರಿಕಾಥಾಮೃತ ಸಾರತತ್ವ ಸಾಧುಜನರಿಗಾಗಿ ಪ್ರಾಕೃತ ಪದ್ಧತಿಯಲಿ ಸಾದರದಲಿ ಪೇಳಿ ದುಷ್ಕøತ ದೂರಮಾಡಿ ಮೋದಿಸುವರಿಗೆಣೆಗಾಣೆ ಶ್ರೀದವಿಠಲನಾಣೆ 3
--------------
ಶ್ರೀದವಿಠಲರು
ಎಂತಹುದೊ ನಿನ್ನ ಭಕುತಿ ? |ಸಂತತ ನಿನ್ನ ದಾಸರ ಸಂಗವಿರದೆನಗೆ ಪ.ವೃಣವನಾಶಿಪ ಕುರುಡು ನೊಣ ಮೊಸರ ಕಂಡಂತೆ |ಧನಿಕರ ಮನೆಗೆ ಕ್ಷಣಕ್ಷಣಕ್ಕೆ ಪೋಗಿ ||ತನುಬಾಗಿ ತುಟಿಯೊಣಗಿ ಅಣಕನುಡಿ ಕೇಳ್ವ - ಕೃ - |ಪಣ ಮನಕೆ ಎಂತಹದು ನಿನ್ನಯ ಭಕುತಿ 1ಅಡಿಯಾಡಿ ಮುಖಬಾಡಿ ನುಡಿಯಡಗಿ ಬಡವನೆಂದು |ಒಡಲ ತೋರಿಸಿದೆನೊ ಕಡುದೈನ್ಯದಿ ||ಒಡೆಯ ನೀನಹುದೆಂದು ಮಡದಿ - ಮಕ್ಕಳಿಗೆ ಹೆಸ - |ರಿಡುವ ಅವರಡಿಗೆ ಎರಗುವನ ಮನಕೆ 2ಹೋಗಿಬಾರೈ ಎಂದು ಅತಿಗಳೆದರು ತಲೆ - |ಬಾಗಿ ನಿಂತು ಅಲ್ಲಿ ಮೌನವಾಗಿ ||ಓಗರತೆ ಮನೆಮನೆ ತಪ್ಪದೆ ತಿರುಗುವ |ಜೋಗಿಯ ಕೈಯಕೋಡಗದಂಥ ಮನಕೆ 3ಅವನ ತೋರಿ ಬೆಟಿಕಿರಿಯ ಬಾಲವ ಬೀಸಿ |ಕುನ್ನಿ ಸುಳಿದಾಡಿ ಕಾಲ್ಗೆರಗುವ ತರದಿ ||ಹೆಣ್ಣಿನಾಶೆಗೆ ಬಾಯಬಿಡುವ ಸ್ತ್ರೈಣನಪರಿ - |ಘನ್ನವಯ್ಯ ಘನ್ನವಯ್ಯ ಬನ್ನಬಡುವ ಕುನ್ನಿಮನಕೆ 4ವಟುವಾಗಿ ಬಲಿಯ ದಾನವನು ಬೇಡಹೋದ |ಕಟು ಕಷ್ಟಗಳನೆಲ್ಲ ನೀನೆ ಬಲ್ಲೆ ||ವಟಪತ್ರಶಾಯಿ ಶ್ರೀಫಣಿ ವರದಪುರಂದರ - |ವಿಠಲ ನಿನ್ನ ದಾಸರ ಸಂಗಸುಖವಿರದೆ 5
--------------
ಪುರಂದರದಾಸರು