ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬಿ ನೆಚ್ಚದಿರು ನರಲೋಕ ಸುಖವೆಂಬ, ಅಂಬಲಿ ಪರಮಾನ್ನ ಪ ಹಂಬಲಿಸುವುದು ಹರಿಲೋಕಾನಂದವೆಂಬ ಪೀಯೂಷಪಾನ ಅ.ಪ ನೊಣ ಬೆರಸಿದ ಊಟ ಪರಮಭಾಗವತರ ಪದಸಂಗವೆಂಬುದು ಮಸ್ತಕದ ಮಕುಟ ಕೇವಲ ಯಮಕಾಟ ಪರತತ್ವವಾದ ಶ್ರೀಹರಿಯ ತಿಳಿವುದೆ ವೈಕುಂಠಕೆ ಓಟ 1 ಹಾರಿ ಹೋಗುವ ಹೊಟ್ಟು ಇದ್ದಾಗ ದಾನ ಧರ್ಮಂಗಳ ಮಾಡೋಡು ಕೈವಲ್ಯಕೆ ಮೆಟ್ಟು ಹೊದ್ದಿರುವರ ಕಂಡಾಸೆಯಪಟ್ಟರೆ ಹೋಗುವಿ ನೀ ಕೆಟ್ಟು ಬುದ್ಧಿಹೀನರಿಗೆ ಪೇಳದಿರೆಲೊ ತತ್ವಸಾರ ಸುಂದರ ಗುಟ್ಟು 2 ಅಲ್ಪಾವಕಾಶವು ಈ ಶರೀರವು ಗಾಳಿಗೊಡ್ಡಿದ ದೀಪ ನೋಡು ಹಾಲುಸಕ್ಕರೆ ತುಪ್ಪ ಬಲ್ಪಂಥ ಮಾಡದಿರು ಜನ್ಮಜನ್ಮದಲಿ ಬಿಡದೆಲೊ ಸಂತಾಪ ಸ್ವಲ್ಪಕಾಲಾದರೂ ಮಧ್ವಮತವೊಂದು ಭವವೇ ನಿರ್ಲೇಪ3 ಕರ್ಮ ಆವುದಾದರು ಸೂಳೆಗಿಕ್ಕ್ಕಿದ ವಿತ್ತ ಹರಿಗೆ ವಿಶ್ವಾಸದಿ ಅಣುಮಾತ್ರ ಅರ್ಪಿಸೆ ಅವನೆ ನಿರ್ಮಲ ಚಿತ್ತ ನಿರುತಗ್ರಾಸಕೆ ಚಿಂತೆಮಾಡಲು ಒದಗದು ಪುಣ್ಯವು ನಿನಗೆತ್ತ ಅರೆಮನವಿಲ್ಲದೆ ದೃಢಮನದಿಪ್ಪುದೆ ಸಂಪಾದನೆ ಭತ್ಯ4 ಭಾವವಿರಕ್ತಿಯ ವಹಿಸದಿದ್ದರೆ ನಿನಗಾಗುವುದು ಖೇದ ಪರಿಪರಿಯಾಸ್ವಾದ ದೇವಕಿಸುತ ನಮ್ಮ ವಿಜಯವಿಠ್ಠಲನಂಘ್ರಿ ತೀರುಥ ಪ್ರಾಸಾದ ನಿತ್ಯ ನರಕವಾಸ ಎನ್ನತಲಿದೆ ವೇದ 5
--------------
ವಿಜಯದಾಸ
ಮುದದಿ ಹರಿಯ ಧ್ಯಾನ ಮಾಡಿ ಸಾಧಿಸೊ ಸದಯ ಹೃದಯರಾದ ಸಂಗದೊಳಗೆ ನೀನು ಬೆರೆದು ಪ --ಕರ್ತನಾದ ದೇವ ಸದ್ಪಿಲಾಸನಾ ನಿಖರವಾಗಿ ಹೃದಯದಲ್ಲಿ ನಿಲ್ಲಿಸುವೆನಾ ಪ್ರಕಟಮಾಡಿ ಸ್ತುತಿಸುತಿರುವ ಬಿಡದೆ ಅನುದಿನ ಭಕುತಿಯಿಂದ ಕ--------ಭಕ್ತ ಜನರಕೂಡಿ 1 ಯೋಗಿಜನರ ಹೃದಯದೊಳು ನಿಖರವಾಗಿಇರುವ ಭೋಗಿಶಯನನಾಗಿ ಇರುವ ಪುಣ್ಯ ಪುರುಷನಾ ಸಾಗರಾನಸುತಿಯರಾಳ್ವ ಸಾರ್ವಭೌಮನ ಬೇಗ ಭಜಿಸಿ ಗತಿಯು ಕಾಣ್ವ ಭಾಗವತರ ಸಂಗದಲ್ಲಿ 2 ದುಷ್ಟ ಜನರ ಸಂಗವೆಂಬುದು ದೂರಮಾಡೋ ನೀ ಶಿಷ್ಟ ಜನರ ಪಾದ----------ಯಾಗೋ ನೀ ಇಷ್ಟದಿಂದ ವಿಷ್ಣು ಚಿಂತನೆ ಹಿತದಿ ಮನದಿ ನೀ ನಿಷ್ಠೆಯುಳ್ಳವನು ಆಗಿ ಕೃಷ್ಣ ಹೊನ್ನ ವಿಠ್ಠಲರಾಯನಾ 3
--------------
ಹೆನ್ನೆರಂಗದಾಸರು