ಒಟ್ಟು 10 ಕಡೆಗಳಲ್ಲಿ , 5 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

100(ಅ) ತುಳಸಿದೇವಿ ಶರಣು ಹೊಕ್ಕೆನು ಕಾಯೆ ಶ್ರೀ ತುಳಸಿ ತಾಯೆ ನಾರಾಯಣನ ಪ್ರೀಯೇ ತರಣಿಕೋಟಿ ದಿವ್ಯ ಪ್ರಕಾಶ ಹರಿಚರಣಕಮಲಕಾಭರಣಿಯೆನಿಪಳೆ ಪ ಉದಧಿಯೊಳುದಿಸಿದಮೃತವ ಮುದದಿಂದಲಿ ಶ್ರೀಧರನು ನೋಡಿ ಸ್ವೀಕಾರವನು ಮಾಡಿ ಆ- ನಂದಲಾನಂದ ಬಾಷ್ಪಗಳು ಉದುರಲಕ್ಷಿಯೊಳು ಉದುಭವಿಸಿದೆಯೆ ನೀನು ಪದುಮಮುಖಿಯೆ ನಿಮ್ಮ ಅದುಭುತ ಮಹಿಮೆಯು ಪದ ಕವಿಗಳಿಗೆಲ್ಲ ಪೊಗಳಲಸಾಧ್ಯ 1 ನಿಮ್ಮ ಮೂಲ ಮಧ್ಯಾಗ್ರದಲಿ ಬ್ರಹ್ಮಾದಿ ಸುರರು ಸುಮ್ಮನದಿಂದ ಒಲಿದಿಹರು ಒಮ್ಮನದಿಂದ ಸ್ತುತಿಸಲು ಶುಭಗುಣವಂತೆ ಧರ್ಮಾರ್ಥ ಕಾಮ ಮೋಕ್ಷಗಳ ಗಮ್ಮನೆ ಕೊಡುವ ನಮ್ಮಮ್ಮಗೊಲಿದು ನಿನ್ನಮ್ಮಿದವರಿಗಾಧರ್ಮದ ನಿಧನೆ (?) 2 ನಿಷ್ಠೀಲಿ ನಿಮ್ಮ ಭಜಿಸುವ ಭಕುತರಿಗೆ ಬಂದ ಕಷ್ಟವ ಕಳೆದು ಕೈವಿಡಿದು ದುಷ್ಟ ಸಂಗವನೆ ಬಿಡಿಸಿ ಇಹಪರದಲ್ಲಿ ವಿಷ್ಣುಭಕ್ತರಿವರೆಂದೆನಿಸಿ ಶ್ರೇಷ್ಟ ಕದುರುಂಡಲಗಿ ಹನುಮಯ್ಯನೊಡೆಯನು ಶ್ರೀ- ಕೃಷ್ಣನ ಲೋಕದಿ ಸಂತುಷ್ಟಬಡಿಸುವಾ 3
--------------
ಕದರುಂಡಲಗಿ ಹನುಮಯ್ಯ
ಅಂಕಿತನಾಮ ಪದಗಳು ಅಚ್ಯುತಾನಂತವಿಠಲ | ಸಲಹ ಬೇಕಿವನಾ ಪ ಸ್ವಚ್ಛಶಪಥದಿ ಹರಿಯ | ನಾಮ ನಂಬಿಹನಾ ಅ.ಪ. ಜೀವಕಾರಣವೆನೆ | ಆವನ ವಿದ್ಯಾಪಟಲಓವಿಕಡಿಯಲು ಸಾಧ್ಯ | ನಾಮ ಸಾಧನದೀಈ ವಿಧದ ಸಂಪ್ರಜ್ಞೆ | ಭಾವ ಉಳ್ಳವನೀತತೀವರದಿ ಕೈಪಿಡಿದು | ಕಾಯೋ ಕೃಪ ಸಾಂದ್ರ 1 ಗುರು ಭಕ್ತಿಯುಳ್ಳವನು | ಸುಜ್ಞಾನಕಾಂಕ್ಷಿತನುಇರುವನೀತನು ಎಂದು | ವರ ಸು ಉಪದೇಶಹರಿಯ ನಾನಿತ್ತಿಹೆನು | ಸ್ವಪ್ನ ಸೂಚೀಯಂತೆಕರುಣದಿಂ ನಿಜತೋರೊ | ಮರುತಂತಾರಾತ್ಮ 2 ಹರಿ ನಾಮ ವೆಂಬಂಥ | ವಜ್ರಾಂಗಿ ತೊಡಿಸಿವಗೆದುರಿತರಾಶಿಗಳಳಿದು | ಪೊರೆಯ ಬೇಕಿವನಾಸುರು ಭೂರಹವು ಆಗಿ | ಪರಿಪರಿಯ ವರಗಳನುಗೆರೆಯುತ್ತ ಹರ್ಷವನೆ | ಸುರಿಸೊ ಶ್ರೀಹರಿಯೇ 3 ಸತ್ಸಂಗವನೆ ಕೊಟ್ಟು | ದುಸ್ಸಂಗವನೆ ಕಳೆಯೊಮತ್ಸಕೇತನ ಜನಕ | ಸಚ್ಚಿದಾನಂದಾತ್ಮಾವತ್ಸಾರಿ ಕೃಷ್ಣ ಗೋ | ವತ್ಸ ದನಿಗಾವು ಬಹುಉತ್ಸವದಿ ಬರುವಂತೆ | ನೀನೆ ಪೊರೆ ಇವನಾ4 ಭಾವಜ್ಞ ನೀನಿರುವೆ | ಪೇಳ್ವದೇನಿಹುದೆನಗೆದೇವ ದೇವೇಶನೆ | ಹರಿ ಸಾರ್ವಭೌಮಗೋವರ್ಧನೊದ್ಧಾರನೆ | ಗೋವಿಂದ ಪತಿಯೆ ಗುರುಗೋವಿಂದ ವಿಠಲ ಮದ್ | ಭಿನ್ನಪವ ಸಲಿಸೊ 5
--------------
ಗುರುಗೋವಿಂದವಿಠಲರು
ಆನಂದಾದ್ರಿವಿಠಲ | ನೀನೇ ಪೊರೆ ಇವಳಾ ಪ ಜ್ಞಾನಿಜನವಂದ್ಯ ಹರಿ | ಶ್ರೀನಿವಾಸಾಖ್ಯ ಅ.ಪ. ತರಳೆ ಬಹುನೊಂದಿಹಳೊ | ಕರುಣಾ ಮಾಳ್ಪುದು ದೇವದುರಿತವನ ದಾವಾಗ್ನಿ | ಶರಣಜನರೊಡೆಯಾ | ಮರುತ ಮತದಲ್ಲಿರುತೆ | ನೆರೆ ನಂಬಿಬಂದಿಹಳೊಕರುಣದಿಂ ಕೈಗೊಟ್ಟು | ಪರಿಪಾಲಿಸಿವಳಾ 1 ಅನ್ಯದೇವರ ಪೂಜೆ | ಇನ್ನಾದರು ಬಿಡಿಸಿನನ್ನೆಯಿಂ ನಿನ್ನನ್ನೆ | ಪೂಜಿಸುವ ಭಾಗ್ಯಾಇನ್ನಾದರೂ ಕೊಟ್ಟು | ಪನ್ನಂಗಶಯನಹರಿಮನ್ನಿಸೊ ಇವಳ ಹರಿ | ಅನ್ನಂತ ಮಹಿಮಾ 2 ಸಾಧುಜನ ಸದ್ವಂದ್ಯ | ಸತ್ಸಂಗವನೆ ಕೊಟ್ಟುಮಾಧವನೆ ನೀನಾಗಿ | ಕಾದುಕೊ ಹರಿಯೇಭೇಧಮತ ತತ್ವಗಳ | ಬೋಧಿಸುತ ಇವಳೀಗೆಸಾಧನವ ಗೈಸುವುದೋ | ಬಾದರಾಯಣನೇ 3 ಪತಿಸುತರು ಹಿತರಲ್ಲಿ | ವ್ಯಾಪ್ತ ನೀನೆಂಬಂಥಾಮತಿಯನೇ ಕೊಟ್ಟು ಸ | ದ್ಗತಿಯನೆ ಕರುಣಿಸೋ |ಸತತ ನಿನ್ನಯ ನಾಮ | ರತಿಯನೆ ಕರುಣಿಸುತಮತಿಮತಾಂವರರಂಘ್ರಿ | ಭಕ್ತಿಯನೆ ಈಯೋ 4 ಭಾವಜನಯ್ಯ ಎನೆಓವಿ ಬಿನ್ನವಿಪೆ ಹರಿ | ಸಲಿಸುವುದು ಇವನೇವೆಗುರ್ವಂತ ರಾತ್ಮಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಆವ ರೀತಿಯಿಂದ ನೀಯೆನ್ನ ಪಾಲಿಸೊಶ್ರೀವಿಭು ಹಯವದನ ಪ. ಈ ವಿಧ ಭವದೊಳು ಇಷ್ಟು ಬವಣೆಪಟ್ಟೆತಾವರೆದಳನಯನ ಹಯವದನಅ.ಪ. ಕಾಮನ ಬಾಧೆಯ ತಡೆಯಲಾರದೆ ಕಂಡಕಾಮಿನಿಯರನೆ ಕೂಡಿನೇಮನಿಷ್ಠೆಯಿಂದ ನಿನ್ನನು ಭಜಿಸದೆಪಾಮರನಾದೆನೊ ಹಯವದನ 1 ಅಂಗನೆಯರಲ್ಲಿ ಅಧಿಕ ಮೋಹದಿಂದಶೃಂಗಾರಗಳನೆ ಮಾಡಿಮಂಗಳಾಂಗನೆ ನಿನ್ನ ಮಹಿಮೆಯ ಪೊಗಳದೆಭಂಗಕ್ಕೆ ಒಳಗಾದೆನೊ ಹಯವದನ 2 ಹೀನ ಸಂಗವನೆಲ್ಲ ಹಯಮುಖದೇ-ವನೆ ವರ್ಜಿಸುವಂತೆ ಮಾಡೊಜ್ಞಾನಿಗಳರಸನೆ ದಯವಿಟ್ಟು ನಿನ್ನನುಧ್ಯಾನಿಸುವಂತೆ ಮಾಡೊ ಹಯವದನ 3
--------------
ವಾದಿರಾಜ
ಒಲ್ಲೆ ದುರಿತಗಳೊಲ್ಲೆ ಒಲ್ಲೆಫುಲ್ಲನಾಭನ ಸ್ಮರಣೆ ಇಲ್ಲದೆ ಇರಲೊಲ್ಲೆ ಪ. ದುರ್ಜನರ ಸಂಗವನೆಂದೆಂದಿಗೂ ಒಲ್ಲೆಸಜ್ಜನರ ವಿರಸಗಳೊಲ್ಲೆ ಒಲ್ಲೆಅರ್ಜುನಸಖ ನಿನ್ನ ಸೇವೆಯ ಬಿಡಲೊಲ್ಲೆಅಬ್ಜಬಾಣನ ಮೇಳ ಒಲ್ಲೆ ಒಲ್ಲೆನೊ ಸ್ವಾಮಿ 1 ಬಲ್ಲೆನೆಂಬೊ ಅಹಂಕಾರ ಎಂದೆಂದಿ[ಗೂ]ಒಲ್ಲೆಸಲ್ಲದ ಸುಖಗ[ಳ]ಒಲ್ಲೆ ಒಲ್ಲೆಬಲ್ಲಿದ ಹರಿ ನಿಮ್ಮ ಪಾದವ ಬಿಡಲೊಲ್ಲೆಕ್ಷುಲ್ಲದೇವರ ಪೂಜೆ ಒಲ್ಲೆ ಒಲ್ಲೆನೊ ಸ್ವಾಮಿ 2 ಹರಿನಾಮ ಸ್ಮರಣೆಯ ಮನದಿ ತೊರೆದಿರಲೊಲ್ಲೆದುರುವಿಷÀಯದಿ ಹರುಷ ಒಲ್ಲೆ ಒಲ್ಲೆಕರುಣ ಹಯವದನನ್ನ ಕಂಡಲ್ಲದೆ ಮಿಕ್ಕಕಾರುಣ್ಯದ[ಹವಣು]ಒಲ್ಲೆ ಒಲ್ಲೆನೊ ಸ್ವಾಮಿ 3
--------------
ವಾದಿರಾಜ
ಧನ್ವಂತ್ರಿ ನಿನ್ನ ಸ್ಮರಿಸಿ ಧನ್ಯರಾಗಿಹರ ಪಾದ ಧ್ಯಾನದೊಳಿರೆಸೆನ್ನ ಧನ್ಯನೆಂದೆನಿಸೊ ಪ ನಿನ್ನ ದಾಸರ ಕೀರ್ತಿ ನಿನ್ನ ದಾಸರ ವಾರ್ತೆ ನಿನ್ನ ನಾಮಾಮೃತವು ಎನ್ನ ಕಿವಿ ತುಂಬಿರಲಿ ಅ.ಪ ನಿನ್ನ ಪಾದದ ಸ್ಮರಣೆಯನ್ನು ಮಾಳ್ಪರ ಸಂಗ ಇನ್ನು ಪಾಲಿಸು ದೇವನೆ ಘನ್ನ ಮಹಿಮನೆ ಪರಮ ಪುಣ್ಯಶೀಲರ ಸೇವೆ ಇನ್ನು ಕರುಣಿಸೊ ಕೇಶವಾ ಸನ್ನುತಾಂಗನೆ ಭವಭಯವನ್ನು ಬಿಡಿಸೆಂದು ನಾ ನಿನ್ನ ಮೊರೆಯಿಡುವೆ ಹರಿಯೇ ಚನ್ನ ಶ್ರೀಗೋಪಾಲ ಗೋವಿಂದ ಕೇಶವ ನಿನ್ನ ನಾಮನಿರಂತರವು ಪಾ- ವನ್ನ ಮಾಡಲಿ ಎನ್ನ ಜಿಹ್ವೆಯಾ 1 ಆದರದಿ ನಿನ್ನ ಸ್ಮರಿಪ ಸಾಧುಜನರ ಸಂಗ ಭೇದವಿಲ್ಲದೆ ಕರುಣಿಸೊ ಆದಿ ಮೂರುತಿ ನಿನ್ನ ಆದರದಿ ಸ್ಮರಿಪ ಪರ- ಮಾದರವ ನಿತ್ತು ಸಲಹೊ ಮೋದ ಪಡುವ ಭಾಗ್ಯ ಮಾಧವನೆ ದಯಪಾಲಿಸೋ ಮಾಧವ ಜನಾರ್ದನ ಕ್ರೋಧಿ ಸಂವತ್ಸರವು ಭಕುತರ ಕ್ರೋಧಗಳ ಕಳೆಯುತ್ತ ಸಲಹಲಿ2 ಶರಣೆಂದು ಬೇಡುವೆ ಪರಿಪರಿ ಅಘಗಳ ಪರಿಹರಿಸೆಂದು ನಾ ಸ್ಮರಿಸಿಬೇಡುವೆನು ಸರಸಿ ಜೋದ್ಭವÀಪಿತನೆ ಸರಸಿಜಾಕ್ಷಿಯ ಕೂಡಿ ಹರುಷದಿ ನೆಲಸೆನ್ನ ಹೃದಯದಲಿ ದೇವ ಸರಸಿಜನೇತ್ರನೆ ಬಿಡದೆ ನಿನ್ನನು ಸ್ಮರಿಪ ಕಡುಭಾಗವತರ ಸಂಗವನೆ ನೀಡೈ ಮೃಡನ ಸಖನೆ ನಿನ್ನಂಘ್ರಿ ಸ್ಮರಿಸುವ ಭಾಗ್ಯ ತಡೆಯದಲೆ ಪಾಲಿಸುತ ಪೊರೆ ಶ್ರೀ ಕಮಲನಾಭ ವಿಠ್ಠಲನೆ ದಯದಲಿ 3
--------------
ನಿಡಗುರುಕಿ ಜೀವೂಬಾಯಿ
ಪತಿ ವಿಠಲ | ರಕ್ಷಿಸೊ ಇವಳಾ ಪ ಪಕ್ಷೀಂದ್ರ ವಹ ಹರಿಯೆ | ಅಕ್ಷಯ್ಯ ಫಲದಾ ಅ.ಪ. ಮೋದ ತೀರ್ಥರ ಪ್ರೀಯಬೋಧಿಸೀ ತತ್ವ ಸಂ | ಧಾನವನೆ ಈಯೋ 1 ಫಣಿ ಶಾಯಿ | ಪ್ರಹ್ಲಾದ ವರದಾ 2 ಭವ ಭಂಗ ಕಳೆಯಲು ಸುಜನಸಂಗವನೆ ಕೊಟ್ಟು ಹರಿ | ಕಾಪಾಡ ಬೇಕೋಸಂಗರದಿ ಮೈದುನನ | ಭಂಗವಿಲ್ಲದೆ ಕಾಯ್ದೆಸಂಗೀತ ಲೋಲ ಸುಖ | ಶೃಂಗಾರ ಮೂರ್ತೇ 3 ಜ್ಞಾನಾನು ಸಂಧಾನ | ಸಾನು ಕೂಲಿಸಿ ಇವಳಪ್ರಾಣ ಪ್ರಾಣನು ನಿನ್ನ | ಧ್ಯಾನ ಮಾಳ್ಪಂತೇಮಾನಸಾದಲಿ ನಿಂತು | ಚೊದನೆಯ ಗೈಯ್ಯುತ್ತಗಾನ ಮಾಡಿಸೊ ದೇವ | ನಿನ್ನ ಮಹಿಮೆಗಳು4 ಪಾವನಾತ್ಮಕ ದೇವ | ಪಾವನ್ನ ತವ ಮಹಿಮೆಆವಾಗಲೂ ತುತಿಪ | ಭಾವವನೆ ಇತ್ತೂ |ಶ್ರೀವರ ಶ್ರೀ ಗುರೂ | ಗೋವಿಂದ ವಿಠ್ಠಲನೆಕಾವುದಿವಳನು ಎಂದು | ಪ್ರಾರ್ಥಿಸುವೆ ನಿನ್ನಾ 5
--------------
ಗುರುಗೋವಿಂದವಿಠಲರು
ಸೀತಾಮನೋಹರ ವಿಠಲಾ | ಕಾಪಾಡೊ ಇವಳಾ ಪ ಮಾತುಮಾತಿಗೆ ನಿನ್ನ | ಸ್ಮರಣೆ ಸುಖ ಕೊಟ್ಟು ಅ.ಪ. ಮಂಗಳಾಂಗನೇ ಹರಿಯೇ | ಶೃಂಗಾರ ಮೂರುತಿಯೇಭಂಗಗೈ ಅಜ್ಞಾನ | ಸತ್ಸಂಗವನೆ ಕೊಟ್ಟುಸ್ವಾಂಗಾಯ ನಾಮ | ನೀಲಾಂಗ ಶ್ರೀ ಹರಿಯೆಕಂಗಳಿಂದಲಿ ಕಾಂಬ | ಹವಣೆಯನು ತಿಳಿಸೋ 1 ತರತಮಾತ್ಮಕ ಜ್ಞಾನ | ಹರಿಗುರು ಸದ್ಭಕ್ತಿಮರುತ ಮತ ದೀಕ್ಷೆಯನು | ಕರುಣಿಸೋ ಹರಿಯೇದುರಿತಾಳಿ ದುಷ್ಕರ್ಮ | ಪರಿಹರಿಸಲೀವಳಿಗೆಪರಮ ಆನಂದವನೆ | ಕರುಣಿಸೊ ಹರಿಯೇ 2 ಪೇಳ್ವುದೆನಿಹುದೆನಗೆ | ಸರ್ವಜ್ಞ ನೀನಿರುವೆಭವದಿಂದ ಕಡೆಗಿತ್ತು | ಪವನಂತರಾತ್ಮಈ ವಿಧದಭಿನಿಪವ | ನೀವೊಲಿದು ಸಲಿಸೆಂದುದೇವ ಪ್ರಾರ್ಥಿಪೆ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಹ್ಯಾಂಗಾದರು ಎನ್ನ ನೀ ರಕ್ಷಿಸ ಬೇಕೋ ಸಾಗರಶಯನ ಕೃಷ್ಣಾ ಪ ಭಾಗವತರ ಸಂಗ ಬೇಗದಿಂದಲಿ ಇತ್ತು ಹೋಗಲಾಡಿಸು ಭವವ ಶ್ರೀ ಕೃಷ್ಣ ಅ.ಪ ಬಾಲೇರ ಸಲುವಾಗಿ ಕೀಳು ಜನರಲ್ಲಿ ಶೀಲ ಜರಿದು ಯಾಚಿಸಿ ಕಾಳಿ ಮರ್ಧನ ನಿನ್ನ ಒಲುಮೆಯ ಪಡೆಯದೆ ಕಾಲ ಬಲಿಗೆ ಸಿಕ್ಕೆನೊ ಶ್ರೀ ಕೃಷ್ಣ 1 ಅಂಗಜನಾಟಕೆ ಹಗಲಿರುಳೆನ್ನದೆ ಪರ ಅಂಗನೆರ ಕೂಡಿ ಮಂಗಳಮಹಿಮ ತುರಂಗ ವದನ ದೇವ ಭಂಗಕ್ಕೆ ಗುರಿಯಾದೆನೊ ಶ್ರೀ ಕೃಷ್ಣ 2 ದುರುಳರ ಸಂಗವನೆಲ್ಲ ಜರಿದು ಶ್ರೀ ನರಹರೆ ಕಾರುಣ್ಯದಲಿ ಭಕ್ತನ ಅರಿಷಟ್ಕರನೆ ಕೊಂದು ಕರಿವರದನೆ ಘೋರ ನರಕಕ್ಕೆ ಭಯ ತಪ್ಪಿಸೋ ಶ್ರೀಕೃಷ್ಣ 3
--------------
ಪ್ರದ್ಯುಮ್ನತೀರ್ಥರು