ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಐ) ಸರಸ್ವತೀ ಕಿಂಕರನ ಧ್ವನಿಗೆ ಕೊಡು ಮತಿಯನು ಪ ಪಂಕಜಾನಾಭನ ಸೊಸೆ ಸರಸ್ವತಿಯೆ ಅ.ಪ. ಪುತ್ಥಳಿ ಬೊಂಬೆ ವಿಕಸಿತ ಸುಲಲಿತಾಂಬೆ ಸುನಿತಂಬೆ ನಿಕುರುಂಬೆ ಸುರರಂಭೆ ದಂತ ದಾಳಿಂಬೆ ಭಕುತಿಯಲಿ ಕಾಂಬೆ ನಿನ್ನ ನಾಮವನುಂಬೆ1 ಗಂಗೆ ಯಮುನೆ ಉಭಯ ಸಂಗಮೆ ಭಕ್ತ ಭಯ ಅಖಿಳ ಧ್ಯೇಯೆ ಮಂಗಳ ಶೋಭನ ಮಣಿಯೆ ಅಭ್ಯುದಯೆ ಅತಿ ಸದಯೆ ರಂಗು ಮಾಣಿಕ ಪ್ರಭೆಯೆ ಸುಜನಾಬ್ಧಿಗೇಯೆ 2 ಪ್ರಯಾಗ ವರಕ್ಷೇತ್ರವಾಸೆ ಪುಣ್ಯಕ್ಷೇತ್ರೆ ಕ್ಷಯ ರಹಿತ ಮುನಿಸ್ತೋತ್ರೆ ಶುಭಚರಿತ್ರೆ ನಯವಿನಯ ನೇತ್ರೆ ಪವಿತ್ರ ಅಜನ ಕಳತ್ರೆ ಸಿರಿ ವಿಠ್ಠಲನ ಪೌತ್ರೆ 3
--------------
ವಿಜಯದಾಸ
ತುಂಗೆ ಬಂದಳು ದೇವೋತ್ತುಂಗ ವರಹನಾ ಮುಂಗೋರಿಯಲ್ಲಿ ಪುಟ್ಟಿ ಭಕ್ತ ನಿಕರನಾ ಹಿಂಗದೆ ಪೊರೆದು ಸುಖಂಗಳನೀವು ತಾ ಮಂಗಳಾಂಗೆ ಮಾತಂಗೆ ಸುಗಮನೆ ಪ ಕಾಳ ಪನ್ನಗವೇಣಿ ಕೋಕಿಲವಾಣಿ ಫಾಲ ಕಸ್ತುರಿ ಜಾಣೆ ಪಲ್ಲವಪಾಣಿ ವಾಲೆ ಮೂಗುತಿ ಅಣಿ ಮುತ್ತು ಕಠಾಣಿ ತೋಳು ಮಂದಾರಮಣಿ ಅರಿಗುಣಶ್ರೇಣಿ ಮೌಳಿಯಾ ಮೇಲಿನ ಜಾಳಿಗೆ ಸೂಸುಕಾ ವಾಲಲು ಕದಿಪಿನ ನೀಲಗೂದಲು ಭ್ರಮ ರಾಳಿಗಳಂತಿರೆ ಬಾಲ ಸುಧಾಕರ ಪೋಲುವ ವದನೇ1 ಕುಡುತೆಗಂಗಳ ನೀರೆ ಕಂಬುಕಂಧರೆ ಕಡಗ ಕಂಕಣದ್ವಾರೆ ಕೈಯ ಶೃಂಗಾರೇ ಜಡಿವ ಪದಕಹಾರೆ ಕಂಚಕಸೀರೆ ಮುಡಿದ ಪುಷ್ಪಂಗಳು ಮರೆ ಕುಚಗಳು ಅದರೆ ಬಡನಡುವಿನ ಕಡು ಉಡುವಿನ ಕಿಂಕಣಿ ಒಡನುಡಿಸುವ ಗೆಜ್ಜೆ ಕಾಲಂದಿಗೆ ಪೆಂಡೇ ಅ ಡಿಗಡಿಗೊಪ್ಪಲು ಕಡಲನ ಮಡದಿ 2 ತೀಡಿದ ಪರಿಮಳ ಗಂಧದ ಭೋಗಿ ಕೂಡಲಿಪುರದಲಿ ಭದ್ರಿವಂದಾಗಿ ಕೂಡಿ ಸೂಸಿದಳಂದು ಮುಂದಕ್ಕೆ ಸಾಗಿ ಆಡುತ ಪಾಡುತ ಬಲು ಲೇಸಾಗಿ ಬೇಡಿದ ಜನರಿಗೆ ಈಡಿಲ್ಲದ ವರವ ನೀಡುತ ನಿರುತರ ಮಾಡುತ ದಯವನು ನೋಡುತ ತಡವಿಲ್ಲದಲೆ 3 ಶೃಂಗಾರ ಮಾರ್ತಾಂಡೆ ಹರಿಹರ ಮಾತಾ ಅಂಗಾಧಿ ಪರ್ವತ ಪಂಚ ಪ್ರಖ್ಯಾತ ಹಿಂಗದೆ ಬಲಗೊಂಡು ಕೊಡ್ಲೀಗೆ ಬರುತ ಸಂಗೀತ ಗಾಯನದಿಂದ ವಾಲಗಗೊಳುತ ಸಂಗಮೆಯಾಗಿ ತಂಗಿಯ ಬೆರತೀಗ ಮಂಗಳ ಕ್ರೀಡೆಯಲ್ಲಿ ಪ್ರವೇಶಿಸಿ ಗಂಗೆ ಎನಿಸಿಳ್ಯಮನನಾದೇಳಗೆ 4 ಲೋಕದೊಳಗೆ ಪ್ರತಿರಹಿತ ಪೆಸರಾದ ಚೀಕನ ಬರವಿಯ ಅಶ್ವಥಮರದ ನೃಕಂಠೀರವನ ಪಾದದಿ ವ್ಯಾಧಿಷ್ಟರಾದ ಸೋಕಿ ಮೈಮರೆದಂಥ ನಮಿತರು ಕರದಾ ಪಾಕ ಪದಾರ್ಥಕೆ ಒಲಿದೊಲಿದಾಡುತ ಶ್ರೀಕರ ವಿಜಯವಿಠ್ಠಲಗೆರಗುತ ನಾಕಕನ್ನಿಕೆಯಂತೆ ಹೊಳೆದಳುಯಿಂದು5
--------------
ವಿಜಯದಾಸ