ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನ್ಯ ದೇವರ ನಾನರಿಯೆ ಸಿರಿಹರಿಯೆ ಪ ಎನ್ನ ಬಿನ್ನಪ ಕೇಳಯ್ಯ ದೊರೆಯೆ ಅ.ಪ ಹರಬೊಮ್ಮಾದಿಗಳಿಂದ ವರಪಡೆದ ರಾವಣ ಸರುವ ಲೋಕಂಗಳನೆಲ್ಲ ಗೆಲಿದು ಬಂದು ಸಿರಿರಮಣನೆ ನಿನ್ನೊಳು ದ್ವೇಷವನೆ ಮಾಡಿ ತರು ಮೃಗಗಳಿಂದಪರಾಜಿತನಾದನಯ್ಯಾ 1 ದೃಷ್ಟಾಂತಗಳನ್ನೆಷ್ಟು ತೋರಲಿ ನಾನು ದುಷ್ಟ ಜನರೆಲ್ಲ ಪಟ್ಟ ಬವಣೆಗಳಿಗೆ ಶ್ರಿಷ್ಟಿಗೊಡೆಯನೆ ನಾ ಮನಮುಟ್ಟಿ ನುತಿಸುವೆ ಶಿಷ್ಟ ಜನರ ಸಂಗದೊಳಿಟ್ಟೆನ್ನ ಸಲಹಯ್ಯಾ 2 ಮೂರು ಕರಣಗಳಿಂದ ನಾ ನಿನ್ನ ನಂಬಿಹೆನು ಮಾರುತೀಶನೆ ನಿನ್ನ ಚರಣವ ತೋರಿ ಗಾರು ಮಾಡದೆ ನೀ ಸಲಹಬೇಕೆಂಬೆನು ಕಾರುಣ್ಯದಿಂದಲಿ ಶ್ರೀ ರಂಗೇಶವಿಠಲ 3
--------------
ರಂಗೇಶವಿಠಲದಾಸರು