ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾನವ ಸಿಂಗನಾದನು ಪ ರಂಗಮಾನವ ಸಿಂಗನಾಗಲು ಭಂಗಾರ ಗಿರಿಯ ಶೃಂಗಗಳಲ್ಲಾಡೆ ಹಿಂಗದೆ ಎಂಟು ಮಾತಂಗ ಸಪುತ ದ್ವೀ- ಪಂಗಳು ಕಂಪಿಸೆ ವಿಗಡದಿ ಅ.ಪ. ವನಜ ಭವನಂದನರಾನಂದದಿ ವನಧಿಯೊಳಿದ್ದ ವನಜನಾಭನ ವನಜಾಂಘ್ರಿ ದರುಶನಕ್ಕೋಸುಗದಿ ಘನ ವೈಕುಂಠ ಪಟ್ಟಣ ಸಾರೆ ವಿನಯರಲ್ಲದ ಜಯನು ವಿಜಯನವ- ರನು ತಡೆಯಲು ಮುನಿದೀರ್ವರಿಗೆ ದನುಜಾಂಗದಿಂದ ಜನಿಸಿರೋ ಎಂದು ಮುನಿಗಳು ಶಾಪವನ್ನು ಈಯೆ 1 ದಿಕ್ಕು ಎಂಟರೊಳು ಕಕ್ಕಸರೆನಿಸಿ ದಿಕ್ಕು ಪಾಲಕರ ಲೆಕ್ಕಿಸದಲೇವೆ ಸೊಕ್ಕಿ ತಿರುಗುವ ರಕ್ಕಸರಾಗಲು ಮುಕ್ಕಣ್ಣ ಬಲದಿಂದಕ್ಕೆ ಜದಿ ನಕ್ಕು ಪರಿಹಾಸ್ಯಕಿಕ್ಕಿ ಸರ್ವರನು ಮುಕ್ಕಿ ಮುಣಿಗಿ ಧರ್ಮಕೆ ವಿರೋಧಿಸಿ ಸಿಕ್ಕದಂತಲ್ಲಲ್ಲಿ ತುಕ್ಕುತಿರೆ 2 ಇತ್ತ ಶಾಪದಿಂದಲಿತ್ತಲೀರ್ವರಿಗಾ ಪೊತ್ತ ಸುರಾಂಗದಲಿತ್ತಲೋರ್ವವನಿಯು ಕಿತ್ತು ಒಯ್ಯಲು ಬೆಂಬುತ್ತಿ ಹರಿಯು ಕೊಲ್ಲೆ ಇತ್ತ ಹಿರಣ್ಯನುನ್ಮತ್ತದಿಂದ ಸುತ್ತುತಿರುವಾಗ ಪುತ್ರನು ಭಾಗವ ತ್ತೋತ್ತಮನಾಗಿ ಸರ್ವೋತ್ತಮ ಬ್ರಹ್ಮನ ಕರವ ಲೋ- ಕತ್ರಯವರಿವಂತೆ ಬಿತ್ತಿದನು3 ಸೊಲ್ಲು ಕೇಳುತಲಿ ಎಲ್ಲೆಲೊ ನಿನ್ನ ದೈ- ವೆಲ್ಲೊ ಮತ್ತಾವಲ್ಲೆಲ್ಲಿಹನೆನುತಲಿ ನಿಲ್ಲದರ್ಭಕನ್ನ ಕಲ್ಲು ಕೊಳ್ಳಿ ಮುಳ್ಳು ಕರವಾಳ ಬಿಲ್ಲು ನಾನಾ ಎಲ್ಲ ಬಾಧೆಯನ್ನು ನಿಲ್ಲದೆ ಬಡಿಸೆ ಎಳ್ಳನಿತಂಜದೆ ಎಲ್ಲೆಲ್ಲಿಪ್ಪನೆಂದು ಸೊಲ್ಲನು ಬೇಗದಿ ಸಲ್ಲಿಸೆನೆ 4 ಏನು ಕರುಣಾಳೊ ಏನು ದಯಾಬ್ಧಿಯೊ ಏನು ಭಕ್ತರಾಧೀನನೊ ಏನೇನು ನಾನಾ ಮಹಿಮನೊ ಏನೇನೊ ಏನೊ-ಈ- ತನ ಲೀಲೆ ಕಡೆಗಾಣರಾರೊ ದಾನವಾಭಾಸನ ಮಾನಹಾನಿ ಗೈಯೆ ಸ್ಥಾಣು ಮೊದಲಾದ ಸ್ಥಾನದಲ್ಲಿ ಸರ್ವ ದೀನರಿಗೆ ದತ್ತ ಪ್ರಾಣನಾಗ 5 ತುಟಿಯು ನಡುಗೆ ಕಟ ಕಟ ಪಲ್ಲು ಕಟನೆ ಕಡಿದು ನೇಟನೆ ಚಾಚುತ ಪುಟಪುಟ ನಾಸಪುಟದ ರಭಸ ಕಠಿನ ಹೂಂಕಾರ ಘಟುಕಾರ ನಿಟಿಲನಯನ ಸ್ಫುಟಿತ ಕಿಗ್ಗಿಡಿ ಮಿಟಿಯೆ ಹುಬ್ಬಿನ ನಿಟಿಲ ರೋಷದಿ ಮಿಟಿಯೆ ಚಂಚು ಪುಟದಂತೆ ರೋಮ ಚಟುಲ ವಿಕ್ರಮುದ್ಧಟ ದೈವ 6 ನಡುಕಂಭದಿಂದ ಒಡೆದು ಮೂಡಿದ ಕಡು ದೈವವು ಸಂಗಡಲೆ ಚೀರಲು ಬಡ ಜೀವಿಗಳು ನಡುಗಿ ಭಯವ ಪಡುತಲಿ ಬಾಯ ಬಿಡುತಿರೆ ಕಡೆಯೆಲ್ಲೊ ಹೆಸರಿಡಬಲ್ಲವರಾರೊ ತುಡುಗಿ ದುಷ್ಟನ ಪಡೆದ ವರವ ಪಿಡಿದು ಅವನ ಕೆಡಿಸಿ ಹೊಸ್ತಿಲೊ- ಳಡಗೆಡಹಿದನು ಪವಾಡದಲಿ 7 ವೈರಿಯ ಪಿಡಿದು ಊರುಗಳಲ್ಲಿಟ್ಟು ಘೋರ ನಖದಿಂದ ಕೊರೆದು ಉದರವ ದಾರುಣ ಕರುಳಹಾರ ಕೊರಳಲ್ಲಿ ಚಾರುವಾಗಿರಲು ಮಾರಮಣ ಸಾರಿಗೆ ಭಕ್ತಗೆ ಕಾರುಣ್ಯಮಾಡಿ ಶ್ರೀ ನಾರೀಶನಾನಂದದಿ ತೋರುತಿರೆ ಸುರ- ವರರ್ನೆರೆದು ಅಪಾರ ತುತಿಸಿ ಪೂ- ಧಾರೆ ವರುಷ ವಿಸ್ತಾರೆರೆಯೆ 8 ನೃಕೇಸರಿಯಾಗೆ ಭಕುತಗೆ ಬಂದ ದುಃಖವ ಕಳೆದು ಸುಖವನೀವುತ್ತ ಅಕಳಂಕದೇವ ಲಕುಮಿಪತಿ ತಾ- ರಕ ಮಂತ್ರಾಧೀಶ ಸುಕುಮಾರ ಅಖಿಳ ಲೋಕಪಾಲಕ ಪ್ರಹ್ಲಾದಗೆ ಸಖನಾಗಿ ಇಪ್ಪ ಸಕಲ ಕಾಲದಿ ಭಂಜನ ವಿಜಯವಿಠ್ಠಲ ಮುಕುತಿ ಈವ ಭಜಕರಿಗೆ9
--------------
ವಿಜಯದಾಸ
ಸಮೀರಜ ಹನುಮ ಎನ್ನ ಪ್ರಾಣಾಪದಕಾ ಪ ಶಿರಿಚರಣದಲಿ ಮಸ್ತಕವನಿಟ್ಟ ಹೊಂತಕಾರಿ ಸುರಪನಂದನನ ಕೊಲ್ಲಿಸಿದ ನಿರುತ ಉದಾರಿ ಪರಮ ನಿನ್ನಂಘ್ರಿಯವಾರಿ ಸತತ ಶಿರದಲಿ ಧರಿಸುವೆನು ರಿಪುನಿಕರ ಮಾರೀ1 ಉಂಗುರುವ ಕೊಂಡು ಸರ್ರನೆ ಸಾಗರ ಹಾರಿ ತುಂಗ ಮಹಿಮಳಿಗೆ ವಂದಿಸಿ ಗುರುತನೆ ತೋರಿ ಸಂಗಡಲೆ ಯಿತ್ತು ನಂದನ ಕಿತ್ತೆ ಬಲು ಮೀರಿ ಸಂಗರಕೆ ಬಂದ ವಿಕಾರಿಗಳ ನೋಡಿ ಭಂಗಬಡಿಸಿದೆ ಅವರ ಬಲವೆಲ್ಲ ತೂರಿ 2 ನಭಚರರು ಕೊಂಡಾಡೆ ಪುರವೆಲ್ಲ ದಹಿಸಿದೆ ಅಭಿವಂದಿಸಿ ಕುರುಹವರಿಯನ ಮುಂದುವರಿಸಿದೆ ಅಬುಧಿಯನು ವೇಗ ಬಂಧಿಸಿದೆ ಪರ್ವತವ ರಭಸ ಮಿಗೆ ತಂದು ಕಪಿಬಲವನೆಬ್ಬಿಸದೆ 3 ದಾತನಿಗೆ ರಥವಾಗಿ ಚಲ್ಲಿರಿದು ಬೊಬ್ಬಿರಿದೆ ಭೂತಳಕೆ ನೆಗ್ಗೊತ್ತಿ ಎದುರಾದವರ ತರಿದೆ ನೀ ತಡೆಯದೆ ಪೋಗಿ ಮೈರಾವಣನ ಮುರಿದೆ ಕೋತಿಗಳೊಳಗೆ ನೀ ಮೆರೆದೆ ವೇದ ವಿಖ್ಯಾತನೆ ರಾಮ ಸಹಭೋಜದಲಿ ನೆರೆದೆ 4 ಬಲವನು ಬೆಳಿಸಿ ವಾರಿಧಿಯ ಆಚೆಗೆ ಬಲವ ಆಲಸÀಗೈಸದಲೆ ದಾಟಿಸಿದೆ ಬಲು ಛಲವಾ ವಾಲಯದಲಿ ಮಾಡಿ ವೈರಿದಳವನು ಗೆಲುವಾ ಕಾಳಗದೊಳು ನಿನ್ನ ಬಲವ ಕೊಂಡಾಡಿದವರು ಮೂಲೋಕದೊಳಗೆ ಸವಿಯದು ಬಲು ಚೆಲುವಾ 5 ಶತಮೌಳಿಯನು ಕೊಲಿಸಿ ಸತ್ಕೀರ್ತಿಯನು ಪಡೆದೆ ಪ್ರತಿಕಕ್ಷಿ ನಿನಗಿಲ್ಲವೆಂದು ಸತ್ಯವ ನುಡಿದೆ ಸತತದಲಿ ಕಾಪಾಡು ಎನುತ ಪಾದವ ಪಿಡಿದೆ ಮತಿಯಲಿಡು ಎಂದು ಬೇಡಿದೆ ಅಭಯವ ಚತುರ ಫಲದಾಯಕನೆ ದಯಮಾಡು ಬಿಡದೆ 6 ಕಿಂಪುರುಷ ಖಂಡದಲಿ ನಿಜಮೂರುತಿಯ ಧ್ಯಾನ ಇಂಪಾಗಿ ಮಾಡುವ ಅಂಜನೆಯನಂದನಾ ಲಂಪಟವೆ ಸಾಕು ನಿನ್ನಯ ಸುರದ್ರುಮ ಚರಣ ಸಂಪಿನಲಿ ಪೊಂದಿಸನುದಿನ ಎನ್ನ ಗುರುಸಂಪತ್ತು ವಿಜಯವಿಠ್ಠಲನಲ್ಲಿ ಪ್ರಾಣಾ7
--------------
ವಿಜಯದಾಸ
ಸತಿಸುತಗೆಷ್ಟು ತನಗೆಷ್ಟು ಮಾಡಲು ಬೇಕುಮಿತಿ ಮೀರಿ ಮಾಡಿದರೆ ಅಧೋಗತಿ ಮರುಳೆಪಅವರಸ್ವಾಸ್ತಿಯನೀಗ ಇವರಿಗೆ ಮಾಡಿದರೆಅವರು ಬಾರದೆ ಇವರು ಬಹರೇ ಮರುಳೇಅವರಾರು ಇವರಾರು ನಿನ್ನೊಳಗೆ ನೀ ತಿಳಿಯೋಜವಕರೆಯೆ ತೆರಳುವೆಯೋ ಸಂಗಡಲೆ ಮರುಳೆ1ಮನ ಕಂಡರೆ ಇಲ್ಲ ಮೋಕ್ಷ ಕಂಡರೆ ಇಲ್ಲಮಾನಿನಿಯ ಒಡವೆಯಲಿ ಚಿಂತೆ ಮರುಳೆಜ್ಞಾನಿಗಳ ಗುರುತರಿಯನಿನಗೆ ಸ್ಥಿರವೆಂತೆಂಬೆನೀನು ಹೊಗದೆನಿತ್ಯನೀನೆಂತು ಮರುಳೆ2ಕದನಮಾಡುವೀ ನಿನ್ನದೀಗ ಎನ್ನದು ಎಂದುಕದನವಾಡಲಿಕೆ ನೀನಾರೋ ಮರುಳೆಮುದಸುಖವನು ಆಗದಿರು ನೀನು ವಸ್ತಿಯಂಕುರಚಿದಾನಂದ ಬಗಳೆಯ ಚಿಂತೆಯನು ಮಾಡುತಲಿ3
--------------
ಚಿದಾನಂದ ಅವಧೂತರು