ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಲಂ ಮಹಾಲಿಂಗ ದೇವನಿಗೆ ಗಂಗೋತ್ತಮಾಂಗಗೆ ಪ. ತುಂಗಬಲ ಭದ್ರಾಂಗ ಸದಯಾ- ಪಾಂಗ ಭಕ್ತಜನಾಂಗರಕ್ಷಗೆ ಅಂಗಜಾರಿ ಕುರಂಗಹಸ್ತಗೆ ಸಂಗೀತ ಪ್ರೇಮಾಂತರಂಗ ನಿಸ್ಸಂಗಗೆ 1 ವಾಮದೇವಗೆ ವಾಸವಾದಿ ಸು- ಧಾಮ ವಿಬುಧಸ್ತೋಮ ವಿನುತಗೆ ವ್ಯೋಮಕೇಶಗೆ ಸೋಮಚೂಡಗೆ ಭೀಮವಿಕ್ರಮಗೆ ಹೈಮವತಿಪತಿಗೆ 2 ಪ್ರಾಣಪತಿ ಲಕ್ಷ್ಮೀನಾರಾಯಣ- ಧ್ಯಾನಪರಗೆ ಪಾವಂಜೆಗ್ರಾಮ ಪ್ರ- ಧಾನಪುರುಷಗೆ ದೀನಜನಸಂ- ತಾನಗೀಶಾನಗೆ ಜ್ಞಾನಿ ಜಗದ್ಗುರುವಿಗೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶುಭ ಮಂಗಲಂ |ಮಂಜುಕರ ಲಾಲಿತ ಕುರಂಗಗೆ ||ಮಂಗಲ ಮೌನಿ ಮಾನಸ ಸಂಗಗೆ |ಮಂಗಲಂ ಮಂದಿರೀಕೃತ ಶೈಲಶೃಂಗಗೆಮಂಗಲಂ ಮಲ್ಲಿಕಾರ್ಜುನ ಲಿಂಗಗೆ ಪ ಚಾರು ಕಪರ್ದಿಗೆ ಗುಹ ಗಣಾಧಿಪ ಗುರುಗೆ | ಗೋರಾಜ ವಾಹನಗೆ |ಗಿರಿಜಾಂತರಂಗ ವಾರಿಜಭೃಂಗಗೆ 1 ಕರ್ಪೂರ ಗೌರಗೆ ಕಲ್ಪಾಂತವೀರಗೆ | ಕಾಲಾಗ್ನಿ ಕಿಲಕಾಲಿತ ಮಾರಗೆ |ಕಾಕೋಲ ಕಂಧರಗೆ ಕಾಶೀ ವಿಹಾರಗೆ |ಕಾಕೋದರಾಭರಣ ಕಮನೀಯಗೆ 2 ವಿಧು ಶಕಲಾಧಾರಿಗೆ ವಿಶ್ವಹಿತಕಾರಿಗೆ ವಿಯದಟನ ವಿಕಟ ಪುರ ಸಂಹಾರಿಗೆ | ವಿಮಲ ವಿದ್ಯಾನಿಧಿಗೆ |ವಿಧಿವಂದ್ಯ ರುಕ್ಮ ಪಾಡುಕ ಪಾದಗೆ 3 ಮಾಧವ |ಮಂಗಳ ಕರತರಂಗನ | ಅರಿತತಿ ಭಂಗವ ಬಿಡಿಸುತಕಂಗಳ ಸದೋದಿತ ರುಕ್ಮ 4
--------------
ರುಕ್ಮಾಂಗದರು
ಮಂಗಲಂ ಮಹಾಲಿಂಗ ದೇವನಿಗೆ ಗಂಗೋತ್ತಮಾಂಗಗೆ ಪ.ತುಂಗಬಲ ಭದ್ರಾಂಗ ಸದಯಾ-ಪಾಂಗ ಭಕ್ತಜನಾಂಗರಕ್ಷಗೆಅಂಗಜಾರಿ ಕುರಂಗಹಸ್ತಗೆಸಂಗೀತ ಪ್ರೇಮಾಂತರಂಗ ನಿಸ್ಸಂಗಗೆ 1ವಾಮದೇವಗೆ ವಾಸವಾದಿ ಸು-ಧಾಮವಿಬುಧಸ್ತೋಮ ವಿನುತಗೆವ್ಯೋಮಕೇಶಗೆ ಸೋಮಚೂಡಗೆಭೀಮವಿಕ್ರಮಗೆ ಹೈಮವತಿಪತಿಗೆ 2ಪ್ರಾಣಪತಿ ಲಕ್ಷ್ಮೀನಾರಾಯಣ-ಧ್ಯಾನಪರಗೆ ಪಾವಂಜೆಗ್ರಾಮ ಪ್ರ-ಧಾನಪುರುಷಗೆ ದೀನಜನಸಂ-ತಾನಗೀಶಾನಗೆಜ್ಞಾನಿಜಗದ್ಗುರುವಿಗೆ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮಂಗಳ ತ್ರಿವೆಂಗಳಪ್ಪ ಮಂಗಳಾಂಗ ರಂಗಗೆ ಶ್ರೀಮಂಗಳೆಯ ಸಂಗಗೆ ಜಗಂಗಳಾಂತರಂಗಗೆ ಪ.ಕಂಗಳಿಕ್ಕದಂಗೆ ನಿಖಿಳಾಂಗ ಕಪಟಂ ಕಮಠಂ? ಗೆ ಭೂವೆಂಗಳರಸಂಗೆ ನರಸಿಂಗದೇವನಿಗೆ 1ತಿಂಗಳೊಲಿದ್ದಗೆ ಖಳರ ಜಂಗುಳಿ ನಾದ್ದಂಗೆ ಕಲ್ಲವೆಂಗಳ ಮಾಳ್ಪಂಗೆ ಚೆಲ್ವ ಪೊಂಗೊಳಲೂದುವಂಗೆ 2ತುಂಗಮೋಹನಗೆ ಸತುರಂಗವಾಹನಂಗೆ ವಿಹಂಗಗೆ ಭುಜಂಗಶಯನ ಪ್ರಸನ್ನವೆಂಕಟಂಗೆ 3
--------------
ಪ್ರಸನ್ನವೆಂಕಟದಾಸರು
ಸುರತಸುಖಕೆ ಅಂಗನೆಯರ ಮೇಳದಲಿಇಹಗೆ ಆಧ್ಯಾತ್ಮದಗೊಡವೆಏತಕೆಪಭಂಗಿ ಮಧ್ಯದಿ ಕೂಡಿ ಇಹಗೆ ಭಜನೆ ಸಾಧನೆಗಳೇತಕೆರಂಗುರಾಗದಿ ಮುಳುಗುವವನಿಗೆ ರೇಚಕ ವಿದ್ಯೆಯಾತಕೆಶೃಂಗಾರದ ಪದವಿಡಿದ ಮನುಜಗೆ ಸುಷುಮ್ನದ ಮಾರ್ಗವಿದೇತಕೆ1ನಲ್ಲೆಯರ ನುಡಿಯಿಂದ ಕೇಳುವಗೆ ನಾದಧ್ವನಿ ತಂಪೇತಕೆಚೆಲ್ಲೆಗಣ್ಣರ ಕುಚದಲೊರಗುವಗೆ ಚಿತ್ಕಳ ವಿಷಯವೇತಕೆಜೊಲ್ಲು ಕುಡಿಯುತಲಿಹ ಜಡನಿಗೆ ಜ್ವಲಿಸುತಿಹ ಅಮೃತವದೇತಕೆಹಲ್ಲು ತೆರೆವಹೊತ್ತಿಲಿರುವನಿಗೆ ಹಂಸದ ಕೂಟವದೇತಕೆ2ಭಾಮಿನಿಯರ ಸಭೆಯಲಿದ್ದವನಿಗೆ ಭ್ರೂಮಧ್ಯದ ಸದರೇತಕೆವಾಮಲೋಚನೆಯ ಅಂಗಸಂಗಗೆ ಹೃನ್ಮನ ಚಿಂತನವೇತಕೆಕಾಮಿನಿಯ ಕಣ್ಬಲೆಗೆ ಬಿದ್ದವಗೆ ಕಡೆಹಾಯುವ ಚಿಂತನೆಯೇತಕೆಸ್ವಾಮಿ ಚಿದಾನಂದ ಗುರುವಿನ ಸ್ಮರಣೆಯದು ಅವಗೇತಕೆ3
--------------
ಚಿದಾನಂದ ಅವಧೂತರು