ಒಟ್ಟು 7 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದ್ದರಿರಬೇಕು ಅನುದಿನಾ | ಒಳ್ಳೆವರ ಸಹವಾಸಾ ಪ ಅಂಗಸಂಗಗಳಿಂದ | ಮಂಗಳೋತ್ಸಾಹವಾಗಿ | ಕಂಗಳಿಗಿದಿರಿಡುವದು ಉಲ್ಹಾಸಾ1 ಸಾರಿ ಬೀರಿ ಬೋಧವಾ | ದಾರಿದೋರಿ ಭಕ್ತಿಯಾ | ದೂರ ಮಾಡುವರು | ಭವಭಯ ಕ್ಲೇಶಾ 2 ಗುರುವರ ಮಹಿಪತಿಸುತಪ್ರಭು ಸ್ಮರಣೆಯಾ | ಮರಹು ಮರೆಸುವರದರುದ್ದೇಶಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪದ್ಮೇಶ ವಿಠ್ಠಲನೆ | ಪೊರೆಯ ಬೇಕಿವನಾ ಪ ಸನ್ಮುದವ ನೀನಿತ್ತು ಪ್ರೇಮದಲಿ ಸಲಹೋ ಅ.ಪ. ಮನೊಮಾನಿ ಒಡೆಯನೇ | ಮನಸಿನಲಿ ನೀನಿದ್ದುಮನೊ ವಿಕಾರಕ್ಕೆಡೆಯು | ಉಚಿತವೇ ಹರಿಯೇ |ಮನಶಾಂತಿ ಕರುಣಿಸುತ | ಘನ್ನ ಸಾಧನಗೈಸೆಗುಣ ಉಳ್ಳವನು ಇವನು | ಅನಿಲಾಂತರಾತ್ಮಾ 1 ಆದಿ ಮೂರುತಿ ಹರಿಯೆ ಭೇಧ ಪಂಚಕತಿಳಿಸಿಮೋದ ತೀರ್ಥರ ಶಾಸ್ತ್ರ | ಭೋಧ ವದಗಿಸುತಾಸಾಧನ ಸುಮಾರ್ಗದಲಿ | ನೀದಯದಲಿಡು ಇವನವೇದಾಂತ ವೇದ್ಯ ಹರಿ | ಬಾದರಾಯಣನೇ 2 ತೈಜಸನು ನೀನಾಗಿ | ಯೋಜಿಸಿದ ಅಂಕಿತವಮಾಜದಲೆ ಇತ್ತಿಹೆನೊ | ಕಾರುಣ್ಯಮೂರ್ತೇಮೂಜಗಜ್ಜನ್ಮಾದಿ | ಕಾರಣನೆ ಸಂಸಾರಗೋಜುಗಳ ಬಿಡಿಸೊ ನಿ | ವ್ರ್ಯಾಜ ಮೂರುತಿಯೇ 3 ಸಾಧು ಸತ್ಸಂಗಗಳ | ನೀ ದಯದಿ ಕೊಟ್ಟವಗೆಕಾದುಕೋ ಕೈ ಬಿಡದೆ | ಯಾದವರೊಡೆಯಾಬಾಧೆ ಮನಸಿಗೆ ಬಂದಿ | ಹುದ ಕಳೆದು ಸಂತವಿಸುಮೋದ ಮುನಿ ಸಂಪ್ರೀಯ | ಧನ್ವಂತ್ರಿ ದೇವಾ 4 ಪತಿ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಬದುಕು ಬದುಕು ನಂಜುಂಡಾ ಮ ಪರಿಯಂತ ಪ ಜನನಿಯ ಮಾತನು ಮೀರದೆ ಪರ ವನಿತೆಯರಿಗೆ ಮನಸೋಲದೆ ಬಿನುಗು ದೈವಂಗಳಿಗೆರಗದೆ ದು ರ್ಜನರ ಸಂಗಗಳ ನೀ ಮಾಡದೆ ನಂಜಾ 1 ತಪ್ಪುದಾರಿಯಲಿ ನೀ ಪೋಗದೆ ಆರು ಒಪ್ಪದ ಕರ್ಮವ ಮಾಡದೇ ತಪ್ಪು ಕಥೆಗಳನು ಕೇಳದೆ ಬಲು ಸಪ್ಪೆ ವಾಕ್ಯಂಗಳನಾಡದೆ ನಂಜಾ 2 ಹರಿಗೆರಗುತ ಹರಿಶರಣರ್ಗೆ ನಮಿಸುತ ಹರಿಯ ಕಥೆಗಳನ್ನು ಕೇಳುತಾ ಹರಿಯೆ ಸರ್ವೋತ್ತಮನೆಂದು ನೀನಿರುಕಂಡ್ಯ ಸಿರಿ ವೈಕುಂಠಕೇಶವ ರಕ್ಷಿಪ ನಂಜಾ 3
--------------
ಬೇಲೂರು ವೈಕುಂಠದಾಸರು
ಶ್ರೀನಾಥ ವಿಠಲ ಹರಿ | ನೀನೆ ಪೊರೆ ಇವನಾ ಪ ಮಾನನಿಧಿ ಮಧ್ವಾಖ್ಯ | ವಂದಿತ ಸಂಚರಣಾ ಅ.ಪ. ಯೋನಿ ಆನೇಕದಲಿ | ಜನುಮಗಳ ತಾಪೊತ್ತುಮೌನಿ ಜನ ಸಂಯೋಗ | ಸತ್ಸಂಗಗಳ ಪಡೆದೂಧ್ಯಾನ ಸಾಧನಕಾಗಿ | ಮೌನಿರಾಯರ ಸೇವೆಸಾನುರಾಗದಿ ಗೈಯ್ಯೆ | ಶ್ರೀನಾಥ ಒಲಿದೇ 1 ದಾಸ ಸತ್ಪಂಥಾನು | ವಾಸಿಪೆನು ಎಂದೆನುತವಿೂೀಸಲದ ಸನ್ಮನದಿ | ಪ್ರಾರ್ಥಿಸುತ್ತಿಹಗೇಲೇಸು ತೈಜಸನಾಜ್ಞೆ | ಪೋಷಿಸುತ ವಿಠಲನ ಸಸೂಸಿ ಸೇವಿಸಿ ಇತ್ತೆ | ಅಂಕಿತವನಿವಗೇ 2 ಮಾರಾರಿ ಸದ್ವಿನುತ | ತಾರತಮ್ಯವ ತಿಳಿಸಿಮಾರೆರಡು ಭೇಧಗಳ | ಅರಹುತಲಿ ಇವಗೇಪಾರಗಾಣಿಸು ಭವವ | ನೀರೋಜೋದ್ಭವನಯ್ಯಕಾರುಣಿಕ ಶ್ರೀಹರಿಯೆ | ಕಾರುಣ್ಯ ಮೂರ್ತೇ 3 ಸಖನಾಗಿ ಇವನಲ್ಲಿ | ಸುಖ ಕವನ ಪೇಳಿಸುತ ಪ್ರಕಟ ಗೈ ತವರೂಪ | ನಿಕಟ ಹೃದ್ಗುಹದೀವಿಖನಸಾಂಡದ ಓಡೆಯ | ಸಕಲ ಪ್ರೇರಕ ನಿನ್ನಅಕುಟಿಲದೆ ಮನದಿಂದ | ಪ್ರಾರ್ಥಿಸುವೆ ಹರಿಯೇ 4 ಸಿರಿ ಭೂಮಿ ರಮಣನೇಅರಹಲೇನಿಹುದಿನ್ನು | ಸರ್ವಜ್ಞ ಮಾರ್ತೇಕರುಣ ದೃಷ್ಟಿಲಿ ನೋಡಿ | ಪರಿಹರಿಸೊ ದುಷ್ಕರ್ಮಹರಿಯೆ ಗುರು ಗೋವಿಂದ | ವಿಠಲ ಮಾರುತಿಯೆ 5
--------------
ಗುರುಗೋವಿಂದವಿಠಲರು
ಸಣ್ಣವರುದ್ದುಸಕಾಗಿ ಬಿನ್ನಯಿಸುವೆನು ನಾನುಎನ್ನ ಆಳುವ ದೊರೆಯೆ ನಿನ್ನ ಸ್ವಾತಂತ್ರ್ಯ ಸಂಕಲ್ಪಅರಿತವರಲ್ಲ ಚೆನ್ನಾಗಿ ಸಾಕಬೇಕು ಹರಿಯೆ ಪ. ಸಾಧುಸಂಗಗಳಿಲ್ಲ ಓದಿ ಕೇಳಿದರಲ್ಲಭೇದಅಭೇದಗಳ ಅರಿದುಯಿಲ್ಲಕ್ರೋಧ ಬಿಟ್ಟವರಲ್ಲ ಸಾಧುಗಳು ಯೋಗ್ಯತೆಲಿಹಾದಿ ಏನೀಜೀವರುಗಳಿಗೆ ಹೇ ಸ್ವಾಮಿ 1 ವಸ್ತ್ರದ ಮೂಲವು ಹತ್ತಿಯ ಕಾಳಹುದುಬಿತ್ತಿ ಬೆಳೆಸಿ ಅದರ ವ್ಯಕ್ತಿ ಮಾಡಿವಿಸ್ತರಿಸಿ ನೋಡಿಸಿದರೆ ಪಟ್ಟುವು ಆಗುವುದುವಸ್ತುಗಳ ವ್ಯಕುತಿ ನಿನ್ನಿಂದಾಗಬೇಕು 2 ಮಾಡಲರಿಯರು ತುತಿಯ ನೋಡಲರಿಯರು ನಿನ್ನಬೇಡಲರಿಯರು ತಮ್ಮ ಹಿತದ ಕಾಮಮಾಡುವರು ನಿನ್ನವರ ಮಮತೆಯಾದರು ಮನಸು-ಗೊಡು ಈಪರಿ ಜೀವಗಳಿಗೆ ಗತಿಯೇನೊ 3 ನಿನ್ನಿಂದ ಸೃಷ್ಟಿಯಾದ ಜೀವರುಗಳಿಗಿನ್ನುಇನ್ನು ಮೂರು ಬಗೆಯ ಭಕುತರೊಳಗೆಎನ್ನಿಂದ ಉತ್ತಮ ಮಧ್ಯಮಾಧಮರುಗಳುಇನ್ನಾವ ಇವರ ವಿವೇಕ ನೀ ಬಲ್ಲೆ 4 ಎನಗಿಂದುತ್ತಮರು ಎನಗೆ ಪ್ರಾರ್ಥಿಸುವರುಎನಗೆಂದವರಲೆನಗೆ ಹಿತ ಪೇಳ್ವರುಘನ ಅವರ ಮಧ್ಯಸ್ಥರನು ಹುಡುಕ ತಿಳಿಯದುಅನುವರಿತು ಅವರವರ ಗತಿಗೆ ಅನುಕೂಲನಾಗು 5 ನೀತವನು ನೀ ಬಲ್ಲೆ ಅವರವರ ಸಾಧನವುಯಾತಕೆ ಅವರಗೊಡವೆ ನಿನಗೆ ಎಂಬ್ಯನೀತವಾಗಿದೆ ನೋಡೊ ಪರಸ್ಪರ ಜೀವರಿಗೆಪ್ರಾರ್ಥನೆಯು ಎಂಬುವುದು ಮಾತು ಪುಸಿಯಲ್ಲ 6 ನಿನ್ನವರು ಆಗಿ ಪಾಡನುಬಡುತ ಇಪ್ಪುವರಕಣ್ಣಲಿಕಂಡು ನಾ ಬಿಡುವನಲ್ಲಮನ್ನಿಸು ನಿನ್ನ ಚಿತ್ತ ಮನ್ನಿಸದಲೆ ಪೋಗುಎನ್ನ ಸ್ವಭಾವವಿದೆ ಗೋಪಾಲವಿಠಲ 7
--------------
ಗೋಪಾಲದಾಸರು
ದೃಷ್ಟಿ ನಿನ್ನ ಪಾದದಲ್ಲಿ ನೆಡುವ ಹಾಗೆ - ಧರೆಯದುಷ್ಟ ಜನರ ಸಂಗಗಳನು ಬಿಡುವ ಹಾಗೆ ಪ.ಕೆಟ್ಟ ಮಾತ ಕಿವಿಯಿಂದ ಕೇಳದ ಹಾಗೆ ಮನವಕಟ್ಟು ಸದಾ ನಿನ್ನ ಧ್ಯಾನ ಬಿಡದ ಹಾಗೆ ಅಪದೃಷ್ಟನಾಗಿ ಕೈಯನೆತ್ತಿ ಕೊಡುವ ಹಾಗೆ ಶ್ರೀಕೃಷ್ಣ ನಿನ್ನ ಪೂಜೆಯನ್ನು ಮಾಡುವ ಹಾಗೆ ||ಭ್ರಷ್ಟನಾಗಿ ನಾಲ್ವರೊಳು ತಿರುಗದ ಹಾಗೆ ಬಲುಶಿಷ್ಟ ಜನರ ಸೇವೆಯನು ಮಾಡುವ ಹಾಗೆ 1ಪುಟ್ಟಿಸಿದ ತಾಯಿ - ತಂದೆಯಲ್ಲವೆ ನೀನು - ಒಂದುಹೊಟ್ಟೆಗಾಗಿ ದೈನ್ಯ ಪಡಬೇಕೇ ನಾನು ||ಪಟ್ಟೆ -ಪಟ್ಟಾವಳಿ ಬೇಡಲಿಲ್ಲ ನಾನು ಎನ್ನಗುಟ್ಟು ಅಭಿಮಾನಗಳ ಕಾಯೋ ನೀನು2ನಟ್ಟನಡು ನೀರೊಳೀಸಲಾರೆ ನಾನು ಎತ್ತಿಕಟ್ಟೆಯ ಸೇರಿಸಬೇಕಯ್ಯ ನೀನು ||ಬೆಟ್ಟದಷ್ಟು ಪಾಪ ಹೊತ್ತಿರುವೆ ನಾನು ಅದನುಸುಟ್ಟು ಬಿಡುಪುರಂದರ ವಿಠಲ ನೀನು3
--------------
ಪುರಂದರದಾಸರು
ವಿಜಯರಾಯರ ನೆನೆದು ದಿಗ್ವಿಜಯ ಮಾಡಿರೊಶ್ರವಣ ಮನನವು ನಿಧಿಧ್ಯಾಸನವು ಮಾಡುವಾಗಹರಿದಿನದಲಿ ಉತ್ಸಾಹಜಾಗರಮಾಡುವಾಗಅರಸುಗಳಿಂದ ಆದರಕೊಂಬುವಾಗದ್ವೈತಅದ್ವೈತಪ್ರಸಂಗಗಳ ಮಾಡುವಾಗನರಗಳನು? ವರಗಳನು ಕೊಡುವಾಗವಿ ಎಂದು ಜಪಿಸಲು ವಿರಕುತಿ ದೊರಕುವುದುಹರಿಯೆ ನಿರ್ದೋಷ ಜ್ಞಾನಾನಂದ ಪರಿಪೂರ್ಣ
--------------
ಗೋಪಾಲದಾಸರು