ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿತವರಿಗತಿ ಸುಲಭ ಹರಿಯ ಪೂಜೆ ಪ ಅರಿಯದವ ನಿರ್ಭಾಗ್ಯತರ ಲೋಕದೊಳಗೆ ಅ.ಪ. ಹೈಮಾಂಡ ಮಂಟಪವು ಭೂಮಂಡಲವೆ ಪೀಠ ಸೋಮ ಸೂರ್ಯರೆ ದೀಪ ಭೂರುಹಗಳು ಚಾಮರಗಳತಿ ವಿಮಲ ವ್ಯೋಮ ಮಂಡಲ ಛತ್ರ ಯಾಮಾಷ್ಟಕರಗಳಷ್ಟದಳದ ಪದ್ಮವುಯೆಂದು 1 ಮಳೆಯೆ ಮಜ್ಜನವು ದಿಗ್ವಲಯಂಗಳೇ ವಸನ ಮಲಯಜಾನಿಲವೇ ಶ್ರೀಗಂಧ ಧೂಪಾ ಇಳೆಯೊಳಗೆ ಬೆಳೆದ ಧಾನ್ಯಗಳೆಲ್ಲ ನೈವೇದ್ಯ ಥಳ ಥಳಿಪ ಮಿಂಚು ಕರ್ಪೂರದಾರತಿಗಳೆಂದು 2 ನಕ್ಷತ್ರ ಮಂಡಲವೇ ಲಕ್ಷ ದೀಪಾವಳಿಯು ದಕ್ಷಿಣೋತ್ತರ ಅಯನಗಳೇ ಬನವು ವೃಕ್ಷ ವಲ್ಲಿಜ, ಸುಫಲ ಪುಷ್ಪಗಳೊಳಗೆ ಲಕ್ಷ್ಮೀ ವಕ್ಷ ವ್ಯಾಪಕನಾಗಿ ತಾನೆ ಭೋಗಿಪನೆಂದು 3 ಗುಡುಗು ಸಪ್ತ ಸಮುದ್ರ ಸಿಡಿಲು ಘೋಷವೇ ವಾದ್ಯ ಪೊಡವಿಪರಿಗೀವ ಕಪ್ಪವೇ ಕಾಣಿಕೆಗಳು ಉಡುಪ ಭಾಸ್ಕರರ ಮಂಡಲಗಳಾದರ್ಶಗಳು ನಡೆವ ನಡೆಗಳು ಹರಿಗೆ ಬಿಡದೆ ನರ್ತನವೆಂದೂ 4 ಯುಗ ಚತುಷ್ಟಯವೆ ಪರಿಯಂಕ ಪಾದಗಳಬ್ದ ಬಿಗಿವ ಪಟ್ಟಿಗಳು ಕಂದಾಯ ಕಸಿ ಯೊ ಗಗನ ಮೇಲ್ಗಟ್ಟು ಸಂಕ್ರಮಣಗಳೇ ಬಡವುಗಳೂ ಭಗವಂತಗುಪಬರ್ಹಣಗಳು ಷಡೃತುಗಳೆಂದೂ 5 ನಾಗವಲ್ಲೆಗಳೆ ದಿವಸಗಳು ಕರಣವೇ ಕ್ರಮಕೆ ಯೋಗಗಳೇ ಚೂರ್ಣ ರಾತ್ರೆ ತಾಂಶೊಕ ಭೋಗವತೀ ಜಲವೆ ಗಂಡೂಷೋದಕ ಶುದ್ಧ ಸಾಗರವೆ ಪಾದೋದಕ ವಿರಾಡ್ರ್ರೂಪಗೆಂದು6 ಶಾತಕುಂಭೋಧರಾಂಡಾಂತಸ್ಥ ರೂಪ ಸಂ ಪ್ರೀತಿಯಿಂದಲಿ ಯಜಿಸಿ ಮೋದಿಪರನಾ ಮಿತ ಶೋಕರ ಮಾಡಿ ಸಂತೈಸುತಿಹ ಜಗ ನ್ನಾಥ ವಿಠಲ ಒಲಿದು ಸರ್ವ ಕಾಲಗಳಲ್ಲಿ 7
--------------
ಜಗನ್ನಾಥದಾಸರು
ಏಳಯ್ಯ ಸುಬ್ರಹ್ಮಣ್ಯ ಬೆಳಗಾಯಿ- ತೇಳಯ್ಯ ಸುಬ್ರಹ್ಮಣ್ಯ ಕೋಳಿ ಕೂಗುವದು ವನಜಾಳಿಸೌರಭ್ಯ ತಂ- ಗಾಳಿ ಬೀಸುವದು ಕರುಣಾಳು ತವಚರಣವ- ಕೀಲಾಲಜಾಪ್ತನೀಗ ಕಾಲಕಾಲದಿ ಭಕ್ತಜಾಲವನು ಜಯಗೊಳಿಸಿ ಪಾಲಿಸುವ ಪಾರ್ವತೀಬಾಲ ಭಾಸ್ಕರತೇಜ ಲೋಲಲೋಚನೆಯ ಸಹಿತ 1 ಇಂದು ಸಂಕ್ರಮಣ ದಿನ ಬಂದಿಹರು ಭಕ್ತಜನ- ವೃಂದ ಕಾಣಿಕೆ ಕಪ್ಪ ತಂದು ನಿಂದಿಹರು ಬಲ- ಸಲಹೆಂದು ಸ್ತುತಿಸೆ ಕಂದರ್ಪಸಾಹಸ್ರ ಸೌಂದರ್ಯ ಮೂರ್ತಿಯನು ಚಂದದಿಂ ಕಾಣುವಾನಂದ ಮಾನಸರು ಗೋ- ಸ್ಕಂದ ಕರುಣಾಸಿಂಧುವೆ 2 ಪೃಥ್ವಿಯೊಳಗುತ್ತಮ ಪವಿತ್ರ ಪಾವಂಜಾಖ್ಯ ಕ್ಷೇತ್ರಾಧಿವಾಸ ಲೋಕತ್ರಯ ವಿಭೂಷಣ ಪ- ಕಾರ್ತಿಕೇಯ ನಮೋಸ್ತುತೇ ಭೃತ್ಯವತ್ಸಲ ಭವಭಯಾಬ್ಧಿಕುಂಭಜ ಭಜಕ- ಪ್ರೋತ್ಸಾಹ ಪಾವನಚರಿತ್ರ ಸುತ್ರಾಮನುತ ಮೃತ್ಯುಂಜಯನೆ ಪುತ್ರನೆ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಏಳಯ್ಯ ಸುಬ್ರಹ್ಮಣ್ಯ ಬೆಳಗಾಯಿ- ತೇಳಯ್ಯ ಸುಬ್ರಹ್ಮಣ್ಯ ಕೋಳಿ ಕೂಗುವದು ವನಜಾಳಿಸೌರಭ್ಯ ತಂ- ಗಾಳಿ ಬೀಸುವದು ಕರುಣಾಳು ತವಚರಣವ- ಕೀಲಾಲಜಾಪ್ತನೀಗ ಕಾಲಕಾಲದಿ ಭಕ್ತಜಾಲವನು ಜಯಗೊಳಿಸಿ ಪಾಲಿಸುವ ಪಾರ್ವತೀಬಾಲ ಭಾಸ್ಕರತೇಜ ಲೋಲಲೋಚನೆಯ ಸಹಿತ1 ಇಂದು ಸಂಕ್ರಮಣ ದಿನ ಬಂದಿಹರು ಭಕ್ತಜನ- ವೃಂದ ಕಾಣಿಕೆ ಕಪ್ಪ ತಂದು ನಿಂದಿಹರು ಬಲ- ಸಲಹೆಂದು ಸ್ತುತಿಸೆ ಕಂದರ್ಪಸಾಹಸ್ರ ಸೌಂದರ್ಯ ಮೂರ್ತಿಯನು ಚಂದದಿಂ ಕಾಣುವಾನಂದ ಮಾನಸರು ಗೋ- ಸ್ಕಂದ ಕರುಣಾಸಿಂಧುವೆ2 ಪೃಥ್ವಿಯೊಳಗುತ್ತಮ ಪವಿತ್ರ ಪಾವಂಜಾಖ್ಯ ಕ್ಷೇತ್ರಾಧಿವಾಸ ಲೋಕತ್ರಯ ವಿಭೂಷಣ ಪ- ಕಾರ್ತಿಕೇಯ ನಮೋಸ್ತುತೇ ಭೃತ್ಯವತ್ಸಲ ಭವಭಯಾಬ್ಧಿಕುಂಭಜ ಭಜಕ- ಪ್ರೋತ್ಸಾಹ ಪಾವನಚರಿತ್ರ ಸುತ್ರಾಮನುತ ಮೃತ್ಯುಂಜಯನೆ ಪುತ್ರನೆ3
--------------
ತುಪಾಕಿ ವೆಂಕಟರಮಣಾಚಾರ್ಯ
ಕಮಲ ಭಜಿಸೋ ಮೈಲಾರ ಲಿಂಗನ ಪ ಪುರಹರ ಸ್ವರೂಪನೆ ಎಂದು ಧ್ಯಾನಿಸೋ ಪಾತಕ ತಿಮಿರ ಭಾಸ್ಕರನೆಂದು ನೀ ಸ್ಮರಿಸೋ ಶಿರಬಾಗಿ ನಮಿಸೋ ಅ.ಪ ತುರಗವಾಹನವೇರಿ ಬರುತಿಹನ ಧರೆಯೊಳಗೆ ಮೈಲಾಪುರ ಸುಮಂದಿರನೆಂದು ಕರೆಸುವನಾ ಹೊನಕೆರೆಯ ಜಲದಭಿಷೇಕದಿಂದ ರ್ಚನೆಯ ಕೊಂಬುವನ ಶರಣರನ ಪೊರೆವನ 1 ಕಾಲಕಾಲದಿ ಪಾಲಕಿಯ ಉತ್ಸವದಿ ಮೆರೆಯುವನ ಅನು ಗಾಲಭಕುತರ ಮ್ಯಾಳವನು ಪಾಲಿಸಲು ಬಂದಿಹನ ಕೇಳಿ ದ್ವರಗಳ ಕೊಡುವ ಘನ ತ್ರಿಶೂಲ ಧರಿಸಿಹನ ಮಾಳಸಾಕಾಂತನ 2 ನಿಷ್ಠೆಯಿಂದಲಿ ಭಜಿಪ ಭಕುತರನ ರಕ್ಷಿಸಲು ಕೊಪ್ಪರ ಕಟ್ಟಿಯಲಿ ಸೇವೆಯನ್ನು ಕೊಳುತಿಹನ ಸಿರಿ ವಿಷ್ಣು ಭಕುತರ ಮನೆಗಳಲಿ ಪೂಜೆಯನು ಕೊಂಬುವನ ಇಷ್ಟ ಪ್ರದಾತನ3 ಸಂಚರಿಸುತಲಿ ದಿನಕರನು ಮಕರದಿ ಬರಲು ಸಂಕ್ರಮಣ ಉತ್ಸವದಿ ನೋಡಲು ನೆರೆದ ಬಹು ಜನ ರಿಂದ ಸೇವಿತನ ಗಿರಿಶಿಖರ ಗುಂಡಿನ ಮೇಲೆ ದೀಪೋತ್ಸವದಿ ರಾಜಿತನ ಮಹಿಮಾನ್ವಿತನ 4 ವಿನುತ ಶುಭಚರಣ ಸರೋಜ ಕಾರ್ಪರ ನಾರಸಿಂಹನ ಒಲಿಮೆ ಪಡೆ ದಿಹನಾ ರವಿವಾರ ವಾರದಿ ಮಾರ್ತಾಂಡದೇವನ5
--------------
ಕಾರ್ಪರ ನರಹರಿದಾಸರು
ತೇನಮೋ ಜಗದೇಕನಾಥ ರಮಾ ಮಾನಸಾಂಬುಜರಾಜಹಂಸಾಯ ವಿಷ್ಣವೇ ಪ ಜಗದೇಕವೀರ ಜನನಾದಿ ದೂರಾ ಸುಗುಣ ವಿಸ್ತಾರ ಸುಖಮಯ ಶರೀರ 1 ಗಾನರಸಲೋಲ ಕನಕಮಯಚೇಲ ಆನತೋದ್ಧರಣ ಅಮೃತಾಬ್ಧಿಶಯನ 2 ಚಂದ್ರಾರ್ಕನಯನ ಚಾರುತರ ಕಥನ ಇಂದ್ರಾರಿ ಮಥನ ಇಭವೈರಿವದನ ಇಂದ್ರ ಸಂಕ್ರಮಣ ವೇಲಾಪುರಿಸದನ ವಂದ್ಯಾಖಿಲಜನ ವೈಕುಂಠ ರಮಣ3
--------------
ಬೇಲೂರು ವೈಕುಂಠದಾಸರು
ಶ್ರೀನಿವಾಸನೆ ನಿನ್ನ | ವರ್ಣಿಸಲು ಅಳವೇ ಮಾನನಿಧಿ ಗುಣಪೂರ್ಣ | ನಿನ್ನಂಘ್ರಿ ಭಜಿಪರ ಬನ್ನ ಪ. ವೈನತೇಯನ ವರೂಥ ನಾನಾ ಹಾರ ಪದಕದಿ ಮೆರೆವ ಸುಂದರ ಕಾಮಪೂರ್ಣ ಮುಖಾರವಿಂದನ ನೀ ಮನದಿ ತೋರುತ್ತ ಪೊರೆಯೊ ಅ.ಪ. ಶೇಷಪರ್ವತವಾಸ | ಭಕ್ತರನು ಸಲಹೋ ಈ ಕ್ಷಿತಿತ್ರಯಕೀಶ ಪೋಷಿಸುವೋ ಭಕ್ತರವಾಸಿ ನಿನ್ನದೊ ಶ್ರೀಶ ಲಕ್ಷ್ಮೀನಿವಾಸ ದೋಷದೂರನೆ ಎನ್ನ ಅವಗುಣ ದೋಷಗಳನೆಣಿಸದಲೆ ಸಲಹೊ ಶೇಷವರ ಪರ್ಯಂಕಶಯನ ವಿ- ಭೀಷಣ ಪ್ರಿಯ ಭೀಷ್ಮವರದ1 ಮಾಘ ಸಪ್ತಮಿ ಕುಂಭ | ಸಂಕ್ರಮಣ ದಿವ್ಯ ಯೋಗ ಶುಕ್ಲದಿ ಎಂಬ | ಸ್ಥಿರವಾರದಲ್ಲಿ ಆಗ ರಥದಲ್ಲಿ ಬಿಂಬ | ಭಕುತರಿಗೆ ಕಾಂಬ ಜಾಗು ಮಾಡದೆ ಸೂರ್ಯಮಂಡಲ ಬೇಗ ಬಿಗಿದಿಹ ಸಪ್ತ ಹಯಗಳ ಬಾಗಿ ಭಜಿಸಲು ಭಕ್ತವರ್ಗವು ನೀ ಜಗದಿ ಮೆರೆಯುತ್ತ ಪೊರೆದೆ 2 ವಿೂನನಾಗಿ ಮತ್ತೆ ವೇದವನೆ | ತಂದು ಆ ನಳಿನಭವಗಿತ್ತೆ ಅಲ್ಲಿಂದ ಸುರರಿಗೆ ಪ್ರಾಣದಾನವನಿತ್ತೆ ಮೇದಿನಿಯ ಪೊತ್ತೆ ನಾನೆ ಜಗಕೆಂಬ ದಾನವನ ಕೊಂದು ದಾನ ಬೇಡಿ ಭೂಮಿ ಅಳೆದು ಮಾನಿನಿ ಶಿರ ತರಿದು ಸೀತಾ ಮಾನಿನಿಗೆ ಅಂಬುಧಿಯ ಬಿಗಿದೆ 3 ಮಾನಿನಿಯರಿಗೆ ಕಾಣದೆ | ಬೆಣ್ಣೆಯನು ಕದ್ದು ಮಾನವೆಲ್ಲವ ಕಳೆದೆ ಅಲ್ಲಿಂದ ಮುಂದೆ ಮಾನವ ಬಿಟ್ಟು ನಿಂದೆ ಏನ ಹೇಳಲಿ ಹಯವನೇರಿ ದಾನವರ ಸಂಹರಿಸಿ ಮೆರೆದೆ ನಾನಾ ರೂಪ ನಾಟಕಧರ ನೀನೀ ಪರ್ವತದಲಿ ನಿಂದಿಹೆ 4 ದೇಹವ್ಯಾಪ್ತಕ ನೀನೆ | ದೇಹಗಳ ಕೊಟ್ಟು ಮೋಹಗೊಳಿಸುವ ನೀನೆ ದೇಹಸ್ಥನಾಗಿ ತೋರುವ ಬಿಂಬ ನೀನೆ | ಜೀವಾಕಾರನೆ ಈ ಹದನ ಎನಗಿನ್ನು ತಿಳಿಯದೊ ಮೋಹ ಹರಿಸಿ ಸುಜ್ಞಾನ ನೀಡೊ ಸ್ನೇಹ ಗೋಪಾಲಕೃಷ್ಣವಿಠ್ಠಲ ಶ್ರೀ ಹರಿಯೆ ಹೃದಯದಲಿ ನಿಲಿಸೊ 5
--------------
ಅಂಬಾಬಾಯಿ