ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅ) ಶ್ರೀಹರಿಸ್ತುತಿಗಳು ಬೋಧರೂಪನೆ ವೇದವೇದ್ಯನೆ ಬೇಗ ಮೋಕ್ಷವನೀವನೇ ವೇದತಸ್ಕರನಂ ವಿಭಂಜಿಸಿ ವೇದಮಂತ್ರವ ತಂದನೇ ಪ ಮೋದದಿಂದಗವನ್ನು ಬೆನ್ನಲಿ ಮಂತ್ರಪೊತ್ತ ದೇವನೆ ಪೋಷಿಸೈ ಸಾದರಂಮಿಗೆ ರಂಗನಾಥನೆಸಂತತಂ ನುತಿಗೈದಪೆಂ ಅ.ಪ ವಿಹಂಗ ರಾಜತುರಂಗ ಸನ್ಮುನಿ ಸಂಗಮಾ ಹಿರಣ್ಯ ಲೋಚನದರ್ಪಶಿಕ್ಷಲ ಸತ್ಕøಪಾ ಪಾಂಗ ದೈತ್ಯತನೂಭವೇಷ್ಟದ ತುಂಗ ಶೌರ್ಯ ವಿಶಿಷ್ಟ ಶ್ರೀ ರಂಗನಾಥನೆ ರಕ್ಷಿಸೈ ಭವದಂಘ್ರಿಸೇವೆಯೊಳಾವಗಂ1 ಸುಂದರಾಂಗನೆ ಸೂರಿವಂದ್ಯನೆ ಕುಂದಕುಟ್ಮಲದಂತನೇ ಮಂದಹಾಸದೊಳೊಂದಿ ಬಾಲಕನಂದದಿಂದಲಿ ಬಂದು ಸಾ ನಂದದಿಂಬಲಿಯಿಂದಭೂಮಿಯನಂದುದಾನವಕೊಂಡಗೋ ವಿಂದಪೋಷಿಸುರಂಗನಾಥಮುಕುಂದನೀಂ ಪರಿತೋಷದಿಂ2 ರಾಮ ತಾಮರಸೋದ್ಭವಸ್ತುತನಾಮ ಸದ್ಗುಣಧಾಮ ಶ್ರೀ ರಾಮಕೃಷ್ಣ ದಿನೇಶಮಂಡಲಧಾಮದೀನಶರಣ್ಯ ನಿ ಷ್ಕಾಮ ಸಂಗರಭೀಮ ದೈತ್ಯವಿರಾಮ ಸುಂದರಕಾಮ ಸು ತ್ರಾಮವಂದ್ಯನೆ ರಂಗನಾಥನೆ ರಕ್ಷಿಸೆನ್ನನು ಮೋದದಿಂ3 ಧೀರಬುದ್ಧನೆ ಕಲ್ಕಿರೂಪನೆ ಧೀರಸಂಕುಲದಿವ್ಯಮಂ ದಾರ ನಿನ್ನನೆ ಬೇಡಿಕೊಂಬೆನು ಘೋರಸಂಸ್ಕøತಿಬಂಧದಿಂ ಗಾರುಮಾಡಿಸದಿನ್ನು ಮಾತೆಯಗರ್ಭಕೆಂದಿಗುತಾರದೆ ಪಾರಗಾಣಿಸಿ ರಂಗನಾಥನೆ ಪಾಲಿಸೈ ಬಿಡದಳ್ಕರಿಂ 4
--------------
ರಂಗದಾಸರು
ವಿಬುಧ ಪ್ರಿಯ ವಿಠಲ | ಶುಭದ ಪೊರೆ ಇವನಾ ಪ ಅಬುಜ ಜಾಂಡೋದರನೆ | ಕುಬುಜೆ ಸದ್ ವರದಾ ಅ.ಪ. ದಾಸನಾಗಲು ಇವಗೆ | ಆಶೆ ಪ್ರೇರಕನಾಗಿವಾಸು ದೇವಾಖ್ಯ ತೈ | ಜಸನೆ ಕಾರ್ಯರೂಪಿಸೂಸಿತವ ರೂಪವನು | ಲೇಸಾಗಿ ತೋರಿಸೆಹೆಕೇಶವನೆ ಅದನೆ ಉಪ | ದೇಶಿಸಿಹೆ ಹರಿಯೆ 1 ಪ್ರೀಯ ಅಪ್ರೀಯ ಉ | ಭಾಯಾನು ಭವದಲ್ಲಿಆಯುತನು ನೀನಾಗಿ | ಉದ್ವೇಗ ಕೊಡದೇನಿಯುತಕರ್ಮದಿ ರತನ | ದಯದಿಂದ ನೀಮಾಡಿಹಯಮೊಗಾಖ್ಯ ಹರಿಯೆ | ಕೈಯಪಿಡಿ ಇವನಾ 2 ಲೋಕವಾಕ್ಯದಿ ವಿರಸ | ಲೋಕೈಕನಾಥನುವಾಕ್ಯದೊಳು ರತಿಯನ್ನೆ | ನೀ ಕೊಟ್ಟಿ ಕಾಯೋ |ಮಾಕಳತ್ರನದಾಸ | ಸಂಕುಲದಿ ಸದ್‍ಭಕ್ತಿಶ್ರೀಕರನೆ ನೀನಿತ್ತು | ಸಾಕ ಬೇಕಿವನಾ 3 ಮಧ್ವಮತದಲಿ ದೀಕ್ಷೆ | ಶುದ್ಧ ಹರಿ ಗುರುಭಕ್ತಿಅದ್ವೈತ ಕ್ರಯವರಿಯೆ | ವಿದ್ಯೆ ಸಂಘಟಿಸೀಕೃದ್ಧಖಳ ನಿವಹಗಳ | ಪ್ರಧ್ವಂಸಗೈಯುತಲೀಉದ್ದರಿಸೋ ಇವನನ್ನು | ಮಧ್ವಾಂತರಾತ್ಮ 4 ವೇದ ಕದ್ದೊಯ್ದವನ | ಬಾಧೆ ನೀ ಪರಿಹರಿಸಿಸಾದುಗಳ ಪೊರೆದಂತೆ | ಆದರಿಸಲಿವನಾಮೋದಿ ಗುರು ಗೋವಿಂದ | ವಿಠಲನೆ ಬಿನ್ನವಿಪೆಮೈದೊರಿ ಸಲಹುವುದು | ಸಾಧುವಂದಿತನೇ 5
--------------
ಗುರುಗೋವಿಂದವಿಠಲರು