ಒಟ್ಟು 9 ಕಡೆಗಳಲ್ಲಿ , 7 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನೇತರೊಳಗಾಸೆ ಎನಗಿಲ್ಲವೋ ಈಗಳಿನ್ನು ಹರಿನಾಮ ಸಂಕೀರ್ತನೆಯೊಂದು ಹೊರತಾಗಿ ಪ ನೋಡಿ ಸಾಕಾಯ್ತು ಲೋಕದ ಪ್ರಪಂಚವನು ಪೇ ಚಾಡಿ ಸಾಕಾಯ್ತು ದರಮಂ ಪೊರೆಯಲು ಆಡಿ ಸಾಕಾಯ್ತು ಸುಜನರೊಳ ನೃತಗಳನು ಒಡ ನಾಡಿ ಸಾಕಾಯ್ತು ಕುಜನರ ಸಂಗದೊಳಗೆ 1 ಉಂಡು ಸಾಕಾಯ್ತು ಸಂಸಾರ ಸುಖ ದುಃಖವನು ನಾ ಕಂಡು ಸಾಕಾಯ್ತು ಸುಜನರ ಭಂಗವನು ತಂಡಿ ಸಾಕಾಯ್ತು ಪರಸೇವೆಯನು ಮಾಡಿ ಜನ ರಂಡಲೆದು ಬೇಡಿ ಸಾಕಾಯ್ತು ಈ ಭವಕೆ 2 ತಿರು ತಿರುಗಿ ಸಾಕಾಯ್ತು ತಲೆ ಹುಳಿತ ನಾಯಂತೆ ಪರಿ ಪರಿಯ ದುಃಖಗಳನುಣ್ಣುತ ಚರಿಸಿದೆನು ಮರುತಸುತ ಕೋಣೆ ಲಕ್ಷ್ಮೀರಮಣ ಇರಿಸಿದಂತಿರ ಬೇಕು ಸಕಲಜನರು 3
--------------
ಕವಿ ಪರಮದೇವದಾಸರು
ದಾಸ ದಾಸರ ಮನೆಯ ದಾಸಿಯರ ಮಗ ನಾನುಸಾಸಿರ ನಾಮದೊಡೆಯ ರಂಗಯ್ಯನ ಮನೆಯ ಪ ಶಂಕು ದಾಸರ ಮನೆಯ ಮಂಕುದಾಸನು ನಾನುಮಂಕುದಾಸನು ನಾನು ಮರುಳುದಾಸಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ ಬಿಂಕದಿ ಬಾಗಿಲ ಕಾಯ್ವ ಬಡ ದಾಸ ನಾನಯ್ಯ 1 ಕಾಳಿದಾಸರ ಮನೆಯ ಕೀಳುದಾಸನು ನಾನುಆಳುದಾಸನು ನಾನು ಮೂಳದಾಸಫಾಲಾಕ್ಷ ಸಖ ನಿನ್ನ ಭಜಿಪ ಭಕ್ತರ ಮನೆಯಆಳಿನಾಳಿನ ದಾಸ ಅಡಿದಾಸ ನಾನಯ್ಯ 2 ಹಲವು ದಾಸರ ಮನೆಯ ಹೊಲೆಯ ದಾಸನು ನಾನುಕುಲವಿಲ್ಲದ ದಾಸ ಕುರುಬ ದಾಸಛಲದಿ ನಿನ್ನ ಭಜಿಪರ ಮನೆಯ ಮಾದಿಗ ದಾಸಸಲೆ ಮುಕ್ತಿ ಪಾಲಿಸೆನ್ನೊಡೆಯ ಕೇಶವನೆ 3
--------------
ಕನಕದಾಸ
ನಿತ್ಯ ಶುಭಮಂಗಳಂ ಪ. ಹೃದಯವೆಂಬೀ ದಿವ್ಯ ಪದ್ಮಪೀಠದ ಮೇಲೆ ಪದ್ಮಾಕ್ಷಿ ಪದ್ಮೆಯನು ಕುಳ್ಳಿರಿಸಿ ಸದಮಲ ಭಾವದಿಂ ಮಧುಕೈಟಭಾಂತಕನ ಹೃದಯೇಶ್ವರಿಯ ಸೇವೆಗೈವೆ 1 ಜ್ಞಾನವೆಂಬುವ ದಿವ್ಯ ಜ್ಯೋತಿಯಂ ಮುಂದಿರಿಸಿ ಧ್ಯಾನವೆಂಬುವ ನಿಲುವುಗನ್ನಡಿಯ ನಿಲಿಸಿ ದಾನÀವಾಂತಕ ರಾಮಚಂದ್ರಮನ ಧ್ಯಾನಿಸುತ ಜಾನಕಿಯ ಬಲಗೊಂಬೆ ಭರದಿ 2 ನೇಮನಿಷ್ಠೆಯ ಶುದ್ಧ ಹೇಮಕಲಶದಿ ಮತ್ತೆ ಭಕ್ತಿರಸದ ಪನ್ನೀರ ತುಂಬಿ ನಾಮಸಂಕೀರ್ತನೆಯ ನಾರಿಕೇಳವ ಬೆರಸಿ ಶ್ರೀನಾರಿಗಭಿಷೇಕವ ಗೈವೆ 3 ಚಿತ್ತಶುದ್ಧಿಯ ಶುಭ್ರವಸ್ತ್ರದಿ ನೇವರಿಸಿ ಸತ್ವಗುಣದ ಪೀತಾಂಬರವನುಡಿಸಿ ಕಂಚುಕ ತೊಡಿಸಿ ಚಿತ್ತಜನ ಜನನಿಯರ ನೋಡಿ ನಲಿವೆ 4 ಅಂತಃಕರಣ ಶುದ್ಧಿಯ ಅರಿಸಿನವನು ಪೂಸಿ ಶಾಂತಗುಣದ ತಿಲಕ ತಿದ್ದಿ ನಂದಮಲ್ಲಿಗೆಯ ದಂಡೆಯನು ಮುಡಿಸುತ್ತ ಇಂದ್ರಿಯ ನಿಗ್ರಹದ ಗಂಧ ಹಚ್ಚುವೆನು 5 ಪಂಚಭೂತಾತ್ಮಕದ ಛತ್ರಿಯನು ಪಿಡಿದೆತ್ತಿ ಪಂಚನಾದಗಳೆಂಬ ವಾದ್ಯಗಳ ನುಡಿಸಿ ಪಂಚೇಂದ್ರಿಯಂಗಳೇ ಪಂಚಭಕ್ಷ್ಯಗಳಾಗಿನಿ ರ್ವಂಚನೆಯಿಂದಾರೋಗಿಸೆಂಬೆ 6 ರೇಚಕವೆಂಬ ವ್ಯಜನದಿಂ ಬೀಸಿ ತಾರಕ ಚಾಮರವ ಪಿಡಿದು ಕುಂಭಕವೆಂಬ ಪನ್ನೀರಿನಿಂ ತೋಯ್ಸಿ ತಾರಕ ಬ್ರಹ್ಮನರಸಿಯಂ ಸೇವಿಸುವೆ 7 ಭೋಗಭಾಗ್ಯವನೀವ ಭಾಗ್ಯಲಕ್ಷ್ಮಿಗೆ ವೈರಾಗ್ಯದ ತಟ್ಟೆಯನು ಪಿಡಿದು ಭಾವದೀವಿಗೆಯ ಕರ್ಪೂರದಾರಿತಯೆತ್ತಿ ಬಾಗಿವಂದಿಪೆ ತಾಯೆ ಕರುಣಿಸೆಂದು 8 ವರದಾತೆ ಭೂಜಾತೆ ಸುವಿನೀತೆ ಸುವ್ರತೆ ವರಶೇಷಗಿರಿವಾಸದಯಿತೆ ಮಹಿತೇ ಸೆರಗೊಡ್ಡಿ ಬೇಡುವೆನು ಕರಪಿಡಿದು ಸಲಹೆಂದು ನೆರೆನಂಬಿ ನೆನೆನೆನೆದು ನಲಿವೆನಿಂದು 9
--------------
ನಂಜನಗೂಡು ತಿರುಮಲಾಂಬಾ
ಬಾರಮ್ಮ ಇಂದಿರಮ್ಮ ಪ ನೀರೇಜ ಪದಯುಗಕೆ ಸಾರಿ ವಂದಿಪೆನಮ್ಮ ಹಾರಗಳನರ್ಪಿಸುವೆ ಸ್ವೀಕರಿಪುದಮ್ಮ ಅ.ಪ ಆವ ತೆರದಲಿ ನಿನ್ನನರ್ಚಿಸಿದರೂ ಕೊರೆಯೆ ಭಾವಶುದ್ಧಿಯಲಿ ಪೂಜೆಗೈವೆನಮ್ಮ ಓವರಿಗೆ ದಯಮಾಡು ದೇವಗಂಗಾ ಜಲದಿ ಪಾವನ ಪಾದಾಂಬುಜವ ತೊಳೆವೆನಮ್ಮಾ 1 ತವದಿವ್ಯ ಭೂಷಣವ ನವರತ್ನ ಹಾರಗಳ ಸುವಿಲಾಸದಿಂದಿತ್ತು ಮಣಿವೆನಮ್ಮ ಪವಳಪದುಮಾಸನ ವಿಶ್ರಾಂತಳಾಗಮ್ಮ ನವಪುಷ್ಪ ಕುಂಜಗಳ ಧರಿಪೆನಮ್ಮ 2 ಅಗರು ಚಂದನ ಧೂಪಮಿಗೆ ದಿವ್ಯ ಗಂಧಗಳ ಬಗೆಬಗೆಯ ದೀಪಗಳ ನೀಡುವೆನಮ್ಮಾ ಸೊಗಸಾದ ಭಕ್ಷ್ಯ ಭೋಜ್ಯಂಗಳನು ಅರ್ಪಿಸುವೆ ನಗುನಗುತ ಸ್ವೀಕರಿಸಿ ಪಾಲಿಸಮ್ಮ3 ದೇವಕನ್ಯೆಯರೆಲ್ಲ ದಿವ್ಯಗಾನವ ಪಾಡಿ ದೇವಿ ತವಕರುಣೆಯನು ಬೇಡುತಿಹರು ಶ್ರೀವನಿತೆ ನಾನೀವ ತಾಂಬೂಲವನು ಸವಿದು ಜೀವಕೋಟಿಗೆ ಸುಖವನೀವುದಮ್ಮಾ 4 ಪೊಡಮಡುವೆ ನಿನ್ನಡಿಗೆ ಕೊಡು ಭಕ್ತಿಭಾಗ್ಯವನು ಎಡೆಬಿಡದೆ ಹರಿಪಾದ ಸೇವೆಗೈದು ಕಡುಮುದದಿ ನಿನ್ನ ಸಂಕೀರ್ತನೆಯ ಪಾಡಿಸು ಬಡವರಾಧಾರಿ ಮಾಂಗಿರಿಯೊಡೆಯನ ರಾಣಿ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯಾವ ಲೋಕಕೆ ಎನ್ನ ಎಳತಂದೆ ಹರಿಯೇ ದೇವಕೀ ಕಂದ ಗೋಪಾಲ ನಾನರಿಯೇ ಪ ನಳಧರ್ಮನೃಪ ಹರಿಶ್ಚಂದ್ರಾದಿಗಳು ಜನಿಸಿ ಖಳರನ್ನು ದಂಡಿಸೇ ಶಿಷ್ಟರನು ಹರಿಯೇ ಸಲಹ ಸುಜನರಿಗೆಲ್ಲ ಮಾನವಂ ಕೊಟ್ಟು ತಾ ವಿಳೆಯ ಸತ್ಯದೊಳಾಳಿದಾ ರಾಜ್ಯವಲ್ಲಾ 1 ಹಿಂದೆ ದುರ್ಜನರನ್ನು ತರಿಯಲೋಸುಗ ನೀನು ಅಂದದಿಂದೊಂಬತ್ತು ಅವತಾರವೆತ್ತಿ ಬಂದು ಸುಜನರ ಪೊರೆದು ಧರ್ಮವನು ನೆಲೆಗೊಳಿಸಿ ಚಂದದಿಂ ರಕ್ಷಿಸಿದ ಲೋಕವಿದು ಅಲ್ಲಾ 2 ಮನ್ನಿಸದೆ ಧರ್ಮವನು ನಿತ್ಯಕರ್ಮವ ಬಿಟ್ಟು ಹೀನ ಪಥಗಳ ಪಿಡಿದು ಬಂಜೆಯನು ಆಸೀ ಚನ್ನಕೇಶವ ನಿಮ್ಮ ನಾಮ ಸಂಕೀರ್ತನೆಯ ದೈನ್ಯದಿಂ ಗೈಯದ ರಾಜ್ಯವಿದು ಹರಿಯೇ 3
--------------
ಕರ್ಕಿ ಕೇಶವದಾಸ
ವ್ಯರ್ಥ ಆಯು ಕಳೆಯಬ್ಯಾಡಿರೊ ಶ್ರೀಹರಿಯ ಸಂಕೀರ್ತನೆಯ ಮರೆಯಬ್ಯಾಡಿರೊಮೃತ್ಯು ಬಾರದಿರದು ಮುನ್ನೆ ಮನೋನೂರುವರ್ಷಕೆ ಪ.ಹಿಂಡುಹೀನ ಯೋನಿಮುಖದಲಿ ತಾಬಂದು ಬಂದು ಕುಕರ್ಮ ಸವೆಯದಾಯಿತುಕಂಡ ಕುಹಕರ ಕೂಡ ಕೊಂಡಮಾತನಾಡಿ ಯಮದಂಡ ತೆರಬ್ಯಾಡಿ ಕೋದಂಡಕರನ ಹೊಗಳಿರೊ 1ಬಾಲತ್ವವು ಆಟಕಾಯಿತು ಈ ಯೌವನವುಬಾಲೆಯರ ಬ್ಯಾಟಕಾಯಿತುಮ್ಯಾಲೆವಾರ್ಧಕ್ಯಕಂಗಬೀಳೆ ಸೊಪ್ಪಾಗಿ ಹೊಲಸಲದೀಗ ಎಚ್ಚರಿಕೆಯಲ್ಲಿ ಹರಿಯ ನೆನೆಯಿರೊ 2ಹಗಲು ಹಸಿವೆ ತೃಷೆಗೆ ಪೋಯಿತು ಯಾಮಿನಿಯುಮಿಗಲು ಮೀರಿ ಮಧು ಮುಸುಕಿತುಸುಗುಣನಾಗಿ ಭವದ ನಂಬಿಕೆಯನೀಗಿಪ್ರಸನ್ವೆಂಕಟನಗಪತಿಯ ಪಾದಪದ್ಮಯುಗಳವನೆÀ ಕೊಂಡಾಡಿರೊ 3
--------------
ಪ್ರಸನ್ನವೆಂಕಟದಾಸರು
ಸುಮ್ಮನೆ ಬರುವುದೆ ಮುಕ್ತಿ ಗುರುಧರ್ಮಭಿಕ್ಷವ ಬೇಡಿದವಗೆ ಸುಕೀರ್ತಿಮನದಲ್ಲಿ ದೃಢವಿರಬೇಕು ದುಷ್ಟಜನಸಂಸರ್ಗಗಳನು ಬಿಡಲಿಬೇಕುಕಾಮಕ್ರೋಧವ ಬಿಡಬೇಕು ಹರಿನಾಮ ಸಂಕೀರ್ತನೆಯನು ಮಾಡಬೇಕುವ್ಯಾಪಾರ ವರ್ಜಿಸಬೇಕು ಜ್ಞಾನದೀಪದ ಕಾಂತಿಯಲ್ಯೋಲಾಡಬೇಕು
--------------
ಗೋಪಾಲದಾಸರು
ಹರಿದಿನ ಇಂಥ ಹರಿದಿನ ಪ.ಹರಿದಿನದ ಮಹಿಮೆ ಹೊಗಳಲಗಾಧಪರಮಭಾಗವತರಾಚರಣೆಗಾಹ್ಲಾದÀದುರಿತದುಷ್ಕøತ ಪರ್ವತಕೆ ವಜ್ರವಾದಮರುತ ಸದ್ವ್ವ್ರತಕೆಲ್ಲ ಶಿರೋರತ್ನವಾದ ಅ.ಪ.ಭಕ್ತಿಗೆ ಮೊದಲು ವಿರಕ್ತಿ ಬೀಜವೆಂಬಸಕಲ ತಪದೊಳೆಲ್ಲ ಮೇಲೆನಿಸಿಕೊಂಬಮಖಕೋಟಿಗಧಿಕ ಫಲಸ್ಥಿರ ಸ್ತಂಭಮುಕ್ತಿ ಸೋಪಾನ ನಿಧಾನತ್ವವೆಂಬ 1ತ್ವಕ್ ಚರ್ಮ ಅಸ್ತಿ ಮಜ್ಜ ಮಾಂಸರುಧಿರಯುಕ್ತ ಸಪ್ತ ಧಾತುಗಳಿಹ ಶರೀರನಖಕೇಶ ಕಫ ಸ್ವೇದ ಮಲ ಮೂತ್ರಾಗರ ಈನಿಖಿಳಪಾವನ ಮಾಡುವ ನಿರಾಹಾರ2ವರವಿಪ್ರಕ್ಷತ್ರಿಯ ವೈಶ್ಯ ಶೂದ್ರ ಜನರುತರಳಯೌವನ ವೃದ್ಧ ನಾರಿಯರುಕಿರಾತಪುಲತ್ಸ್ಯಾಂದ್ರ ಹೂಣ ಜಾತಿಯವರುಹರಿವ್ರತ ಮಾತ್ರದಿ ಮುಕ್ತಿಯೈದುವರು 3ದ್ವಿಜಗೋವಧ ನೃಪರನು ಕೊಂದ ಪಾಪನಿಜಗುರು ಸತಿಯರ ಸಂಗದ ಪಾಪಅಜಲಪಾನದ ದಿನದುಂಡ ಮಹಾಪಾಪನಿಜನಾಶ ಮೋಕ್ಷ ಪ್ರಾಪ್ತಿಯು ಸತ್ಯಾಲಾಪ 4ಯಾಮಿನಿಯಲಿ ಅನಿಮಿಷದ ಜಾಗರವುಶ್ರೀ ಮದ್ಭಾಗವತ ಶ್ರವಣ ಗೀತಾಪಠಣಪ್ರೇಮವಾರಿಧಿಲಿ ಮುಳುಗಿ ಸಂಕೀರ್ತನೆಯುಧಾಮತ್ರಯದ ಸುಖಕಿದೇ ಕಾರಣವು 5ಅರ್ಧಕೋಟಿ ತೀರ್ಥಸ್ನಾನವೆಲ್ಲ ಅಜಸ್ರಪ್ರಯಾಗ ಕಾಶಿವಾಸವೆಲ್ಲ ಸಹಸ್ರ ಕೋಟಿ ಭೂಪ್ರದಕ್ಷಿಣೆಯೆಲ್ಲಸುಶ್ರದ್ಧೆ ಸಹ ಜಾಗರಕೆ ಸರಿಯಲ್ಲ 6ಪಂಚಮಹಾ ಪಾಪ ಪ್ರಪಾಪವವಗೆವಂಚಕ ಪಿಶುನ ಜನರ ಪಾಪವವಗೆಮಿಂಚುವ ಕ್ಷೇತ್ರವಳಿ ಪಾಪವವಗೆಪಂಚಕವ್ರತ ಪೆತ್ತ ವ್ರತ ಉಲ್ಲಂಘಿಪಗೆ 7ಸರ್ಪಶಯನಗೆ ನೀರಾಜನವೆತ್ತಿ ನೋಡಿಉಪವಾಸದಿ ಭಗವಜ್ಜನ ನೃತ್ಯವಾಡಿಚಪ್ಪಾಳಿಕ್ಕುತ ದಂಡಿಗೆ ಮುಟ್ಟಿ ಪಾಡಿತಪ್ಪೆ ನಾಯಿ ನರಕ ಫಲ ಕೈಗೂಡಿ 8ಶ್ರುತಿಪಂಚರಾತ್ರಾಗಮವು ಸಾರುತಿವೆಯತಿ ಮಧ್ವರಾಯರುಕುತಿ ಪೇಳುತಿವೆಕ್ರತುಪ್ರಸನ್ವೆಂಕಟ ಕೃಷ್ಣ ಮತವೆಕ್ಷಿತಿಪತಿ ಸುರರತಿಶಯದ ಸದ್ವ್ವ್ರತವೆ 9
--------------
ಪ್ರಸನ್ನವೆಂಕಟದಾಸರು
ಹೇಳಿದ ಯಮಧರ್ಮ ತನ್ನಾಳಿಗೆ ಪ.ಹೇಳಿದ ಯಮ ತನ್ನೂಳಿಗದವರಿಗೆಖೂಳದುರಾತ್ಮರಾಗಿ ಬಾಳುವರನು ತರ1ಹರಿಸಂಕೀರ್ತನೆಯನರನಾರಿಯರು ಆದರದಲಿ ಮಾಡಿದವರ ನಿಂದಿಪನ ತರ 2ಹರಿದಾಸರಿಗೆ ಉಣಕರಿಯದೆ ಜನ್ಮಾಂತಒರಟುಮಾತಿನ ಲುಬ್ಧನರನ ನಿಲ್ಲದೆ ತರ 3ಹರಿಕಥಾಮೃತ ಉಪಚಾರಕಾಗಿ ಕೇಳುವಪರನಾರೇರಾಳುವ ದುರುಳನಕಟ್ಟಿತರ4ಗುರುಹಿರಿಯರೊಳು ನೀಚೋತ್ತರವನು ಕೊಡುವಮರುಳಾಗಿ ಮತಿಯ ಸತಿಯರಿಗಿತ್ತವನ ತರ 5ಅಂಬುಜಾಕ್ಷನ ಪೂಜೆ ಸಂಭ್ರಮದಿ ಮಾಡದೆರಂಭೆಯೊಡನಾಡುವ ಡಂಭಕನ ಹಿಡಿ ತರ 6ಒಳ್ಳಿದರ್ಹಳಿದು ತಾ ಬಲ್ಲವನೆನುವಚೆಲ್ವ ಪ್ರಸನ್ವೆಂಕಟ ವಲ್ಲಭನ ವೈರಿಯ ತರ 7
--------------
ಪ್ರಸನ್ನವೆಂಕಟದಾಸರು