ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದು ಕಾಂಬೆನು ಪಾಂಡುರಂಗ ಮೂರುತಿಯಾ ಇಂದು ಭಾಗನಿವಾಸ ನರನ ಸಾರಥಿಯ ಪ ಚಾರು ಚರಣಾಂಗುಲಿ ನಖರ ತರುಣೀಂದುಚ್ಛವಿ ತಿರಸ್ಕರಿಸುವ ಪ್ರಖರ ಕಿರುಗೆಜ್ಜೆ ಕಡಗ ನೂಪುರ ಪೆಂಡೆ ಶಫರ ತೆರಜಾನು ಜಂಘೆ ಭಾಸ್ಕರ ರತ್ನ ಮುಕುರ1 ರಂಭಾ ಪೋಲುವ ಊರು ಪೊಂಬಣ್ಣಾಂಬರವ ಕುಂಭೀ ಮಸ್ತಕದೊಲ್ ನಿತಂಬದಿ ಪೊಳೆವ ಕಂಬು ಮೇಖಳಕಂಜ ಗಂಭೀರ ನಾಭೀ ವಿಧಿ ಶಂಭು ಪೂಜಿತನ 2 ಲವಕುಕ್ಷಿತ್ರವಳಿ ಬಾರ್ಗವಿ ವಕ್ಷ ಉರವು ಕೌಸ್ತುಭ ವೈಜಯಂತಿಯ ಸುವಿಶಾಲ ವಕ್ಷದೊಳ್ ವಿವಿಧ ಹಾರಗಳು ನವನೀತ ಚೋರ ಶ್ರೀ ಪವಮಾನಾರ್ಚಿತನ 3 ಪದಕ ಸರಿಗೆಯ ಜಾಂಬೂನದ ಕಂಬುಕಂಠ ರದನೀಕರ ಬಾಹು ಚದುರ ಭುಜಕೀರ್ತಿ ಬದರ ಸಂಕಾಶಾ ಅಂಗದ ರತ್ನ ಕಟಕಾ ಪದಮಾರುಣ ಕರಯುಗ್ಮ ಕಟಿಯಲ್ಲಿಟ್ಟವನಾ4 ವಿಧುಬಿಂಬೋಪಮ ಚಲ್ವವದನ ಕೆಂದುಟಿಯಾ ಬಿದುರಾಭಾದಶನಾಲಿಂಗದನೊಳ್ ಕಿರುನಗೆಯಾ ಕದಪು ಕನ್ನಡಿ ನಾಸಾ ತುದಿ ಚಂಪಕ ತೆನೆಯಾ ಉದಕೇಜಾಯತ ನೇತ್ರಯದುವಂಶೋದ್ಭವನಾ 5 ಕುಂಡಲ ಕರ್ಣ ಸುಲಲಿತ ಭ್ರೂಯುಗಳ ಪೊಳೆವ ಬಾಲ ಶಶಾಂಕ ತಿಲಕಾಂಕಿತ ಫಾಲ ಅಳಿಬಾಲವೆನಿಪ ಕುಂತಳ ರತ್ನ ಚಕಿತ ಕಲಧೌತ ಮಕುಟ ದಿಗ್ವಲಯ ಬೆಳಗುವನ 6 ಮಾನವ ಹರಿಯಾ ವಟುಭಾರ್ಗವ ಕಾಕುಸ್ಥ ಶಠ ಕಂಸದ್ವಿಷನ ನಿಟೆಲಾಂಬಕ ಸಹಾಯ ಖಳಕಟಕಾರಿ ಭೀಮಾ ತಟವಾಸ ಜಗನ್ನಾಥವಿಠಲ ಮೂರುತಿಯ 7
--------------
ಜಗನ್ನಾಥದಾಸರು
ಪಂಕಜ ಪತಿ | ಪಂಕಜ ಸಖ ಸಂಕಾಶಾನೇಕಾ | ಸಂಕಟಳಿದು ನಿಃಶಂಕನ ಮಾಡೊ | ಅಂಕೆಯವನೆಂದು || ಪ ಬಂದೆ ಎದುರಿಲಿ ನಿಂದೆ ಸಿರಬಾಗಿ | ಒಂದೆ ವಂದನೆಯೆಂದೆ ಲೋಕದ ತಂದೆ ಮನಸಿಗೆ | ತಂದೆ ನಿನಗ ಇಂದೆ ಅಂದದನು | ಹಿಂದೆ ಯೆಸಗಿದ ದ್ವಂದ್ವ ಪಾಪಕೆ ಒಂದೆ ನಿನ್ನಂಘ್ರಿ | ಎಂದೆಗೆಂದಿಗೆ ಮುಂದೆ ಜನನಗಳು 1 ನೋಡು ಎನ್ನ ಕೂಡಾಡು ದಯವನ್ನು | ಮಾಡು ಮುದದಿಂದಲಾಡು ಮಾತನು | ನೀಡು ಕರುಣವ | ಹೋಡುಗಾರರು ಬೀಡಿನೊಳಗಿದ್ದು | ಕಾಡುವದು ನಾನಾಡಲೇನು | ಈಡು ನಿನಗೆಲ್ಲಿ ನಾಡೊಳು ಕಾಣೆ ಮೂಡಲಾದ್ರಿ ನಿಲಯಾ 2 ಸಾರಿದೆನೊ ಮನಸಾರ ನಿನ್ನಂಘ್ರಿ ಸಾರಾ| ಸಾರವೆಂಬದಾಸಾರವನು ನೂಕಿ | ಸಾರ ಹೃದಯರ ಸಾಲೆಲಿರಸೆನ್ನ | ಕಂಸಾರಿ ಪ್ರತಿದಿನ | ಸಾರಥಿಯಾಗೊ ಸಾರಿಸಾರಿಗೆ | ಸಾರಬೋಕ್ತಾ ವಿಜಯವಿಠ್ಠಲ ಕೆಲಸಾರದೆ ಸಾರಲಿರೊ 3
--------------
ವಿಜಯದಾಸ
ಬಿನ್ನಪವ ಕೇಳು ಜೀಯಾ ಬನ್ನಬಡಿಸುವ ಮಾಯಾ ಬೆನ್ನು ಬೀಳದಂತೆ ಮಾಡು ಎನ್ನ ಕೂಡಾಡು ಪ ಹತ್ತದ ಜನಕೆ ನೀನು ಹತ್ತಿಲಿ ಇದ್ದರೆ ಏನು ಉತ್ತರ ಲಾಲಿಸದಿಪ್ಪ ಉತ್ತಮ ಶ್ಲೋಕಾ ತತ್ವ ಬಲ್ಲವಂಗೆ ದೂರತ್ತಲಿದ್ದರೇನು ಅವನ ಪತ್ತಿಗೆ ಬಂದೊದಗುವ ಚಿತ್ತಜನಯ್ಯಾ 1 ಇಂದೆ ಕೈವಲ್ಯವ ಕೊಡುವೆ ಒಂದು ಕ್ಷಣ ಮಾಯಿಗಳ ಮಂದಿರದಲ್ಲಿ ಜನಿಸಿ ಎಂದು ನುಡಿದಡೆ ಮಂದರಧರನೆ ಕೇಳು ಎಂದೆಂದಿಗೆ ಎನ್ನ ನರಕ ಬಂಧನದಲ್ಲಿಡು ಅಲ್ಲಿ ಪೊಂದುವರಾರೊ 2 ಸೂಕರ ಗಾರ್ಧಭ ನಾನಾ ಕೆಟ್ಟ ಜಾತಿಯವರ ಯೋನಿಯೊಳು ಕಟ್ಟಿಹಾಕಿ ಹೀನಾಯ ಉಣಸೀ ಅನಂತ ಕಲ್ಪಕ್ಕೆ ಪವಮಾನ ಮತ ಪೊಂದಿಸಿ ನಿರ್ವಾಣವೀವೆನೆಂದರಾಗೆ ನಾನಾದಿ ಬಯಿಪೆ 3 ಗುರುಪ್ರಸಾದದಿಂದಲಿ ಪರಮ ಸದ್ಗತಿ ಎನ ಗರಿದಲ್ಲ್ಯಾವಾಗಾದರು ಸ್ಥಿರವೆ ಸಿದ್ಧ ನಿರಯ ದುರಾತ್ಮಗಿಲ್ಲ ಕರವ ಮುಗಿದು ಒಂದು ವರ ಬೇಡುವೆ 4 ಭಾಗವತರ ಸಹವಾಸ ಭಾಗವತರ ಕಥಾಗುಣ ಭಾಗ ಗುಣಿಸುವ ಮತಿ ಭಾಗೀರಥಿ ಯಾತ್ರೆ ಭಾಗ್ಯವೆ ಪಾಲಿಸು ದುಷ್ಟ ಭಾಗಾದಿಯರೋಡಿಸಿ ಕಡೆ ಭಾಗಕ್ಕೆ ಎನ್ನೆಡಬಲ ಭಾಗದಲಿ ಸುಳಿಯೊ 5 ಕಾಣಿಕಾಣೆ ಙÁ್ಞನವಿಲ್ಲ ತುತಿಪುದಕ್ಕೆ ಧ್ಯಾನವÀರಿಯೆ ನಿನ್ನನೆ ನಿದಾನಿಸಲಿಕ್ಕೆ ನಾನಾಪರಾಧವ ಮಾಡಿದ ಮಾನವನೋ ದೀನಬಂಧೊ ನೀನೊಲಿದು ಎನ್ನ ಮನಕೆ ಆನಂದ ತೋರೋ 6 ರಜತಪೀಠ ಪುರನಿವಾಸಾ ರಜನಿಪತಿ ಸಂಕಾಶಾ ರಜನಿಚರ ವಿನಾಶಾ ಸುಜನಮಾನಸಹಂಸ ರಜದೂರ ಮಂದಹಾಸಾ ವಿಜಯವಿಠ್ಠಲ ಶ್ರೀಶಾ ಭಜಿಪೆ ಲೇಶಾ 7
--------------
ವಿಜಯದಾಸ
ವಸುಧೀಂದ್ರ ತೀರ್ಥರು ಶ್ರೀ ವಸುಧೀಂದ್ರ ರಾಯಾ | ಪಾವನಕಾಯಾ ಕೋವಿದ ಜನ ಪ್ರೀಯಾ ಪ ಭೂವಲಯದೊಳತಿ | ತೀವಿದ ಅಘವನ ದಾವಕ ನತಜನ ದೇವತರು ಎನಿಪ ಅ ಜಿತಕ್ರೋಧ ಜಯಶೀಲಾ | ದುವ್ರ್ಯಸನ ಪ ವಜ್ರ ಹರಿಲೋಲಾ ಮಾರ್ಗಣ | ಮಥನ ಮೌನೀಶ ವಾಂ ಛಿತಫಲವಿತ್ತು ಸಂ | ತತ ಪಾಲಿಸುವುದೆಮ್ಮ ಪತಿತ ಪಾವನ ವಿತತ ಕರುಣಾ ಮೃತರತಾನತ ಹಿತಕರಾಗಮ ತತಿ ಪಯೋಜಾರ್ಕ ಅತಿಮುದಾ1 ಭೂದೇವಾನುತ ಮಹಿಮಾ |ಶಾತವಾನು ಭೀಮ ವೇದಪೂಜಿತರಾಮಾ ಪಾದ | ಸಾದರದಲಿ ನಿತ್ಯಾ ರಾಧಿಸುತಿಹ ಸುವಿ | ನೋದಚರಿತ ಗುರು ಮೋದತೀರ್ಥ ಮತಾಬ್ಧಿ ಸೋಮ ಕು ವಾದಿ ಮತ ಮತ್ತೇಭಕುಂಭಧ ರಾಧರಾತಟವಾನುಗರೊಳೆ ನ್ನಾದರಿಸುವುದಖಿಳಗುಣಾಂಬುಧೇ 2 ಸರಸಭಾಷೋಹ್ಲಾಸಾ | ವರ್ಚಿತ ದೋಷಾ ಹರಿನಿಭಸಂಕಾಶಾ ಶರೀರಾ ಸಜ್ಜನಗೇಯಾ | ಗುರುವಾದೀಂದ್ರಕರ ಸರಸೀರುಹ ಸಂಜಾತ | ನಿರುಪಮ ನಿರ್ಭೀತಾ ಸುರುಚಿರಹಿಮ ಕಿರಣ ತೇಜ ಸ್ಫುರುಣ ಶ್ರೀ ಜಗನ್ನಾಥವಿಠಲನ ಚರಣ ಪಂಕೇರುಹ ಯುಗಳ ಮಧು ಕರದುರಿತಘನ ಮಾರುತಾ 3
--------------
ಜಗನ್ನಾಥದಾಸರು