ತೊಗಿರೆ ರಾಯರ ತೂಗಿರೆ ಗುರುಗಳ
ತೂಗಿರೆ ಯತಿಕುಲ ತಿಲಕರ ಪ
ತೂಗಿರೆ ಯೋಗೀಂದ್ರ ಕರಕಮಲ ಪೂಜ್ಯರ
ತೂಗಿರೆ ಗುರುರಾಘವೇಂದ್ರರ ಅ.ಪ
ಕುಂದಣಮಯವಾದ ಛಂದ ತೊಟ್ಟಿಲೊಳು
ನಂದದಿ ಮಲಿಗ್ಯಾರ ತೂಗಿರೆ
ನಂದನಂದನ ಗೋವಿಂದ ಮುಕುಂದನÀ
ನಂದದಿ ಭಜಿಪರ ತೂಗಿರೆ 1
ಯೋಗನಿದ್ರೆಯನ್ನು ಬೇಗನೆಮಾಡುವ
ಯೋಗೀಶ ವಂದ್ಯರ ತೂಗಿರೆ
ಭೋಗಿಶಯನನಪಾದ ಯೋಗದಿ ಭಜಿಪರ
ಭಾಗವತರನ ತೂಗಿರೆ 2
ನೇಮದಿ ತಮ್ಮನು ಕಾಮಿಪಜನರಿಗೆ
ಕಾಮಿತ ಕೊಡುವರ ತೂಗಿರೆ
ಪ್ರೇಮದಿ ನಿಜಜನರ ಆಮಯವನಕುಲ -
ಧೂಮಕೇತೆನಿಪರ ತೂಗಿರೆ 3
ಅದ್ವೈತಮತದ ವಿಧ್ವಂಸನ ನಿಜ ಗುರು
ಶುದ್ಧ ಸಂಕಲ್ಪದಿ ಬದ್ಧ ನಿಜಭಕ್ತರ
ಉದ್ಧಾರಮಾಳ್ಪರ ತೂಗಿರೆ 4
ಭವ ತ್ಯಜನೆ ಮಾಡಿಸಿ ಅವರ
ನಿಜಗತಿ ಇಪ್ಪರ ತೂಗಿರೆ
ನಿಜಗುರು ಜಗನ್ನಾಥವಿಠಲನ್ನ ಪದಕಂಜ
ಭಜನೆಯ ಮಾಳ್ಪರ ತೂಗಿರೆ 5