ಪೇಳಲೇನು ವಿಧಿಯ ಲೀಲೆಯ ಮಹಿಮೆ ಪ
ವ್ಯಾಳಶಯನನ ಸಂಕಲ್ಪದಂತಿಹುದು ಅ.ಪ.
ಮೂರ್ತಿ ನೋಡುವ ಕಂಗಳು
ಅಂಗನೆಯರ ರೂಪ ನೋಡಲೆಳಸಿದವು 1
ಶ್ರೀ ರಮಣನ ಕಥೆ ಕೇಳುವ ಕರ್ಣಗಳು
ವಾರನಾರಿಯರ ವಾರ್ತೆಗೆ ಸೋತವು 2
ಮಂಧರಧರನ ನಿರ್ಮಾಲ್ಯವನೊಲ್ಲದೆ
ಸುಂದರಿಯರ ಮೈ ಗಂಧ ಬಯಸಿತು ಘ್ರಾಣ 3
ಹರಿಯ ಪ್ರಸಾದವು ಭುಜಿಸದೆ ಜಿಹ್ವೆಯು
ಪರಮ ನಿಷಿದ್ಧ ಪಾನ ಭೋಜನ ಬಯಸಿತು 4
ರಂಗನ ಭಕ್ತರ ಸಂಗವ ಬಿಟ್ಟು ಸ್ಪರ್ಶ
ಅಂಗನೆಯ ದೇಹಾಲಿಂಗನ ಬಯಸಿತು 5
ಶ್ರೀನಿಕೇತನ ನಾಮ ನುಡಿಯುವ ನಾಲಿಗೆ
ದೀನ ಕಾಮಾತುರ ನುಡಿಯಲಿ ನಲಿಯಿತು 6
ಪಾದ ಸ್ಮರಣೆಯ ಬಿಟ್ಟಾ ಮನ
ತರುಣಿಯರು ಸದಾ ನೆನೆಸಿತು ಅಕಟಾ 7