ತಾತ್ವಿಕ ಹಿನ್ನೆಲೆ
ಅಗಣಿತಾಗಣಿತ ಮಹಿಮ ಜಗದೊಳು ನಿಮ್ಮ
ಬಗೆ ತಿಳಿಯುವರಾರಮಮ ಪ
ಮಗನ ಮಗನಿಗೆ ಒಲಿದು ಮಗಳಧಾರೆಯನೆರದಿ
ಮಗಳಮಗನ್ವೈರಿಯ ನಿಗಯಿಟ್ಟು ಸಲಹಿದಿ ಅ.ಪ
ಓಂಕಾರದಾಚೆಗಿರ್ದ ಅಮಲರೂಪ
ಓಂಕಾರದೊಳು ನೆಲೆಸಿದಿ
ಅಂಕುರಿಸಕ್ಷರ ತ್ರಯಲಂಕಾರದಿಂ ಸೃಷ್ಟಿ
ಸಂಕಲ್ಪಗೈದು ನಿಷ್ಕಲಂಕನೆಂದೆನಿಸಿದಿ 1
ಸೃಷ್ಟಿ ಉತ್ಪತ್ತಿಗೈದಿ ಉದರದಿ
ಇಟ್ಟು ರಕ್ಷಕನೆಂದೆನಿಸಿದಿ
ಶಿಕ್ಷಕೆನಿಸಿ ಸರ್ವಸಾಕ್ಷಿನೀನೆಯಾಗಿ
ಮೋಕ್ಷ ನೀಡುವ ಮದಧ್ಯಕ್ಷನೆಂದೆನಿಸಿದಿ 2
ಮೇದಿನಿಗೆ ಪತಿಯೆನಿಸಿದಿ ದಾಸರ ಪ್ರಿಯ
ಮೇದಿನಿಸುತೆ ಮದುವ್ಯಾದಿ
ವೇದಸಮ್ಮತಗೈದಿ ಸಾಧುಜನಕಹುದಾದಿ
ಆದಿಶ್ರೀರಾಮ ಮಮ ಬೌದ್ಧದೇವನಾದಿ 3