ಗೋಪಿನಾಥ ವಿಠಲ | ನೀ ಪಾಲಿಸಿವಳಾ ಪ
ಶ್ರೀಪತಿಯೆ ಕರುಣಾಳು | ಕೈ ಪಿಡಿದು ಸಲಹೊ ಅ.ಪ.
ನಿತ್ಯ ಮಂಗಳನೆಯುಕ್ತಿಯಲಿ ನಿನ್ನಿಂದ | ಸ್ವಪ್ನ ಸೂಚಿಸಿದಂತೆಇತ್ತಿಹೆನು ಅಂಕಿತವ | ಸಾರ್ಥಕವ ಪಡಿಸೊ 1
ಶೃಂಗಾರ ಮೂರುತಿಯೆ | ಮಂಗಳಾಂಗನೆ ದೇವಹೆಂಗಳೀಗೆ ಸುಜ್ಞಾನ | ಭಕ್ತಿಯನೆ ಇತ್ತೂಅಂಗನಾಮಣಿಯಂತೆ | ಸಿಂಗರಿಸುತಿವಳನ್ನುಭಂಗಗೈ ಅಜ್ಞಾನ | ಭ್ರಾಂತಿ ಜ್ಞಾನವನು 2
ಭಾಗವತರೊಡನಾಟ | ಯೋಗಕರುಣಿಸು ದೇವನಾಗಾರಿವಾಹನನೆ | ಯೋಗಿಜನವಂದ್ಯಾಆಗುಹೋಗುಗಳೆಲ್ಲ | ನೀನಿಚ್ಛೆ ಸಂಕಲ್ಪಆಗು ಮಾಡೈ ದೇವ | ಮನದಭೀಷ್ಟಗಳಾ 3
ತತ್ವ ಪತಿಗಳಿಗೆಲ್ಲ | ಮರುತನೆ ಅಧಿಕೆಂಬತತ್ವವನೆ ತಿಳಿಸುತ್ತಾ | ಕಾಪಾಡೊ ಇವಳಾಪ್ರತ್ಯಹತ್ ತವನಾಮ | ಸಂಸ್ತುತಿಯ ಕರುಣಿಸುತಉತ್ತಾರಿಸೋ ಭವವನ್ನು | ಪ್ರತ್ಯಗಾತುಮನೆ 4
ಗೋವುಗಳ ಪರಿಪಾಲ | ಗೋವರ್ದನೋದ್ದರನೆಗೋಪಿಜನಪ್ರಿಯ | ಗೋಪಾಲ ಬಾಲಾಗಾವಲ್ಗಣೀವರದ | ಬಿನ್ನಪವ ಸಲಿಸಯ್ಯಕಾವುದಾನತರ ಗುರು | ಗೋವಿಂದ ವಿಠಲಾ 5