ಪಾಲಿಸೈ ತಿಮ್ಮಪ್ಪ ಪರಮ ಪಾವನನಪ್ಪ
ಪ್ರಾಣದಾಸೆಗಳಿಂದ ಕಾಣ ಬರುವೆವೆಂದ
ಆಣೆ ಭಾಷೆಯನೊಂದ ಮಾಣೆನೊ ಗೋವಿಂದ
ಕಾಣಿಕೆಯ ಕರದಿಂದ ತ್ರಾಣ ಮೀರಿಯೆ ಬಂದ
ಜಾಣರಾಯನೆ ಚಂದಗಾಣಿಸೊ ಶುಭದಿಂದ 1
ಸ್ವಾಮಿ ನೀನೇ ಹೊಣೆ ಭೂಮಿಯೊಳು ರಕ್ಷಣೆ
ಕಾಮಿತ ಸೈರಣೆ ನಾಮಕಲ್ಪನೆಯು
ಪ್ರೇಮವಾಗಿಹ (ಹಣೆ)1 ನಾಮದ ಮನ್ನಣೆ
ಸೌಮನಸ್ಯದ ಮಾಣೆ ತಾಮಸಕ್ಕಿಡಿಗಾಣೆ 2
ಸೇವಕ ಸಂಕಲ್ಪ ಕಾವನಾಯಕನಿಪ್ಪ
ಠಾವಿಗಾಗಿಯೇ ಪೋಪ ಭಾವದಿಯಿರುತಿಪ್ಪ
ಜೀವನ ತಾನಪ್ಪ ದೇವ ಕಾಣು ಈ ಕಪ್ಪ
ಈವೆನೆನುತ ಬಪ್ಪ ಭೂವರಾಹತಿಮ್ಮಪ್ಪ 3