ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

211ಶೃಂಗಾರವಾಗಿದೆ ಸಿರಿರಂಗನ ಮಂಚಅಂಗನೆಮಹಲಕುಮಿಯರಸ ಮಲಗುವ ಮಂಚಪಬಡಿಗ ಮುಟ್ಟದ ಮಂಚ | ಮಡುವಿನೊಳಿಹ ಮಂಚ |ಮೃಡನ ತೋಳಲಿ ನೆಲಸಿಹ ಮಂಚ ||ಹೆಡೆಯುಳ್ಳ ಹೊಸಮಂಚ ಪೊಡವಿ ಹೊತ್ತಿಹ ಮಂಚ |ಕಡಲ ಶಯನ ಶ್ರೀ ರಂಗನ ಮಂಚ 1ಕಣ್ಣು-ಮೂಗಿನ ಮಂಚ ಬೆನ್ನು ಬಾಗಿದ ಮಂಚ |ಹುಣ್ಣಿಮೆಯ ಚಂದ್ರಮನ ಅಡ್ಡಗಟ್ಟುವ ಮಂಚ ||ಬಣ್ಣ ಬಿಳುಪಿನ ಮಂಚ ಹೊನ್ನು ಕಾದಿಹ ಮಂಚ |ಚೆನ್ನಿಗ ಪರೀಕ್ಷೀತನ ಪ್ರಾಣವಕೊಂಡಮಂಚ2ಕಾಲಿಲ್ಲದೋಡುವ ಮಂಚ | ಗಾಳಿ ನುಂಗುವ ಮಂಚ |ನಾಲಗೆಯೆರಡುಳ್ಳ ವಿಷದ ಮಂಚ ||ಏಳು ಹೆಡೆಯ ಮಂಚ | ಮೂಲೋಕದೊಡೆಯನ ಮಂಚ |ಕಾಳಗದಲಿ ಕಿರೀಟಿಯ ಮುಕುಟಕೊಂಡಮಂಚ3ಹಕ್ಕಿಗೆ ಹಗೆಯಾದ ಮಂಚ | ರೊಕ್ಕ ಮುಟ್ಟದ ಮಂಚ |ರಕ್ಕಸರೆದೆದಲ್ಲಣನ ಮಂಚ ||ಸೊಕ್ಕು ಪಿಡಿದ ಮಂಚ | ಘಕ್ಕನೆ ಪೋಗುವ ಮಂಚ |ಲಕ್ಕುಮಿ ರಮಣ ಶ್ರೀ ಹರಿಯ ಮಂಚ 4ಅಂಕುಡೊಂಕಿನ ಮಂಚ | ಅಕಲಂಕ ಮಹಿಮ ಮಂಚ |ಸಂಕರುಕ್ಷಣನೆಂಬ ಸುಖದ ಮಂಚ |ಶಂಕರನ ಕೊರಳಿಗೆ ಪದಕವಾಗಿಹ ಮಂಚ |ವೆಂಕಟಪುರಂದರವಿಠಲ ರಾಯನ ಮಂಚ5
--------------
ಪುರಂದರದಾಸರು