ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಮಕೋಟಿ ಸುಂದರಾ | ತಿರುಪತಿಯಸ್ವಾಮಿ ತೀರ್ಥಮಂದಿರಾ ಪ ಕಾಮಜನಕ ಭಕ್ತಪ್ರೇಮಿ ಭವಾಟವಿಧೂಮಕೇತು ಹೃತ್ | ಧಾಮದಿ ನೆಲಿಸೋ ಅ.ಪ. ವೃಷಭಾಚಲಾ | ಸನ್ನಿಲಯನೆವೃಷಭಾ - ಬಲಾ ||ಒಸೆದು ಪರಿಕಿಸುತ || ಅಸುರನ ಸವರುತಅಸಮಗಿರಿಗೆ ನೀ | ಅಸುರನ ಪೆಸರಿತ್ತೆ 1 ಭಂಜನ ಶರದಿಜೆಕಂಜಜಾಕ್ಷಿ ಪ್ರಿಯ | ಅಂಜನಿವರದಾ 2 ಶೇಷಾ _ ಭೂಧರಾ | ಮನಸಿನ ಬಹುಕ್ಲೇಶಾ _ ಅಪಹರ ||ಶೇಷದೇವ ಮದ | ಲೇಸು ಹರಿಸಿ ಅವನಾಶೆ ಸಲಿಸಿ ಹರಿ | ಶೇಷಾಚಲನಾದೇ 3 ವೆಂಕಟಾಚಲಾ | ಮಾಧವನಾಸಂಕಟಾಗಳಾ ||ಅಂಕುರಿಸದೆ ನಿ | ಷ್ಪಂಕನೆಂದೆನಿಸಿಕಿಂಕರ ತನಯಳ | ಕಂಕಣ ಕಟ್ಟಿದೆ 4 ಶ್ರೀವರ - ಭೂವರಾ | ಪೊರೆಯುವೆ ನೀಜೀವರಾ - ಅಂತರಾ ||ಜೀವನಾಮಕನಾಗಿ | ಜೀವ ಭಿನ್ನ ಹರಿಕೈವಲ್ಯದ ಗುರು | ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಪಾಲಿಸೆನ್ನ ಪಾರ್ವತೀಶ ಫಾಲಲೋಚನ ಲಾಲಿಸೆನ್ನ ನುತಿಯ ದೇವ ಕಾಲಕಂಧರ ಪ ಪುಲ್ಲನಯನ ಚಲ್ವವದನ ಮಲ್ಲಿಕಾರ್ಚಿತ ಬಿಲ್ವ ಪಲ್ಲವಾದಿಪ್ರಿಯನೆ ಶೈಲಜಾಪತೆ 1 ವಿನುತ ಪಂಕಜಪ್ರಿಯ ಸಂಕಟಾದ್ರಿ ದೇವರಾಜ ಲೋಕಪಾಲಕ 2 ಪಾಹಿ ಪಾಹಿ ಕಾಲಕಾಲ ಮೋಹನಾಶಕ ಸ್ನೇಹದಿಂದಲೆನ್ನ ಬಿಡದೆ ವಾಮದೇವನೆ 3 ಧಾನವಾಂತಕಾದಿ ಹೃದಯ ಜೀವ ರೂಪನೆ ಕಮಲ ಭಾನುರೂಪನೆ 4
--------------
ಬೇಟೆರಾಯ ದೀಕ್ಷಿತರು
ಬಾರದ್ಯಾಕೊ ಕೃಪಾಧರ ದೇವ ನಿನಗೆನ್ನೊಳ್ಕರುಣಾ ಪ. ಸರಸಿಯೊಳಂದು ಬೆದರಿದ ಕರಿರಾಜನನು ಪೊರೆದ ಬಿರುದ ನೀ ಮರೆವುದು ನೀತಿಯೇನೊ ವರದ 1 ತಾಳಲಾರದಂಥ ವೇದನೆ ಇನ್ನು ಪೇಳಲೇನು ಕಂಸಸೂದನ ಇಳೆಯ ಮ್ಯಾಲೇಳಲಾರದಂತಾಯ್ತೆನ್ನ ಹದನ2 ಸಂಕಟಾಬ್ಧಿ ಪರಿಶೋಷಣಾ ಶ್ರೀ ವೆಂಕಟೇಶ ಚಕ್ರಭೂಷಣ ಕಿಂಕರರಾತಂಕವನ್ನು ದೂರಿಸುತಿಹದಯ್ಯ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಳಂ ಶ್ರೀರಾಮಚಂದ್ರ ಭಂಗಿತಾಸುರೇಂದ್ರನೆ ವೀರ ಪ ರಾಜಕಾಂತಿ ಕೋಮಲಾಸ್ಯ ರಾಜರಾಜ ಪೂಜಿತ ರಾಜವಂಶಜಾ ಸಮೇತ ರಾಜ ಹೃದಯ ಮಿತ್ರನೆ 1 ಶಂಕರಾದಿ ಹೃದಯವಾಸ ಪಂಕಜಾನನ ಲಂಕಾನಗರ ಸಂಕಟಾರ್ತಿ ಶಂಕರಾಯ ಮಾಣ ದೇವ 2 ಕಾನನಾ ವಿನೋದ ಶ್ರೀದ ವಾನರಾದಿ ಗೀಯಮಾನ 3
--------------
ಬೇಟೆರಾಯ ದೀಕ್ಷಿತರು
ಮರತ್ಯಾಕೊ ಹರಿಯೆ ಮರಗುವೆನಾ ಕರುಣ ಬಾರದೆ ಪ ಸಿರಿಗೆ ಭ್ರಮಿಸಿ ಸರಸ ಸುಖದಿ ಮರೆತು ಇರುವೆಯಾ ಬರುವ ಮುಡುಪಿನ್ಹಣವನೆಣಿಸಿ ದಣಿದು ಮರತಿಯಾ 1 ತ್ರಾಣ ಕಳದಿ ಹಣವ ಸೆಳದಿ ಮನವ ದಣಿಸಿದಿ ಕಣ್ಣೀರಲಿ ಕೈ ತೊಳೆಸಿದಿ ಗುಣ ಗಣ ಮಣಿಯೇ2 ನಿನಗೆ ಆಟ ಎನಗೆ ಹರಿಯೇ ಪ್ರಾಣ ಸಂಕಟಾ ಅನುಭವಿಸಲಾರೆನಕಟಾ ಪಾಹಿ ವೆಂಕಟಾ 3 ಹರಿಯೆ ನೀನು ಗಿರಿಯೊಳು ನಿಂತಿರುವದ್ಯಾತಕೊ ಸ್ಮರಿಸುವವರ ಪೊರೆವುದಕೊ ಧನ ಸೆಳೆವುದಕೊ 4 ಇಟ್ಟರಿಡು ನೀ ಘಟ್ಟಿ ಭಕುತಿ ಕೊಟ್ಟ ನಿನ್ನೋಳು ಧಿಟ್ಟ ಶ್ರೀ ಹನುಮೇಶವಿಠಲ ಥಟ್ಟನೇ ದಯದಿ 5
--------------
ಹನುಮೇಶವಿಠಲ
ಹೃತ್ಪದ್ಮದೊಳಿದ್ದು ಹೃತ್ತಾಪಗಳ ಕಳೆಯೊ ಜೀ- ವತ್ಪಿತಾಮಹ ಜನಕನೇಪ ಮೃತ್ಪಿಂಡದಂತೆನ್ನ ಉತ್ಪತ್ತಿಗೆ ಕ- ಣ್ಣೆತ್ತಿ ನೋಡಲರಿಯಾ ಜೀಯಾ ಅ.ಪ ನಿತ್ಯ ನಿತ್ಯ ಜಗವೆಲ್ಲವು ನಿತ್ಯವು ನಿತ್ಯತ್ವವೆಲ್ಲ ಸರಿಯೇ ಏನಿದ್ದರೇನು ಅನಾದಿಕರ್ಮದ ಬವಣೆ ಬೆನ್ನಟ್ಟಿ ಬರುತಿರ್ಪುದ- ಜ್ಞಾನಾಂಧಕಾರದಿಂ ಧ್ಯಾನವನು ತಿಳಿಯದೇ ಕಾನನದೊಳಿಪ್ಪೆನೋ ಜ್ಞಾನಗಮ್ಯನೆಂದು ಸಾರುತಿದೆ ಶ್ರುತಿ ಶಾಸ್ತ್ರ ಜ್ಞಾನಗುರು ದೊರೆತಿಲ್ಲವೋ ಸಾನುರಾಗದಿ ನೀನೆ ಸಾಧನಕೆ ಕರುಣಿಸಿ ಧ್ಯಾನದಲಿ ಮನಸು ನಿಲಿಸೋ ಉಳಿಸೋ 1 ಬಂಧ ಮೋಕ್ಷಕೆ ಎಲ್ಲ ಮನವೆ ಕಾರಣವೆಂದು ಎಂದೆಂದಿಗು ಪೇಳುತಿಹರು ಸಿಂಧುಶಯನನೆ ಭವಬಂಧಮೋಚಕನೆಂದು ವಂದಿಸಿ ಪೊಗಳುವರೊ ಮಂದರೊದ್ಧರ ನಿನ್ನ ಮಂದಮತಿಯಿಂದಲಿ ವಂದಿಸಲು ನಾನರಿಯೆನೊ ಕಂದರ್ಪಜನಕ ನೀ ಮಂದಭಾಗ್ಯನ ಮನವ ನೋಯಿಸದೆ ನಿನ್ನ ಪದದಲ್ಲಿರಿಸೊ ಅಂದೆ ಎನ್ನಯ ಭವಬಂಧನಾಶವಾಗುವು- ದೊಂದೆ ನಿನ್ನನು ಬೇಡುವೆನೊ ಜೀಯ 2 ಜೀವರೆಲ್ಲರು ಗುಣತ್ರಯಾವರಣದಿಂದ ಕರ್ಮ- ಪ್ರವಹದೊಳಿಪ್ಪರೊ ಕವಿಸಿ ಮೋಹವ ನೀನು ಭವಕೆ ಕಾರಣವಹುದು ದೇವೇಶ ನಿನ್ನಾಟವೋ ಶ್ರವಣದಿಂದಲಿ ಭವಬಂಧಮೋಚಕನೆಂದು ತವ ಬಿರುದು ಸಾರುತಿದೇಕೋ ಭಾವ ಬಲ್ಲವರಾರೋ ಕಾವ ಕರುಣಿ ನೀನೆ ಭಾವಜನ ಪಿತನು ಅದೇ ಭವಪಾಶ ಬಿಡಿಸೆ ನಾ ಭಕುತಿಪಾಶದಿಂದ ಪಾದ ಬಿಗಿವೆನಯ್ಯ ಜೀಯ 3 ಸ್ವಾತಂತ್ರ್ಯವೆಲ್ಲಿಹುದು ಸ್ವಾಮಿತ್ವವೆಲ್ಲಿಹುದು ಅ- ಸ್ವತಂತ್ರನಾಗಿಪ್ಪೆನೊ ಕಾತುರದಿ ನಾ ಮಾಳ್ಪ ಕ್ರಿಯೆಗಳೆಲ್ಲವು ಎನ್ನ ಸ್ವಾತಂತ್ರ್ಯವೆಂದ್ಹೇಳುವೆ ನೀ ತಂತ್ರಿಯಾಗಿದ್ದೆನ್ನ ನಡೆಸುವುದನರಿಯೆ ಕು- ತಂತ್ರವನು ನಾ ಮಾಡುವೆ ಸ್ವಾ- ತಂತ್ರನು ನೀನು ಸೂತ್ರನಾಮಕ ದೇವ ಮಂತ್ರಿಯಾಗೀದೇವ ಯಂತ್ರ ನಡೆಸುವ ಎಂತಾದರಡಿಗಡಿಗೆ ಅತಂತ್ರನಾಗಿಹೆ ನಾನೇ ಭ್ರಾಂತಿಪರಿಹರಿಸಿ ಕಾಯೊ ಶೌರೇ 4 ಭಕ್ತಿ ಇಲ್ಲದೆ ನಿನ್ನ ಭಕ್ತನಾಗುವುದೆಂತೋ ಭುಕ್ತಮಾತ್ರನು ನಾನು ಮುಕ್ತರೊಡೆಯ ನೀನು ಯುಕ್ತಿತೋರಿಸು ಎನಗೆ ಭಕ್ತಾಪರಾಧಸಹಿಷ್ಣು ಶಕ್ತ ನೀನಹುದೊ ವೇದೋಕ್ತ ಮಹಿಮಾತೀತ ಸಕ್ತವಾಗಲಿ ನಿನ್ನ ಪದದಿ ಮನಸು ವ್ಯಕ್ತನಲ್ಲವೊ ಸರ್ವ ಸಾರಭೋಕ್ತನು ನೀನು ಭಕ್ತವತ್ಸಲ ಪುರುಷಸೂಕ್ತಮೇಯ ಅಪ್ರಮೇಯ ಯುಕ್ತಿಮಾತಲ್ಲಿದು ಭಕ್ತಿಪೂರ್ವಕ ನಿನ್ನ ಭಕ್ತ ಶ್ರೇಷ್ಠರ ಸೇವೆ ಕೊಟ್ಟು ರಕ್ಷಿಸೊ ದೇವಾ 5 ನಾದಕ್ಕೆ ಪರನಾಗಿ ವಾದಕ್ಕೆದೊರೆಯೇ ನೀ ವೇದವೇದಾಂತವೇದ್ಯ ಸಾಧನವು ಕಾಣೆ ಸಾಧನಶರೀರವಿದು ಸಾದರದಿ ಕರುಣಿಸಿದೆ ಅನಿರುದ್ಧದೇವ ಬಾಧಿಪುದು ಬಂಧಗಳು ಅನಾದಿಕರ್ಮದಿ ಬಂದು ನಾ ಅಧಮತಮಸಾಧನವನ್ನೆಸಗಿದೆ ನೀ ದಯಾಸಿಂಧು ಎಂದಡಿಗಡಿಗೆ ಬೇಡುವೆನು ಕೃದ್ಧನಾಗದೆ ಇನ್ನು ಉದ್ಧರಿಸು ತಂದೇ ಎಂದೇ 6 ಶಂಖಚಕ್ರಾಂಕಿತನೆ ಮಂಕುಬುದ್ಧಿಯ ಬಿಡಿಸೋ ಅಂಕಿತವೆನಗೆ ಇಲ್ಲ ಅಂಕೆ ಇಲ್ಲವೊ ನಿನ್ನ ನೆನೆಹುದಕೆ ಎಂದಿಗೂ ಶಂಕೆಯ ಪಡುವನಲ್ಲ ವೇಂಕಟಾದ್ರಿಯ ವಾಸ ಶ್ರೀ ವೇಂಕಟೇಶನು ಮಮಕುಲಸ್ವಾಮಿ ದೈವವೆಂದನುದಿನ ಸಂಕಟಾಗಾಮಿಗಳ ಕಂಟಕವ ಹರಿಸಿ ಪದ ಪಂಕಜದಿ ಮನವ ನಿಲ್ಲಿಸೋ ಬಿಂಕದ ಮಾತಲ್ಲ ಪಂಕಜದಳಾಯತಾಕ್ಷ ಅಕ- ಳಂಕಮಹಿಮ ಕಾಯೋ ಜೀಯಾ7
--------------
ಉರಗಾದ್ರಿವಾಸವಿಠಲದಾಸರು