ವೆಂಕಟಾದ್ರಿಯಲ್ಲಿ ಮೆರೆವ ವೆಂಕಟೇಶನು ಪ.
ವೆಂಕಟೇಶನು ನಮ್ಮ ಸಂಕಟಹರನು
ಮಘಮಘಿಸುವ ದಿವ್ಯ ಕಿರೀಟ ಶೋಭನು
ಜಗದೊಳೀತನ ಮಹಿಮೆ ಪೊಗಳಲೊಶವೇ ನಮ್ಮ 1
ಫಾಲ ಕಮಲನೇತ್ರ ಶೋಭನು
ನಾಸಿಕ ಚಂಪಪುಷ್ಪದಂತೆ ಪೊಲ್ವು ನಮ್ಮ 2
ಕಪೋಲ ಕರ್ಣಕುಂಡಲವನು
ಚನ್ನ ಕರ್ಪೂರದ ಕರಡಿಗೆಯನ್ನು ಪೋಲ್ವ ವದನ ನಮ್ಮ 3
ದಂತ ದಾಳಿಂಬಬೀಜದಂತೆ ಪೊಳೆವನು
ಕಂತುಪಿತನ ಮೃದುಜಿಹ್ವೆ ಶಾಂತಮೂರುತಿಯ ಕಂಡೆ 4
ಉಭಯ ಪಾಶ್ರ್ವದ ಭಾಜಕೀರ್ತಿ ಅಭಯಹಸ್ತವು ದೇವ
ಉಭಯ ಪಾಶ್ರ್ವದಿ ಶ್ರೀ ಭೂಸಹಿತ ಭಕ್ತರಿಗಭಯ ಕೊಡುವೊ 5
ಕಮಲ ಹಾರಶೋಭನು
ಶ್ರೀ ಕೃಷ್ಣಂಗೆ ಸಾಲಿಗ್ರಾಮ ಹಾರ ಮೆರೆವೋದ ಕಂಡೆ 6
ಥಳ ಥಳಿಸುವಂಥ ದಿವ್ಯ ಥಳಕಿನ ಹಾರ
ಬೆಳಕಾದ ರತ್ನದ ಪದಕ ವಲಿವ ಏಕಾವಳಿಯ ಕಂಡೆ 7
ಮೆರೆವ ಪೀತಾಂಬರ ವಡ್ವಾಣ್ಯ ಕರಡಿ ಕಂಜರಿಗೆ ಶಲ್ಯ
ಶರಧಿ ಗಂಭೀರನ ಕಂಡೆ 8
ಕಂತುಪಿತ ತನ್ನ ಏಕಾಂತ ಭಕ್ತರ ಶಾಂತ ನೋಟದಿಂದ ನೋಡಿ
ಭ್ರಾಂತಿ ಬಿಡಿಸಿ ಪೊರೆವೊದ ಕಂಡೆ 9
ಭಕ್ತರನ್ನು ಪೊರೆವ ಬಿರುದಿನ ಪಾಡಗ ಧರಿಸಿ
ದಿವ್ಯ ಅಶಕ್ತಜನ ಪೋಷ ಶ್ರೀ ಶ್ರೀನಿವಾಸ ದೊರೆಯ ಕಂಡೆ 10