ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

1. ದೇವದೇವತಾ ಸ್ತುತಿ ಅ) ಶ್ರೀ ಹರಿಯ ಗುಣಗಾನ 1 ಇಕ್ಕೋ ನೋಡೆ ರಂಗನಾಥನ ಚಿಕ್ಕ ಪಾದವ ಪ ಸಿಕ್ಕಿತೆ ಶ್ರೀಲಕ್ಷ್ಮೀಪತಿಯ ದಿವ್ಯ ಪಾದವಅ.ಪ ಕುಲಿಶ ಧ್ವಜರೇಖಾ ಅಂಕಿತ ಪಾದವಪಂಕಜಾಸನನ ಹೃದಯದಲ್ಲಿ ನಲಿಯುವ ಪಾದವಸಂಕಟಹರಣ ವೆಂಕಟೇಶನ ದಿವ್ಯ ಪಾದವ1 ಲಲನೆ ಲಕ್ಷ್ಮಿಯಂಕದಲ್ಲಿ ನಲಿವ ಪಾದವಜಲಜಾಸನನ ಅಭೀಷ್ಟವೆಲ್ಲ ಸಲಿಸುವ ಪಾದವಮಲ್ಲರ ಗೆಲಿದು ಕಂಸಾಸುರನ ಕೊಂದ ಪಾದವಬಲಿಯ ಮೆಟ್ಟಿ ಭಾಗೀರಥಿಯ ಪಡೆದ ಪಾದವ 2 ಉದ್ದಂಡ ಪಾದವಬಂಡಿಲಿದ್ದ ಶಕಟಾಸುರನ ಒದ್ದ ಪಾದವಅಂಡಜ ಹನುಮರ ಭುಜದೊಳೊಪ್ಪುವ ಪಾದವಕಂಡೆÀವೇ ಶ್ರೀರಂಗವಿಠಲನ ದಿವ್ಯ ಪಾದವ 3
--------------
ಶ್ರೀಪಾದರಾಜರು
ಭಗವನ್ನಾಮವನಾಡು ಅಡಿಗಡಿ| ಗಾಡು ಅಡಿಗಡಿಗಾಡು ಅಡಿಗಡಿ ಪ ಭಗವನ್ನಾಮದ ಸುಧೆಯನು ಸೇವಿಸಿ | ಸೊಗದಿಂ ನಲಿನಲಿದಾಡು ಅಡಿಗಡಿ ಅ.ಪ ಪಾಪವ ನೀಗಿ ಪಾವನನಾಗಿ| ಶ್ರೀಪತಿಯನು ಕೂಡ್ಯಾಡು ಅಡಿಗಡಿ 1 ಪಾಮರಗೋಲಿದಾ ರಾಮನ ನಾಮವ | ಪ್ರೇಮದಿ ಮನದೊಳಗಾಡು ಅಡಿಗಡಿ 2 ತರುಣಿಯ ಸೀರೆಗೆ ಅಕ್ಷಯವಿತ್ತ | ಕೃಷ್ಣನ ನಾಮವನಾಡು ಅಡಿಗಡಿ3 ದಾಸಜನರ ಮನದಾಸೆಯ ಸಲಿಸುವ | ವಾಸುದೇವನ ಕೂಡ್ಯಾಡು ಅಡಿಗಡಿ 4 ಇಂಗಿತವೀಯುವ ಮಂಗಳಮಹಿಮ | ರಂಗನ ನಾಮವ ನಾಡು ಅಡಿಗಡಿ 5 ಮರಣಕಾಲದೊಳಜಾಮಿಳಗೊಲಿದಾ | ನಾರಾಯಣ ನೊಡನಾಡು ಅಡಿಗಡಿ 6 ವೆಂಕಟರಮಣನ ಸಂಕಟಹರಣನ | ಕಿಂಕರನಾಗಿ ನೀನಾಡು ಅಡಿಗಡಿ 7
--------------
ವೆಂಕಟ್‍ರಾವ್
ವೆಂಕಟರಮಣ ಮಾಂಪಾಹಿ ಸಂಕಟಹರಣ ಸರ್ವಲೋಕಕಾಧಾರ ಪ ಮತ್ಸ್ಯರೂಪವತಾಳಿ ವೇದಗಳ ರಕ್ಷಿಸಿದೆ ಮತ್ತೆ ಬೆಟ್ಟವ ಪೊತ್ತೆ ಕೂರ್ಮನಾಗಿ ಹೊತ್ತು ಭೂಮಿಯ ಪೊರೆದೆ ವರಾಹಾವತಾರದಲಿ ಬತ್ತಿ ಕಂಬದಿ ಬಂದೆ ನರಸಿಂಹನಾಗಿ ನೀ ಇತ್ತೆ ವರವನು ತುಳಿದು ಬಲಿಯು ನೀಡಲು ತಲೆಯ ವಟುರೂಪಿನಿಂದ ವೆಂಕಟರಮಣ ಮಾಂ ಪಾಹಿ 1 ಹೊತ್ತು ಪರಶುವ ಭುವಿಯ ಕ್ಷಾತ್ರಿಯರನೀ ಕೊಂದೆ ಮತ್ತೆ ರಾಮಾವತಾರದಲಿ ರಾವಣನ ಕೊಂದೆ ನಿತ್ತು ಕಾಪಾಡಿದೆಯೋ ಕೃಷ್ಣ ಪಾಂಡವರನ್ನು ಮತ್ತೆ ಬುದ್ದನರೂಪ ತಾಳಿ ಮೆರೆದೆ ತಾಳಿ ದರುಳ ದುರ್ಜನರನ್ನು ಮೆಟ್ಟಿ ಕುಟ್ಟಿದೆಯೋ ವೆಂಕಟರಮಣ ಮಾಂ ಪಾಹಿ 2 ಬೇಡಿದವರ ಇಷ್ಟಾರ್ಥಗಳನೀವ ಕಾಡಿದ ರಕ್ಕಸರ ಜೀವ ಕೊಳುವ ನೋಡಿ ದಯಮಾಡಿ ನೀಸುಜನರನು ಕಾವ ಆಡಿ ಅಡಗಿಸೋ ನೀನೇ ಮನದ ನೋವ ಗಾಢ ರಕ್ಷಿಸು ಕಡು ಬಾಡಿದೆ ಭಯದಲ್ಲಿ ವೆಂಕಟರಮಣ ಮಾಂ ಪಾಹಿ 3 ವರ ಅಜಾಮಿಳಗೆ ವರವಿತ್ತು ಸಲಹಿದೆಯೋ ಕರಿ ರಾಜ ಬರಲಿದಡೆ ಬಂದು ಕಾಯ್ದೆ ದುರುಳ ಕಾಳಿಂಗನನು ಮೆಟ್ಟಿಕುಣಿದಾಡಿದೆಯೋ ಧರಿಸಿ ಗೋವರ್ಧನವ ಕಾಯ್ದೆಗೋವಳರನ್ನು ವೆಂಕಟರಮಣ ಮಾಂ ಪಾಹಿ 4 ಇಳೆಯೊಳಗೆ ಮೂಡಲಗಿರಿವಾಸನಾಗಿ ನೆಲೆಯ ನರಿದು ಭಜಿಪರ ಪಾಪನಾಶ ಸೂರ್ಯ ಕೋಟಿ ಪ್ರಕಾಶ ಕಲಿಯುಗದೊಳು ನಿನ್ನ ಮಹಿಮೆ ವಿಶೇಷ ಸಲಹೋ ಪಾತಳ ಸೇವೆಯ ಗೆಣಸಿನ ಕುಣಿ ವೆಂಕಟರಮಣ ಮಾಂ ಪಾಹಿ 5
--------------
ಕವಿ ಪರಮದೇವದಾಸರು
ವೆಂಕಟರಮಣನೆ ಸಂಕಟಹರಣನೆ ಶಂಖ ಚಕ್ರ ಪೀತಾಂಬರನೆ ಪ ಪಂಕಜನಾಭನೆ ಪರಮಗೋವಿಂದನೆ ಲಂಕೆ ವಿಭೀಷಣ ನಿಗಿತ್ತವನೇ ಅ.ಪ ಹಿಂದನ ಕರ್ಮದಿನೊಂದೆನು ನಿನ್ನಯ ಕಂದನಮೊರೆಯನು ಲಾಲಿಪುದೂ ಬಂದಿಸಿ ಭವಗಳ ಹೊಂದಿಸೊ ನಿಜಪುರ ಚಂದದೆ ಕ್ಷಿತಿಯೊಳ್ ಪಾಲಿಪುದೂ 1 ಘಾಸಿ ಬಿಡಿಸಿ ನಿಜದಾಸನ ಮಾಡೆಲೊ ಈಶನೆ ಕೇಶವ ಮೂರಿತಯೇ ಆಸೆಯ ತೀರಿಸಬೇಕೈಯಾ ಭವ ನಾಶನೆ ಪಾರ್ಥವ ಸಾರಥಿಯೆ 2 ಪರಿಪರಿ ಭವಗಳ ಹರಿಯುವನೆನ್ನುತಾ ಕರದೊಳು ಕಂಕಣ ಕಟ್ಟಿರುವೇ ಮೊರೆ ಬಿದ್ದೆನು ಶ್ರೀ ತುಲಸೀರಾಮನ ಸ್ಮರಣೆಯ ಹೃದಯದೊಳಿಟ್ಟರುವೆ 3
--------------
ಚನ್ನಪಟ್ಟಣದ ಅಹೋಬಲದಾಸರು