ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಿಹರಿಸು ದಯಾನಿಧಿ ಶರಣರ ಸಂಕಟವಾ ಧರೆಯ ತಳದಿ ನಾ ಪರಮಧೀನನು ಮರೆಯದಿಯೋ ಪದವಾ ಪ ಜಲದೊಳಗೆ ಪೊಕ್ಕರೂ ನಿನ್ನ ಬಿಡುವನಲ್ಲಾ ಬಲುಬೆಟ್ಟದ ಬುಡದೊಳು ಕುಳಿತರು ಪಿಡಿವೆನಲ್ಲಾ ನೆಲವಿಡಿದು ಕೋರೆಯಲಿ ತೋರ್ದರು ಅರಿವೆನಲ್ಲಾ ಗಲವರೆಗೆ ಸಿಂಹಮೊಗ ಧರಿಸಿದರೂ ಸರಿ ಬೆಚ್ಚಿ ಬೆವರೋನಲ್ಲಾ 1 ಸರಿ ತಿರಕನಂತೆ ನೀ ತಿಳಿದರೂ ಬಿಡುವನಲ್ಲಾ ಕರತಳದಿ ಕೊಡಲಿಯ ಪಿಡಿದರೂ ಸರಿವನಲ್ಲಾ ನೆರೆ ಧರಿಸಿ ಜಟವನ ಪೊಕ್ಕರೂ ಬಿಡುವನಲ್ಲಾ ಕರದಿ ಚಕ್ರವ ಪಿಡಿದು ತೋರಲೆಂದೆಂದಿಗುಜ್ವಲನಲ್ಲಾ 2 ವಸನಗಳಿಲ್ಲದೆ ನುಸುಳನರಿದೆನಲ್ಲಾ ಎಸೆವ ಸಮತುರಗವೇರಿ ಪೋಗಲು ಬಿಡುವನಲ್ಲಾ ದಶರೂಪಿ ನಿನ್ನನು ಬಿಡುವ ಶರಣನಲ್ಲಾ ಕುಸುಮನಾಭ ಶಿರಿ ನರಸಿಂಹವಿಠ್ಠಲ ಆಲಿಸೆನ್ನ ಸೊಲ್ಲಾ 3
--------------
ನರಸಿಂಹವಿಠಲರು