ಎಂಥಾದಯವಂತನೋ ಸಂತಾರನಾಥನೋ ಪ
ಕಂತೂ ಜನಕಾನ ಪ್ರಿಯ್ಯಾನೋ ಆ -
ನಂತಾ ನಂತಾ ಮಹಿಮನೋ ಅ.ಪ
ರಮ್ಯಾ ಗುಣಾ ಪೂರ್ಣನೋ - ಆ -
ಗಮ್ಯಾ ಸಚ್ಚರಿತಾನೋ
ನಮ್ಯಾನತರಾ ಪೊರೆವಾನೋ - ಈತ
ನಮ್ಯಲ್ಲಾರ ಸಲಹೋನೋ 1
ಪ್ರಾಣಾವೇಶಾಯುತನೋ - ಜಗ -
ತ್ರಾಣಾ ತಾನಾಗಿಹನೋ
ಕ್ಷ್ಯೋಣೀಯೋಳ್ವಿಖÁ್ಯತಾನೋ - ಎನ್ನ
ಪ್ರಾಣಾUಳಿಗೆ ನಾಥನೋ 2
ಕರುಣಾಶಾಲಿ ಎನಿಪಾನೋ - ತನ್ನ
ಚರಣಾ ಸೇವಾ ನೀಡುವನೋ
ಶರಣಾಬ್ಜ - ತರಣೀ ಸÀಮನೋ - ಅಂತಃ
ಕರಣಾದಲ್ಲಿರುವಾನೋ 3
ಜನನೀ ಜನಕಾರೆನಿಪನೋ - ಸಕಲ
ಜನರೀಗೆ ಸಮ್ಮತನೋ
ಜನುಮಾ ಜನುಮದಲೀತನೋ - ನಿಶ್ಚಯ
ಎನಗೆ ತಾತನೋ 4
ಭೂತಾಳದೊಳು ವಿಖ್ಯಾತನೋ ನಿಜ -
ದಾತಾ ಜನರಿಗೆ ಪ್ರೀತನೋ
ನೀತಾ ಗುರು ಜಗನ್ನಾಥಾ ವಿಠಲ -
ಪ್ರೀತಿಯ ತಾಪೊಂದಿಹನೋ 5